Advertisement

ರಂಗನಾಥ ಸ್ವಾಮಿ ಬೆಟ್ಟದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

05:44 PM Feb 02, 2020 | Suhan S |

ಕುದೂರು: ಸೂರ್ಯ ಪಥ ಬದಲಾಯಿಸಿದ್ದಾನೆ ಎಂಬುದು ವಿಜ್ಞಾನದ ನಿಖರ ಉತ್ತರ. ಅದನ್ನು ಭಾವನಾತ್ಮಕವಾಗಿ ಸ್ವೀಕರಿಸುವ ಭಾರತೀಯ ಮನಸ್ಸುಗಳಿಗೆ ಜಗತ್ತಿನ ಒಳಿತಿಗೆ ಕತ್ತಲು ಕಡಿಮೆ ಮಾಡಿ ಬೆಳಕು ಹೆಚ್ಚು ಮಾಡುವ ದಿನವಿದು ಎಂದು ಕೆಂಗೇರಿ ಮಠದ ಕುಮಾರ ಚಂದ್ರಶೇಖರ ಸ್ವಾಮೀಜಿ ಹೇಳಿದರು.

Advertisement

ಸೋಲೂರು ಹೋಬಳಿ ತಟ್ಟೆಕೆರೆ ಗ್ರಾಮದ ರಂಗನಾಥ ಸ್ವಾಮಿ ಬೆಟ್ಟದಲ್ಲಿ ರಥಸಪ್ತಮಿ ಪ್ರಯುಕ್ತ ಏರ್ಪಡಿಸಿದ್ದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದರು.

ದೇವಾಲಯದ ಎದುರು ಇರುವ ಕಲ್ಯಾಣಿ ದೇವಾಲಯದ ಪ್ರಾಂಗಣದ ಸೊಬಗನ್ನು ಹೆಚ್ಚಿಸಿದೆ. ದೇವಾಲಯದ ರಾಮಾನುಜಾ ಚಾರ್ಯರ ಪ್ರತಿಮೆ, ಗರುಡ ದೇವರ ಪ್ರತಿಮೆ, ಹಾಗೂ ಶ್ರೀ ಲಕ್ಷ್ಮೀ ದೇವರ ಪ್ರತಿಮೆಗಳು ಜನಮನಸೊರೆಗೊಳ್ಳುತ್ತವೆ. ಅಲ್ಲದೆ ದೂರ್ವಾಸ ಮುನಿಗಳು ತಪಸ್ಸು ಆಚರಿಸಿದರು ಎಂಬ ಪ್ರತೀತಿಯೂ ಇದೆ ಎಂದು ತಿಳಿಸಿದರು,

ಅರ್ಚಕ ರಂಗಸ್ವಾಮಿ. ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋವಿಂದ ರಾಜು, ದೇವಾಲಯಗಳಲ್ಲಿ ಮಂಗಳ ಕಾರ್ಯ ನಡೆಯುವುದು ಲೋಕಕಲ್ಯಾಣಾರ್ಥವಾಗಿ. ಇಲ್ಲಿ ಜಾತಿ, ಧರ್ಮ,ಬೇಧವಿಲ್ಲದೆ ಧಾರ್ಮಿಕ ಕಾರ್ಯಕ್ರಮ ಗಳನ್ನು ಆಚರಿಸಲಾಗುತ್ತಿದ್ದು ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next