ಕಾಳಗಿ: ನೂತನ ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ಸೋಮವಾರ ಪ್ರಥಮ ಬಾರಿ ಹಮ್ಮಿಕೊಂಡ ತಾಲೂಕು ಮಟ್ಟದ ಬಸವ ಜಯಂತಿ ಉತ್ಸವ ನಿಮಿತ್ತವಾಗಿ ರವಿವಾರ ರೇವಗ್ಗಿ ರೇವಣಸಿದ್ಧೇಶ್ವರ ಗುಡ್ಡದಿಂದ ದಕ್ಷಿಣಕಾಶಿ ಕಾಳಗಿಯ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ವರೆಗೆ ಬೃಹತ್ ಕಾರ್ ರ್ಯಾಲಿ ನಡೆಯಿತು.
ರವಿವಾರ ರೇವಗ್ಗಿ ರೇವಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ತಪಸ್ವಿ ರೇವಸಿದ್ಧೇಶ್ವರ ಪವಿತ್ರ ಜ್ಯೋತಿಯೊಂದಿಗೆ ಹಮ್ಮಿಕೊಂಡಿದ್ದ ಕಾರು ರ್ಯಾಲಿಗೆ ಸೂಗುರ (ಕೆ) ಪೂಜ್ಯ ಡಾ| ಚನ್ನರುದ್ರಮುನಿ ಶಿವಾಚಾರ್ಯರು, ರಟಕಲ್‌ನ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಪೂಜ್ಯ ಸಿದ್ಧರಾಮ ದೇವರು ಚಾಲನೆ ನೀಡಿದರು.
ರ್ಯಾಲಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ್ದು ರೇವಗ್ಗಿ ಗುಡ್ಡದಿಂದ ಪ್ರಾರಂಭವಾದ ಕಾರ್ ರ್ಯಾಲಿ ಕಂದಗೂಳ ಕ್ರಾಸ್, ರಟಕಲ್, ಕಂಚನಾಳ ಕ್ರಾಸ್, ಕೋಡ್ಲಿ ಕ್ರಾಸ್ ಮೂಲಕ ಕಾಳಗಿಯ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ತಲುಪಿ ಕಾಳೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಗುಡ್ಡದಿಂದ ತಂದಿರುವ ಜ್ಯೋತಿಯನ್ನು ಬೆಳಗಿಸಲಾಯಿತು. ಮೆರವಣಿಗೆಯುದ್ದಕ್ಕೂ ಕಾರುಗಳಿಗೆ ಬಸವೇಶ್ವರ ಧ್ವಜಗಳು ಕಟ್ಟಿದ್ದು ಆಕರ್ಷಣೀಯವಾಗಿತ್ತು.
ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಮಲ್ಲಿನಾಥ ಪಾಟೀಲ, ಅಧ್ಯಕ್ಷ ಮಲ್ಲಿನಾಥ ಕೋಲಕುಂದಿ, ಪ್ರಮುಖರಾದ ಸಂತೋಷ ಪಾಟೀಲ ಮಂಗಲಗಿ, ಶಿವರಾಜ ಪಾಟೀಲ ಗೊಣಗಿ, ಶರಣು ಮಜ್ಜಗಿ, ಶೇಖರ ಪಾಟೀಲ, ಜಗದೀಶ ಪಾಟೀಲ, ರಾಜು ಶಿಳಿನ್, ಶಿವರಾಜ ಹೆಬ್ಬಳ, ಮಂಜುನಾಥ ಭೈರಾನ, ರೇವಣಸಿದ್ಧ ಬಡಾ, ವಿಷ್ಣುಕಾಂತ ಪರುತೆ, ರೇವಣಸಿದ್ಧ ಕುಡ್ಡಳ್ಳಿ, ಶರಣು ಕೇಶ್ವರ, ಆನಂದ ಜಂಬಗಿ, ನಾಗರಾಜ ಚಿಕ್ಕಮಠ, ಬಸವರಾಜ ಕೊಲಕುಂದಿ, ರವಿ ಬಿರೆದಾರ, ಶರಣು ಬಿರೆದಾರ, ಮಲ್ಲು ಮಳಗಿ, ಬಂಡಪ್ಪ ಬೊಮ್ಮಾಣಿ, ಸಂತೋಷ ಕುಡ್ಡಳ್ಳಿ, ವಿಜಯಕುಮಾರ ಚೆಂಗಟಿ, ವಿರೇಶ ಕಮಲಾಪುರ, ವೇದಪ್ರಕಾಶ ಮೋಟಗಿ, ಶಿವಕುಮಾರ ಕಮಲಾಪುರ, ಶಿವುಕುಮಾರ ಕೊಡಸಾಲಿ, ಪ್ರಶಾಂತ ಕದಂ, ರಮೇಶ ಕಿಟ್ಟದ ಹಾಗೂ ಇನ್ನಿತರರು ಇದ್ದರು.