Advertisement
ಭವಾನಿ ಫೌಂಡೇಶನ್ ವತಿಯಿಂದ ಸಿಬಿಡಿ ಬೇಲಾಪುರ ಸೆಕ್ಟರ್ 15ರಲ್ಲಿರುವ ಟೈಮ್ಸ… ಸ್ಕೋರ್‌ನಲ್ಲಿ ಜೂ. 18ರಂದು ಜರಗಿದ ಬೃಹತ್ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ, ಬಡವರ, ದೀನ ದಲಿತರ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆಗೆ ಎಲ್ಲರ ಸಹಾಯ, ಪ್ರೋತ್ಸಾಹ ಅಗತ್ಯವಾಗಿದೆ. ಕೆ. ಡಿ. ಶೆಟ್ಟಿ ಅವರು ಉದ್ಯಮಿಯಾಗಿ, ಸಮಾಜ ಸೇವಕರಾಗಿ, ದಾನಿಯಾಗಿ ಮಾಡುತ್ತಿರುವ ಸೇವೆ ಅಪಾರವಾಗಿದೆ ಎಂದು ಶುಭ ಹಾರೈಸಿದರು.
Related Articles
Advertisement
ಭವಾನಿ ಫೌಂಡೇಶನ್‌ನ ವಿಶ್ವಸ್ತ ಧರ್ಮಪಾಲ್ ದೇವಾಡಿಗ ಮಾತನಾಡಿ, ಕಳೆದ ಏಳು ವರ್ಷಗಳಿಂದ ಭವಾನಿ ಫೌಂಡೇಶನ್ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸಹಿತ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣವಾಗಿ ಕಂಗೊಳಿಸುತ್ತಿದೆ ಎಂದರು.
ಭವಾನಿ ಫೌಂಡೇಶನ್‌ನ ವಿಶ್ವಸ್ತ ದೀಕ್ಷಿತ್ ಕೆ. ಶೆಟ್ಟಿ ಮಾತನಾಡಿ, ಭವಾನಿ ಫೌಂಡೇಶನ್‌ನ ಸರ್ವಸದಸ್ಯರ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹದಿಂದ ಸಮಾಜಪರ ಕಾರ್ಯ ಮಾಡುವಲ್ಲಿ ಸಹಾಯ ವಾಗುತ್ತಿದೆ. ವರ್ಷಕ್ಕೆರಡು ಬಾರಿ ನಡೆಯುವ ರಕ್ತದಾನ ಶಿಬಿರದಲ್ಲಿ ಫೌಂಡೇಶನ್‌ನ ಎಲ್ಲ ಕಾರ್ಯಕರ್ತರು ರಕ್ತದಾನ ಮಾಡುತ್ತಿದ್ದಾರೆ. ಯಾವುದೇ ಕೆಲಸದಲ್ಲಿ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿರುವುದು ನಮಗೆ ಉತ್ತೇಜನ ನೀಡಿದಂತಾಗಿದೆ ಎಂದರು.
ಸರಿತಾ ಕೆ. ಶೆಟ್ಟಿ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಶಿಖಾ ಪ್ರಜ್ವಿತ್ ಶೆಟ್ಟಿ ಅತಿಥಿಗಳಿಗೆ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ದಿನೇಶ್ ಎಸ್. ಶೆಟ್ಟಿ, ಕೋಶಾಧಿಕಾರಿ ಕರ್ನೂರು ಮೋಹನ್ ರೈ ಹಾಗೂ ಭವಾನಿ ಫೌಂಡೇಶನ್‌ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭವಾನಿ ಫೌಂಡೇಶನ್‌ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಗೈದು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಕೆ. ಡಿ. ಶೆಟ್ಟಿಯವರಂತಹ ಸಮಾಜಪರ ಕಾಳಜಿ ಇರುವ ಉದ್ಯಮಿ ಎಲ್ಲರಿಗೂ ಮಾದರಿ. ತನ್ನ ಸಂಪಾದನೆಯಲ್ಲಿ ಒಂದಷ್ಟು ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸಿ ಅಸಹಾಯಕರ ಕಣ್ಣೀರೊರೆಸುವ ಕೆಲಸವನ್ನು ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ಭವಾನಿ ಫೌಂಡೇಶನ್ ಮೂಲಕ ಮಾಡುತ್ತಿರುವುದು ಅಭಿನಂದನೀಯ. ಅದೆಷ್ಟೋ ಜನರ ಬಾಳಿಗೆ ಬೆಳಕನ್ನು ನೀಡುವ ಕಾರ್ಯ ಮಾಡುತ್ತಿರುವ ಕೆ. ಡಿ. ಶೆಟ್ಟಿಯವರು ನಮಗೆಲ್ಲರಿಗೂ ಪ್ರೇರಣೆ.-ಶಾಂತಾರಾಮ್ ಬಿ. ಶೆಟ್ಟಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ
ತಾಯಿಯ ಹೆಸರಿನಲ್ಲಿ ಅವರ ಪ್ರೇರಣೆಯಿಂದ ಸ್ಥಾಪಿಸಲಾದ ಭವಾನಿ ಫೌಂಡೇಶನ್ ಇಂದು ಜಗದಗಲ ಜನಪರ ಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ಎಲ್ಲ ಸದಸ್ಯರು ಒಂದೇ ಪರಿವಾರದಂತೆ ಸದಾ ಅಸಹಾಯಕರ ಸೇವೆಯಲ್ಲಿ ತೊಡಗಿದ್ದಾರೆ. ಸಮಾಜಕ್ಕೆ ಬೇಕಾಗಿ ನಮ್ಮ ಫೌಂಡೇಶನ್‌ನ ಮುಖಾಂತರ ಅನೇಕ ಯೋಜನೆಗಳು ನಮ್ಮ ಮುಂದಿದ್ದು, ಅದು ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುವ ರಕ್ತದಾನ ಶಿಬಿರದಲ್ಲಿ ಭವಾನಿ ಫೌಂಡೇಶನ್‌ನ ಎಲ್ಲ ಸದಸ್ಯರು ಭಾಗವಹಿಸಿ ರಕ್ತದಾನ ಮಾಡುತ್ತಿರುವುದು ಅಭಿನಂದನೀಯ. ಸಂಸ್ಥೆಯ ಸಮಾಜಪರ ಕಾರ್ಯಗಳ ಯಶಸ್ಸಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು.-ಕುಸುಮೋಧರ ಡಿ. ಶೆಟ್ಟಿ ಅಧ್ಯಕ್ಷರು, ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ
-ಚಿತ್ರ-ವರದಿ: ಸುಭಾಷ್ ಶಿರಿಯ