Advertisement

Kampli- ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು

11:11 AM Oct 13, 2024 | Team Udayavani |

ಕಂಪ್ಲಿ: ಕಂಪ್ಲಿ- ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಸುಮಾರು 85 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಕಂಪ್ಲಿ- ಕೋಟೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ಮುಳುಗುವ ಹಂತ ತಲುಪಿದೆ.

Advertisement

ಸೇತುವೆ ಮೇಲೆ ನೀರು ಬರಲು ಕೇವಲ ಅರ್ಧ ಅಡಿ ಮಾತ್ರ ಬಾಕಿಯಿದ್ದು, ಯಾವುದೇ ಕ್ಷಣದಲ್ಲಾದರೂ ಸೇತುವೆ ಮೇಲೆ ನೀರು ಹರಿಯಲಿರುವುದರಿಂದ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳ್ಳಲಿದ್ದು, ಕಂಪ್ಲಿ- ಗಂಗಾವತಿ ಸಂಚಾರ ಬಂದ್ಾಗಲಿದ್ದು 2 ಭಾಗದ ಸಾರ್ವಜನಿಕರಿಗೆ ತೊಂದರೆಯಾಗಲಿದೆ.

ಕಳೆದ ಜುಲೈ ಮತ್ತು ಆಗಷ್ಟ್ ನಲ್ಲಿ ಸುಮಾರು 20ಕ್ಕೂ ಅಧಿಕ ದಿನ ಸೇತುವೆ ಮೇಲೆ ನೀರು ಹರಿದಿದ್ದರಿಂದ ಸೇತುವೆಯ 2 ಬದಿಗಳ ರಕ್ಷಣಾ ಕಂಬಿಗಳು ಕಿತ್ತು ಹೋಗಿ ಸಂಚಾರ ಸ್ಥಗಿತಗೊಂಡು ನೌಕರರು,‌ ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದರು.

ಇದೀಗ ಮತ್ತೊಮ್ಮೆ ಸೇತುವೆ ಮೇಲೆ ನೀರು ಬರುತ್ತಿರುವುದರಿಂದ ಮತ್ತೊಮ್ಮೆ ಸಂಚಾರಕ್ಕೆ ಅಡಚಣೆಯಾಗಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗಲಿದೆ.  ದಶಕಗಳ ನಂತರ ಅಕ್ಟೋಬರ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.

Advertisement

ನದಿ ತೀರದ ನಿವಾಸಿಗಳು ಎಚ್ಚರದಿಂದಿರುವಂತೆ ಕಂಪ್ಲಿ ತಹಶೀಲ್ದಾರ್ ಶಿವರಾಜ ಶಿವಪುರ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಕೋಟೆ ನದಿ ತೀರದ ಮೀನುಗಾರ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದರಲ್ಲದೆ ಸಂಭವನೀಯ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕಂದಾಯ, ಪುರಸಭೆ, ಪೊಲೀಸ್, ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು, ನದಿ ತೀರಕ್ಕೆ ಯಾರು ಹೋಗದಂತೆ ತಿಳಿಸಿದರು.

ಕಂಪ್ಲಿ ಕೋಟೆ ಸೇತುವೆ ಬಳಿ ಪುರಸಭೆಯಿಂದ ನಿಗಾ ವಹಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ತಿಳಿಸಿದರು. ಸೇತುವೆ ಬಳಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next