ಯಶೋಗಾಥೆ.
Advertisement
ಭಾರತೀಯ ಮೂಲದ ಫಿರೋಜ್ ಮರ್ಚಂಟ್ ಅಸಾಮಾನ್ಯ ಸಾಧನೆ ಮೂಲಕ ಯುವ ಉದ್ಯಮಿಗಳಿಗೆ ಪ್ರೇರಕರಾಗಿದ್ದಾರೆ. ಟೈಕಾನ್ ಸಮ್ಮೇಳನದಲ್ಲಿ ತಮ್ಮ ಯಶಸ್ಸಿನ ಹಾದಿಯನ್ನು ಮೆಲುಕು ಹಾಕಲಿದ್ದಾರೆ. ಎರಡೂವರೆ ದಶಕಗಳಿಂದ “ಪ್ಯೂರ್ ಗೋಲ್ಡ್’ ಸೇರಿದಂತೆ ಬೃಹತ್ ಉದ್ಯಮ ಸಮೂಹ ನಿರ್ಮಿಸಿ ಮುನ್ನಡೆಸುತ್ತಿರುವ ಫಿರೋಜ್ಗಲ್ಫ್ ಕೋ-ಆಪರೇಶನ್ ಕೌನ್ಸಿಲ್ (ಜಿಸಿಸಿ), ಏಷ್ಯಾ, ಏಷ್ಯಾ-ಪೆಸಿμಕ್ ವಲಯಗಳಲ್ಲೂ ಉದ್ಯಮ ಸಂಪರ್ಕ ಜಾಲ ಹೊಂದಿದ್ದಾರೆ.
ಫಿರೋಜ್ ಮರ್ಚಂಟ್ ತಂದೆ ನಡೆಸುತ್ತಿದ್ದ ರಿಯಲ್ ಎಸ್ಟೇಟ್ ವಹಿವಾಟು ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅವರಿಗೆ ನೆರವಾಗಲು 11ನೇ ವಯಸ್ಸಿನಲ್ಲಿ ಶಿಕ್ಷಣಕ್ಕೆ ಗುಡ್‌ಬೈ ಹೇಳಿ, ವಹಿವಾಟು ಸುಧಾರಿಸಿದ್ದರು. ಫಿರೋಜ್
ಹನಿಮೂನ್‌ಗೆಂದು ದುಬೈಗೆ ಹೋಗಿದ್ದಾಗ, ಅಲ್ಲಿನ ಚಿನ್ನಾಭರಣ ವಹಿವಾಟು ಅವರನ್ನು ಸೆಳೆದಿತ್ತು. ಭಾರತಕ್ಕೆ ಮರಳಿದ ಮೇಲೆ ದುಬೈನಲ್ಲಿ ಚಿನ್ನಾಭರಣ ವಹಿವಾಟು ಆರಂಭಿಸುವ ಬಗ್ಗೆ ತಂದೆ ಮುಂದೆ ಪ್ರಸ್ತಾಪಿಸಿದ್ದರು.
1986ರಲ್ಲಿ ಒಂದಿಷ್ಟು ಹಣದೊಂದಿಗೆ ದುಬೈಗೆ ತೆರಳಿದ್ದ ಫಿರೋಜ್ ಕನಿಷ್ಠ ಕಮೀಷನ್ ಆಧಾರದಲ್ಲಿ ಚಿನ್ನದ ಬ್ರೋಕರ್ ವೃತ್ತಿ ಆರಂಭಿಸಿದ್ದರು. 3 ವರ್ಷಗಳಲ್ಲಿ (1989ರಲ್ಲಿ) ದುಬೈನಲ್ಲಿ ಸ್ವಂತದ ಪ್ಯೂರ್ ಗೋಲ್ಡ್ ಚಿನ್ನಾಭರಣ ಮಳಿಗೆ ಆರಂಭಿಸಿದರು. ಎರಡೂವರೆ ದಶಕಗಳ ಅವಧಿಯಲ್ಲಿ ಬಹುರಾಷ್ಟ್ರೀಯ ಚಿನ್ನಾಭರಣ ವಹಿವಾಟು ಹೊಂದಿದ ಕೀರ್ತಿ ಸಂಪಾದಿಸಿದರು.
Related Articles
Advertisement
11 ದೇಶಗಳಿಗೆ ವಿಸ್ತರಿಸಿದ ಉದ್ಯಮ: 1981ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಗಲ್ಫ್ ಕೋ-ಆಪರೇಶನ್ ಕೌನ್ಸಿಲ್ ಸದಸ್ಯ ರಾಷ್ಟ್ರಗಳಲ್ಲಿ ಪ್ಯೂರ್‌ಗೊàಲ್ಡ್ ಉದ್ಯಮ ಸಮೂಹ ತನ್ನ ವಹಿವಾಟು ಹೊಂದಿದೆ. ಭಾರತ, ಯುಎಇ, ಜೋರ್ಡಾನ್, ಒಮನ್, ಕತಾರ್, ಬಹರೇನ್, ಕುವೈತ್, ಸೌದಿ ಅರೇಬಿಯಾ, ಫ್ರಾನ್ಸ್, ಶ್ರೀಲಂಕಾ ಹಾಗೂ ಸಿಂಗಾಪುರಗಳಲ್ಲಿ ಸುಮಾರು 125 ಮಾರಾಟ ಮಳಿಗೆಗಳನ್ನು ಹೊಂದಿದೆ.
2018ರ ವೇಳೆಗೆ ವಿಶ್ವದಾದ್ಯಂತ 300 ಮಳಿಗೆ ಹೊಂದುವ ಉದ್ದೇಶವಿದೆ. ಭಾರತ, ಚೀನಾದಲ್ಲಿ ಚಿನ್ನಾಭರಣ ತಯಾರಿಕಾ ಕಾರ್ಖಾನೆ ಹೊಂದಿದ್ದು, 3,500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಚಿನ್ನಾಭರಣಗಳೊಂದಿಗೆ ವಜ್ರಾಭರಣ ಹಾಗೂ ಸನ್ ಗ್ಲಾಸ್ ವಹಿವಾಟನ್ನೂ ಸಂಸ್ಥೆ ನಡೆಸುತ್ತಿದೆ.
ಪ್ಯೂರ್ ಗೋಲ್ಡ್ ಕಂಪನಿ 2008ರಿಂದ 2015ರ ವರೆಗೆ 6 ಬಾರಿ “ಅತ್ಯುತ್ತಮ ಸೇವಾ ಸಾಧನೆ ಬ್ರಾಂಡ್’ ಪ್ರಶಸ್ತಿ ಪಡೆದಿದೆ. 2014ರಲ್ಲಿ ಜಿಸಿಸಿಯ ಮೊದಲ ಮತ್ತು ಏಕೈಕ ಜ್ಯುವೇಲರಿ ರಿಟೇಲರ್ ಸ್ಥಾನ ಪಡೆದಿದೆ. ಭಾರತವೂ ಈ ಸಂಸ್ಥೆಗೆ ವಿಶ್ವ ಡೈಮಂಡ್ ಮಾರ್ಕ್ ಪ್ರಶಸ್ತಿ ನೀಡಿದೆ. ಫೋಬ್ಸ್ì ಮಧ್ಯ ಏಷ್ಯಾ ಪಟ್ಟಿಯಲ್ಲಿ ಭಾರತೀಯ ಮಾಲೀಕರ ವಿಭಾಗದಲ್ಲಿ 25ನೇ ಸ್ಥಾನ ಪಡೆದಿದ್ದು, ಜಿಸಿಸಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನ ಪಡೆದಿದ್ದಾರೆ.
ಸಂಕಷ್ಟದಲ್ಲಿ ನೆರವು: ಪ್ರಾಕೃತಿಕ ವಿಕೋಪ ಮುಂತಾದ ಸಂಕಷ್ಟ ಪರಿಸ್ಥಿತಿಗಳಲ್ಲಿ μರೋಜ್ ಮರ್ಚಂಟ್ ವಿವಿಧ ದೇಶಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಭಾರತ, ಶ್ರೀಲಂಕಾ, μಲಿಪೈನ್ಸ್, ಇಂಡೋನೇಷಿಯಾ, ಮ್ಯಾನ್‌ಮಾರ್, ಮಾಲ್ಡೀವ್ಸ್, ಜರ್ಮನಿ ಮುಂತಾದ ದೇಶಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 2015ರ ಪ್ರವಾಹಸಂದರ್ಭದಲ್ಲಿ ನಿರಾಶ್ರಿತರಿಗೆ ಹೊದಿಕೆ ಹಂಚುವ ಜತೆಗೆ 1.70 ಲಕ್ಷ ಡಾಲರ್ ನೆರವು ನೀಡಿದ್ದಾರೆ. ತಮಿಳುನಾಡಿನ ಪ್ರವಾಹ ಸಂದರ್ಭದಲ್ಲಿ 45 ಸಾವಿರ ಡಾಲರ್ ನೆರವು ಕಲ್ಪಿಸಿದ್ದಾರೆ. ಶಾಲೆಗಳ ನಿರ್ಮಾಣ,
ಅಭಿವೃದ್ಧಿಗೂ ನೆರವಾಗಿದ್ದಾರೆ.