ಮನೆಯಿಂದ ಹೊರಗಡೆ ಹೋದರೆ ಸಾಕು ಧೂಳು, ವಾಹನಗಳ ಹೊಗೆ ಕಿರಿಕಿರಿ ಸೃಷ್ಟಿಸುತ್ತದೆ. ಬಿಸಿಲಿನ ಬೇಗೆಯೂ ತ್ವಚೆಯನ್ನು ಕೆಡಿಸುತ್ತದೆ. ಇವೆಲ್ಲವುಗಳಿಂದ ತ್ವಚೆಯನ್ನು, ಕೂದಲನ್ನು ಸಂರಕ್ಷಿಸಲು ಬ್ಯೂಟಿ ಪಾರ್ಲರ್‌ಗೆ ಹೋಗಬೇಕೆಂದಿಲ್ಲ. ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಇದು ಪ್ರತಿ ಮಹಿಳೆಯರೂ ತಿಳಿದುಕೊಳ್ಳಲೇಬೇಕಾದ ಬೆಸ್ಟ್ ಮನೆ ಮದ್ದು…
1. ಮೊಟ್ಟೆಯ ಬಿಳಿ ಭಾಗವನ್ನು ಕೂದಲಿಗೆ ಹಚ್ಚಿ ಸ್ನಾನ ಮಾಡಬೇಕು. ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ. ಅಲ್ಲದೆ, ಸ್ನಾನಕ್ಕೆ ಹೋಗುವ ಮೊದಲು ಮುಖ ಕುತ್ತಿಗೆ ಭಾಗಕ್ಕೂ ಇದನ್ನು ಹಚ್ಚಿಕೊಂಡರೆ ಚರ್ಮ ಬಿಗಿಯಾಗುತ್ತದೆ.
2. ಅಡುಗೆ ಸೋಡಾ (ಸ್ವಲ್ಪ), ಜೇನುತುಪ್ಪಮತ್ತು ಸಕ್ಕರೆ, ಮೂರನ್ನೂ ಮಿಕ್ಸ್‌ಮಾಡಿ ಮುಖಕ್ಕೆ ಹಚ್ಚಿಕೊಂಡು ಒಂದು ನಿಮಿಷ ಬಿಟ್ಟರೆ ಮುಖದಲ್ಲಿನ ಕಪ್ಪು ಕಲೆಗಳು (Black heads) ನಿವಾರಣೆ ಆಗುತ್ತವೆ.
3. ಬಟರ್ ಫ್ರೂಟ್ ಜೊತೆ ನಿಂಬೆ ರಸ, ಜೇನುತುಪ್ಪವನ್ನು ಆಲಿವ್ ಎಣ್ಣೆಯೊಂದಿಗೆ ಸೇರಿಸಿ. ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ, ಸ್ನಾನ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ. ಇದನ್ನೇ ಆಲಿವ್ ಎಣ್ಣೆ ಹಾಕದೆ ಮುಖಕ್ಕೆ ಹಚ್ಚಿದರೆ ಚರ್ಮ ಮೃದುವಾಗುವುದಲ್ಲದೆ ಕಪ್ಪಾಗದಂತೆ ತಡೆಗಟ್ಟಬಹುದು.
4. ದೇಹದ ತೂಕ ಇಳಿಸಲು ಪ್ರತಿನಿತ್ಯ ನೀರು ಮಜ್ಜಿಗೆ ಮಾಡಿ, ಖಾಲಿ ಹೊಟ್ಟೆಯಲ್ಲಿ ಜೀರಿಗೆ, ಶುಂಠಿ ಪೌಡರ್, ಕರಿಬೇವು ಹಾಕಿ ಕುಡಿಯಿರಿ. ಸಂಜೆ ವೇಳೆ ಮೊಸರಿಗೆ ಅಕ್ಕಿಹಿಟ್ಟು ಅಥವಾ ಕಡಲೆಹಿಟ್ಟು, ಗೋದಿಹಿಟ್ಟು ಯಾವುದಾದರೊಂದರ ಜೊತೆಗೆ ಸ್ವಲ್ಪ ಗೋಪುರಂ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚಿ ತೊಳೆಯಿರಿ. ಚರ್ಮ ಸುರಕ್ಷಿತವಾಗಿರುತ್ತದೆ.
5. ಬೇವಿನ ಎಲೆ ಮತ್ತು ತುಳಸಿದಳ, ಜೇನುತುಪ್ಪ, ಸ್ವಲ್ಪ ಗೋಪುರಂ ಅರಿಶಿನ ಮಿಶ್ರಣ ಮಾಡಿ, ಮೈಗೆಲ್ಲಾ ಹಚ್ಚುವುದರಿಂದ ಬೆವರಿನ ದುರ್ವಾಸನೆಯಿಂದ ಗುಳ್ಳೆಯಾಗುವುದನ್ನು ತಡೆಗಟ್ಟಬಹುದು.
6. ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ನಂತರ ಸಿಪ್ಪೆ ತೆಗೆದು ಹಾಲಿನೊಂದಿಗೆ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಹೊಳಪು ಹೆಚ್ಚುತ್ತದೆ.
ಪವಿತ್ರ, ಮೈಸೂರು