Advertisement

ಇನ್ಮುಂದೆ ಮೀಡಿಯಾ ಮುಂದೆ ಬರಲ್ಲಾ! ತಪ್ಪಾಯ್ತು.. ವೆಂಕಟ ಡ್ರಾಮಾ ಬಯಲು

03:43 PM Jun 20, 2017 | |

ಬೆಂಗಳೂರು : ರಿಯಾಲಿಟಿ ಶೋನ ಜೊತೆಗಾತಿ ನನ್ನನ್ನು ಪ್ರೀತಿಸಿ ಕೈಕೊಟ್ಟಿದ್ದಾಳೆ ಎಂದು ಹುಚ್ಚ ವೆಂಕಟ್‌ ಅವರು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಕುರಿತು ಮಾಧ್ಯಮಗಳಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. 

Advertisement

ಬೆಂಗಳೂರು  ಪ್ರಸ್‌ ಕ್ಲಬ್‌ನಲ್ಲಿ ಮಂಗಳವಾರ ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿದ ಹುಚ್ಚಾ ವೆಂಕಟ್‌ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳ ಮಳೆಗೆ ಉತ್ತರಿಸಲಾಗದೆ ಗಳಗಳನೆ ಕಣ್ಣೀರಿಟ್ಟು ತೀವ್ರ ಹತಾಶರಾದ ಪ್ರಸಂಗ ನಿರ್ಮಾಣವಾಯಿತು. 

‘ನಮ್ಮ ಪ್ರೀತಿನಾ ಗಿಮಿಕ್ಸ್‌ ಅಂತಾರಾ?  ಇದು ಗಿಮಿಕ್ಸಾ ರೀ… ಪಬ್ಲಿಸಿಟಿ ಮಾಡ್ಕೋಬೇಕಾ ರೀ… ಆ ಹುಡುಗೀನೇ ನನ್ನ ಹಿಂದೆ ಬಂದಿರೋದು ನಾನು ಪ್ರೀತಿಸಬೇಕಲ್ಲ. ನಿಮ್ಮ ಜೀವನದಲ್ಲೂ ಹುಡುಗಿ ಬಿಟ್ಟ್ಹೋದ್ರೆ ನೀವೇನ್‌ ಮಾಡ್ತೀರಿ’ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. 

ಮೊದಲು ‘ರಚನಾ ನನ್ನನ್ನು ಲವ್‌ ಮಾಡುತ್ತಿದ್ದ ಕುರಿತಾಗಿ ಸಾಕ್ಷಿಗಳ ಜೊತೆ,ವ್ಯಕ್ತಿಗಳ ಜೊತೆ ಮತ್ತು ಮೆಸೇಜ್‌ಗಳ ಜೊತೆ ಬಂದಿದ್ದೀನಿ’ ಎಂದ ವೆಂಕಟ್‌ ಕೊನೆಯಲ್ಲಿ ‘ನಾನು ನಿಮ್ಮ ತಂಟೆಗೆ ಬರುವುದಿಲ್ಲ ,ನೀವು ನನ್ನ ತಂಟೆಗೆ ಬಂದಿದ್ದೀರಿ ಅಂತಾನೂ ಹೇಳುವುದಿಲ್ಲ.ಇನ್ಮುಂದೆ ನಾನು ಮೀಡಿಯಾ ಮುಂದೆ ಬರಲ್ಲ’ ಎಂದರು. 

‘ಎರಡೇ ದಿನಗಳಲ್ಲಿ ಯಾಕೆ ಬದಲಾವಣೆ ರಚನಾ ಅವರೇ .. ನಾವು ಒಟ್ಟಿಗೆ ಓಡಾಡಿಲ್ವಾ.. ನಿಮ್ಮಪ್ಪ ಅಮ್ಮ ನನಗೆ ಮದುವೆ ಮಾಡಿಕೊಟ್ರೆ ಚೆನ್ನಾಗಿ ನೋಡಿಕೊಳ್ತೇನೆ’ ಎಂದು ಕೊನೆಯಲ್ಲಿ ಹೇಳಿದರು. 

Advertisement

ಅಲ್ಲಾರಿ ಆತ್ಮಹತ್ಯೆ ಮಾಡಿಕೊಳ್ತೀರಿ ..ಈಗ ಮದುವೆ ಆಗ್ತೀನಿ ಅಂತೀರಿ ..ಎಂದು ಪತ್ರಕರ್ತರು ಪ್ರಶ್ನಿಸಿದಾಗ ‘ನನ್ನ ಇಷ್ಟಾರಿ’ ಎಂದು ವೆಂಕಟ್‌ ಕೆಂಡಾಮಂಡಲವಾದರು. ಒಟ್ಟಿನಲ್ಲಿ ನೂರಾರು ಪ್ರಶ್ನೆಗಳ ನಡುವೆ, ಕಣ್ಣೀರು,ತೀವ್ರ ಗದ್ದಲದ ನಡುವೆ ಸುದ್ದಿಗೋಷ್ಠಿ ಅಂತ್ಯಕಂಡಿತು. 

ರಿಯಾಲಿಟಿ ಶೋನ ನಟಿ ರಚನಾ ಜತೆ ಪ್ರೇಮಾಂಕುರವಾಗಿತ್ತು. ಭಗ್ನ ಪ್ರೇಮದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮಗಳಿಗೆ ಎಸ್ಎಂಎಸ್ ಕಳುಹಿಸಿರುವ ಹುಚ್ಚ ವೆಂಕಟ್, ಖಾಸಗಿ ಆಸ್ಪತ್ರೆಯಲ್ಲಿ ಪ್ರಿಯತಮೆಯನ್ನು ನೆನಸಿಕೊಂಡು ಹುಚ್ಚಾಟ ನಡೆಸಿದ್ದರು. 

ಅಂದಹಾಗೆ ವೆಂಕಟ್‌ ಅವರು ಫಿನಾಯಿಲ್‌ ಕುಡಿದೇ ಇರ್ಲಿಲ್ವಂತೆ. ಅರ್ಧ ಬಾಟಲ್‌ ಗ್ಲುಕೋಸ್‌ ಕುಡಿದು ನಾಟಕ ಆಡಿರುವುದು ಇದೀಗ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next