ಹುಬ್ಬಳ್ಳಿ : ಅಂಗನವಾಡಿ ಕೇಂದ್ರದಲ್ಲಿ ಎರಡು ವರ್ಷದ ಮಗುವಿಗೆ ಒಂದೇ ದಿನ ಐದು ಲಸಿಕೆ ಕೊಡಲಾಗಿದೆ ಎನ್ನಲಾಗಿದ್ದು, ತೀವ್ರ ಜ್ವರದಿಂದಾಗಿ ಮಗು ಮೃತಪಟ್ಟಿದೆ.
ಹುಬ್ಬಳ್ಳಿಯ ಉಣಕಲ್ ನಿವಾಸಿ ಜಟ್ಟೆಪ್ಪ ಮತ್ತು ಮಲ್ಲಮ್ಮ ಎಂಬುವವರ ಮೊಮ್ಮಗ ಧೃವ ಅಜ್ಜ-ಅಜ್ಜಿಯ ಮನೆಯಲ್ಲಿ ವಾಸವಿದ್ದ.ಇಲ್ಲಿನ ಸಾಯಿನಗರದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಮಗುವಿಗೆ ಐದು ಲಸಿಕೆ ಹಾಕಲಾಗಿತ್ತು ಎನ್ನಲಾಗಿದೆ.ಮಗು ತೀವ್ರ ಜ್ವರ
ಹೊಟ್ಟೆ ನೊವಿನಿಂದ ಬಳಲುತ್ತಿದ್ದು ಮಗುವನ್ನು ಕಿಮ್ಸ್ ಗೆ ಕರೆತರಲಾಯಿತಾದರು, ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂಬುದು ಕಿಮ್ಸ್ ವೈದ್ಯರ ಅನಿಸಿಕೆ.
ಅಂಗನವಾಡಿ ಕಾರ್ಯಕರ್ತೆಯ ನಿರ್ಲಕ್ಷವೇ ಕಾರಣ ಎಂಬುದು ಮಗುವಿನ ಅಜ್ಜ-ಅಜ್ಜಿಯ ಆರೋಪವಾಗಿದೆ.ಪ್ರಕರಣ ಕುರಿತಾಗಿ ಪ್ರತಿಕ್ರಿಯಿಸಿರುವ ಕಿಮ್ಸ್ ಅಧೀಕ್ಷಕ ಡಾ. ಅರುಣ್ ಕುಮಾರ್ ಮಗುವನ್ನು ಕಿಮ್ಸ್ ಗೆ ತಂದಾಗಲೇ ಉಸಿರಾಟ ಇರಲಿಲ್ಲ. ಮಗುವನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಮಗುವನ್ನು ಕಿಮ್ಸ್ ಗೆ ಕರೆತಂದಿದ್ದಾರೆ ಎಂದಿದ್ದಾರೆ.