Advertisement

ಟೆಲಿಫೋನ್‌ ಬೂತ್‌ ಮಾದರಿ ಕೋವಿಡ್‌ ಪರೀಕ್ಷೆ ಲ್ಯಾಬ್‌ ನೀಡಿಕೆ

06:04 PM Apr 09, 2020 | Team Udayavani |

ಹುಬ್ಬಳ್ಳಿ: ಕೋವಿಡ್‌ ಪರೀಕ್ಷೆಗೆ ಶಂಕಿತರ ಗಂಟಲು ದ್ರವದ ಪ್ರಯೋಗಾಲಯ ಮಾದರಿ ಸಂಗ್ರಹಿಸಲು ಕೋರಿಯಾ ದೇಶದವರು ಅನುಸರಿಸುತ್ತಿರುವ ಟೆಲಿಫೋನ್‌ ಬೂತ್‌ಗಳ ಮಾದರಿಯನ್ನು ಗದಗ ವೈದ್ಯ ಡಾ| ಪ್ರಕಾಶ ಸಂಕನೂರ ಅಲ್ಪ ಬದಲಾವಣೆಗಳೊಂದಿಗೆ ಅಭಿವೃದ್ಧಿ ಪಡಿಸಿದ್ದಾರೆ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿ ಇದನ್ನು ಅಳವಡಿಸಿರುವ ಅವರು, ಬುಧವಾರ ಅದರ ಮತ್ತೂಂದು ಬೂತ್‌ ಅನ್ನು ವಿಧಾನ ಪರಿಷತ್‌ ಸದಸ್ಯ ಪ್ರೊ|
ಎಸ್‌.ವಿ. ಸಂಕನೂರ ಹುಬ್ಬಳ್ಳಿಯ ಕಿಮ್ಸ್‌ಗೆ ಹಸ್ತಾಂತರಿಸಿದರು.

Advertisement

ಕಿಮ್ಸ್‌ನ ವೈದ್ಯಕೀಯಅಧೀಕ್ಷಕ ಡಾ| ಅರುಣಕುಮಾರ ಚವ್ಹಾಣ ಮತ್ತಿತರ ತಜ್ಞರು ಈ ಸಾಧನ ಪ್ರಯೋಜನಕಾರಿಯಾಗಿದೆ. ವೈದ್ಯರು ಮತ್ತು ಸಿಬ್ಬಂದಿಗೆ ರಕ್ಷಣೆ ಒದಗಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ವಿವಿಧ ತಜ್ಞ ವೈದ್ಯರು ಈ ಸಂದರ್ಭದಲ್ಲಿದ್ದರು. ಹುಬ್ಬಳ್ಳಿಯ ಯಂಗ್‌ ಇಂಡಿಯಾ ಸಂಸ್ಥೆಯ ಡಾ| ಶ್ರೀನಿವಾಸ ಜೋಶಿ ಅವರ ತಂಡ ಕೂಡ ಬುಧವಾರ ಇದೇ ಮಾದರಿಯ ಮತ್ತೊಂದು ಬೂತ್‌ ಅನ್ನು ಕಿಮ್ಸ್‌ಗೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next