Advertisement

ಹುಬ್ಬಳ್ಳಿ ಹಾಡಹಗಲೇ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ!

07:32 PM Aug 06, 2020 | sudhir |

ಹುಬ್ಬಳ್ಳಿ: ಹಳೇ ಹಬ್ಬಳ್ಳಿಯ ದೇವರ ಗುಡಿಹಾಳ ರಸ್ತೆಯ ಅಲ್ ತಾಜ್ ರೆಸ್ಟೂರೆಂಟ್ ಮುಂಭಾಗದಲ್ಲಿ ಅಪರಿಚಿತರಿಂದ ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ ನಡೆದಿದ್ದು, ಆರು ಜನ ಮೂರು ಬೈಕ್ ಗಳಲ್ಲಿ ಬಂದು ಕೃತ್ಯ ನಡೆಸಿದ್ದಾರೆ.

Advertisement

ಗುಂಡಿನ ದಾಳಿಗೆ ಒಳಗಾದ ವ್ಯಕ್ತಿಯನ್ನು ರೌಡಿಶೀಟರ್ ಫ್ರೂಟ್ ಇರ್ಫಾನ್ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇರ್ಫಾನ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಗುಂಡು ಹಣೆಗೆ ಇನ್ನೊಂದು ತೊಡೆ ಭಾಗಕ್ಕೆ ಬಿದ್ದಿದೆ ಎನ್ನಲಾಗಿದೆ.

ಮಗನ ಮದುವೆ ಸಮಾರಂಭ ನಡೆಯುತ್ತಿದ್ದ ಹಾಲ್ ಮುಂಭಾಗದಲ್ಲಿಯೇ ಘಟನೆ ನಡೆದಿದೆ. ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಹಾರಿಸುತ್ತಿದ್ದಂತೆ ಮೂರು ಬೈಕ್ ಗಳಲ್ಲಿ ಆಗಮಿಸಿದವರು ಪರಾರಿಯಾಗಿದ್ದಾರೆ. ಕೂಡಲೇ ಸಂಬಂಧಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಿಸಿ ಕ್ಯಾಮೆರಾದಲ್ಲಿ ದಾಖಲು: ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಗುಂಡು ಹಾರಿಸಿದ್ದು, ಹೊಟೇಲ್ ನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಂಬಂಧಿಕರನ್ನು ಕಾರಿಗೆ ಹತ್ತಿಸುತ್ತಿದ್ದ ವೇಳೆ ಗುಂಡಿನ ದಾಳಿ ಮಾಡಿ ಬೈಕ್ ಮೂಲಕ ಪರಾರಿಯಾಗಿದ್ದಾರೆ.

Advertisement

ಸಜೀವ ಗುಂಡು ಪತ್ತೆ: ಘಟನೆ ನಡೆದ ಸ್ಥಳದಲ್ಲಿ ಸಜೀವ ಗುಂಡು ಪತ್ತೆಯಾಗಿದೆ. ಇನ್ನೊಂದು ಕಡೆ ಹಾರಿಸಿದ ಗುಂಡಿನ ಎಮ್ಟಿ ಕೇಸ್ ಪತ್ತೆಯಾಗಿದೆ. ಸ್ಥಳದಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next