Advertisement

ಹುಬ್ಬಳ್ಳಿ ಗಲಭೆ : ಮಾಸ್ಟರ್ ಮೈಂಡ್ ಎಐಎಂಐಎಂ ಮುಖಂಡನ ಬಂಧನ

11:40 AM Apr 21, 2022 | Team Udayavani |

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಐಎಂಐಎಂ ಮುಖಂಡ ಮೊಹಮ್ಮದ್ ಆರೀಫ್ ನನ್ನು ಗುರುವಾರ ಬಂಧಿಸಿದ್ದಾರೆ. ಗಲಭೆಗೆ ಪ್ರಚೋದನೆ ಹಾಗೂ ಭಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಗಲಭೆಗೆ ಪ್ರಚೋದನೆ ನೀಡಿದ್ದ ಮಾಸ್ಟರ್ ಮೈಂಡ್‌ ಮಂಟೂರ ರಸ್ತೆ ಮಿಲ್ಲತ್ ನಗರದ ಲಾರಿ ಚಾಲಕ, ಮೌಲ್ವಿ ವೇಷಧಾರಿ ಹೈದರಾಬಾದ್ ನಲ್ಲಿ ಅವಿತುಕೊಂಡಿದ್ದಾನೆಂಬ ಮಾಹಿತಿ ಆಧರಿಸಿ ತನಿಖಾ ತಂಡ ಅಲ್ಲಿಗೆ ತೆರಳಿದೆ. ಈತ ಗಲಭೆ ದಿನ ಸಮಾಜದ ಧರ್ಮ ಗುರುಗಳು ಬರುತ್ತಿದ್ದಾರೆ. ಅಲ್ಲಿಯ ವರೆಗೆ ಇರುತ್ತೇನೆಂದು ಪೊಲೀಸರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಗಲಭೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಸ್ಥಳಕ್ಕೆ, ಠಾಣೆಗೆ ಅಬ್ದುಲ್ ಅಜೀಮ್ ಭೇಟಿ

ಶನಿವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬುಧವಾರ 11 ಜನರನ್ನು ಬಂಧಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ 127 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next