Advertisement

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

04:49 PM Apr 30, 2024 | Team Udayavani |

ಹುಬ್ಬಳ್ಳಿ: “ನೀನೊಬ್ಬ ವಿಕೃತ ಮನಸ್ಥಿತಿಯ ದ್ರೋಹಿ. ನಿನ್ನ ಅಧಿಕಾರ ಹಾಗೂ ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ. ನಾನು ರಣಹೇಡಿಯಲ್ಲ. ಎದುರಿಸಿ ಹೋರಾಡುವ ಶಕ್ತಿ ನನಗಿದೆ. ತಾಯಿ ಬಗ್ಗೆಯೇ ಕಣ್ಣಿಟ್ಟಿರಬೇಕು ಎಂದು ಹೇಳಿದ ದ್ರೋಹಿ ನೀನು..”;- ಇದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ ವಿರುದ್ಧ ಏಕವಚನದಲ್ಲೆ ವಾಗ್ದಾಳಿ ನಡೆಸಿದ ಪರಿ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ತಪ್ಪಾಗಿದ್ದರೆ ಪ್ರಜ್ವಲ್ ನನ್ನು ನೇಣಿಗೆ ಹಾಕಿ, ನಾವು ತಡೆಯುವುದಿಲ್ಲ. ಪ್ರಕರಣದಲ್ಲಿ ಎಚ್.ಡಿ.ದೇವೇಗೌಡ ಕುಟುಂಬದ ಗೌರವಕ್ಕೆ  ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. ಪೆನ್ ಡ್ರೈವ್ ಪ್ರಕರಣ ಸಿಎಂ ಗಮನಕ್ಕೂ ಇದೆ, ಅದಕ್ಕಾಗಿಯೇ ಅವರು ದೇವೇಗೌಡರ ಕುಟುಂಬದವರೆಲ್ಲ ಸೋಲುತ್ತಾರೆಂದು ಭವಿಷ್ಯ ನುಡಿದಿದ್ದು ಎಂದರು.

ಪೆನ್ ಡ್ರೈವ್ ಪ್ರಕರಣದಲ್ಲಿ ಮೋದಿಯವರನ್ನು ಎಳೆದು ತಂದಿದ್ದು ಯಾಕೆ? ಸಿಎಂ ಸಿದ್ಧರಾಮಯ್ಯನವರೇ ನಿಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆ ಬಗ್ಗೆ ನಾನು ಪ್ರಸ್ತಾಪಿಸಲಾರೆ. ಆದರೆ ಆ ಸಂದರ್ಭದಲ್ಲಿ ಪ್ರಧಾನಿ ಮೋದಿ, ಅಂದಿನ ಕೇಂದ್ರ ಸಚಿವೆ ಸುಷ್ನಾ ಸ್ವರಾಜ್ ಮಾಡಿದ ಸಹಾಯ ಮರೆತುಬಿಟ್ಟಿರಾ? ಕನಿಷ್ಠ ಕೃತಜ್ಞತೆ ಇಲ್ಲದೆ ಹೇಳಿಕೆ ನೀಡಿದ್ದೀರಿ, ಅಂದು ಮೋದಿ ಸಹಾಯ ಮಾಡದಿದ್ದರೆ ಅಂದು ನಿಮ್ಮ ಕುಟುಂಬದ ಮಾನ ಮರ್ಯಾದೆ ಬೀದಿಗೆ ಬರುತ್ತಿತ್ತು ಎಂಬುದನ್ನು ಮರೆತಿರಾ? ಸಿಎಂ -ಕಾಂಗ್ರೆಸ್ ನವರ ಕಥೇ ಮುಂದೆ ಬಿಚ್ಚಿಡುತ್ತೇನೆ. ಜತೆಗೆ ಎಚ್ಚರಿಕೆಯನ್ನೂ ನೀಡುತ್ತೇನೆ ಎಂದು ಎಚ್ ಡಿಕೆ ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next