ಹುಬ್ಬಳ್ಳಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ವೆಸಗಿ ಗರ್ಭಿಣಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಹೋಗಿದ್ದಾಗ, ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡಿ ಹಾರಿಸಿ ಬಂಧಿಸಿದ ಘಟನೆ ಶುಕ್ರವಾರ ತಡರಾತ್ರಿ ಇಲ್ಲಿನ ನವನಗರದ ಸುತಗಟ್ಟಿ ಬಳಿ ನಡೆದಿದೆ.
ಸದ್ದಾಂಹುಸೇನ ಲಿಂಬುವಾಲೆ ಎಂಬಾತನನ್ನೇ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಸದ್ದಾಂಹುಸೇನನು ಅನ್ಯಕೋಮಿನ ಹಳೆಯ ಸಹಪಾಠಿ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿ ಗರ್ಭವತಿ ಮಾಡಿದ್ದ. ಈ ಕುರಿತು ಎಪಿಎಂಸಿ-ನವನಗರ ಠಾಣೆಯಲ್ಲಿ ಅಪ್ರಾಪ್ತೆಯ ತಾಯಿ ಸದ್ದಾಂಹುಸೇನ ವಿರುದ್ಧ ದೂರು ಕೊಟ್ಟಿದ್ದರು. ಪೊಲೀಸರು ಇವನ ಮೇಲೆ ಅತ್ಯಾಚಾರ ಮತ್ತು ಫೋಕ್ಸೋ ಪ್ರಕರಣ ದಾಖಲಿಸಿದ್ದರು.
ಸದ್ದಾಂಹುಸೇನನ ಬಂಧನಕ್ಕಾಗಿ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಎರಡು ತಂಡ ರಚಿಸಿದ್ದರು.
ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸ್‌ಪೆಕ್ಟರ್ ಸಂಗಮೇಶ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಸುತಗಟ್ಟಿ ಬಳಿಯಿದ್ದ ಸದ್ದಾಂಹುಸೇನನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆಂದು ಠಾಣೆಗೆ ಕರೆತರುತ್ತಿದ್ದಾಗ, ಸದ್ದಾಂಹುಸೇನನು ತನ್ನ ಬಳಿ ಇಟ್ಟುಕೊಂಡಿದ್ದ ಪೆನ್ ಮಾದರಿಯ ಚಾಕುವಿನಿಂದ ಕಾನ್ಸಟೇಬಲ್ ಅರುಣ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಇನ್ಸ್‌ಪೆಕ್ಟರ್ ಸಂಗಮೇಶ ಹಿಡಿಯಲು ಯತ್ನಿಸಿದಾಗ ಅವರ ಮೇಲೂ ಹಲ್ಲೆ ಮಾಡಿದಾಗ ಮೊದಲು ಏರ್ ಫೈರ್ ಮಾಡಿದ್ದಾರೆ. ಆಗಲು ಆತ ತನ್ನ ವರ್ತನೆ ಮುಂದುವರೆಸಿದಾಗ ಸ್ವಯಂ ರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ರು ಸದ್ದಾಂಹುಸೇನನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿರುವ ಇನ್ಸ್‌ಪೆಕ್ಟರ್, ಕಾನ್ಸಟೇಬಲ್ ಹಾಗೂ ಆರೋಪಿ ಸೇರಿ ಮೂವರು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ.
ಇದನ್ನೂ ಓದಿ: Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ