Advertisement
ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕ ನಾಗಶೆಟ್ಟಿಕೊಪ್ಪದ ಮಾರುತಿ ಮಂದಿರದ ಎದುರು ಬುಧವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
1947ರಲ್ಲಿ ಪಾಕಿಸ್ತಾನದಲ್ಲಿ ಶೇ.15ರಷ್ಟು ಹಿಂದೂಗಳಿದ್ದರು. ಆದರೆ ಈಗ ಅವರ ಸಂಖ್ಯೆ ಶೇ.2ರಷ್ಟಾಗಿದೆ. ಅದೇ ರೀತಿ ಬಾಂಗ್ಲಾದೇಶದಲ್ಲಿ 1971ರಲ್ಲಿ ಶೇ.22ರಷ್ಟು ಹಿಂದೂಗಳಿದ್ದರು. ಪ್ರಸ್ತುತ ಅವರ ಸಂಖ್ಯೆ ಶೇ.8ಕ್ಕೆ ಇಳಿಮುಖವಾಗಿದೆ. ಬಲವಂತದ ಮತಾಂತರ, ಹತ್ಯೆ ಇದಕ್ಕೆ ಕಾರಣವಾಗಿದೆ. ಹಲವರು ಅಲ್ಲಿನ ದೌರ್ಜನ್ಯಕ್ಕೆ ರೋಸಿ ಹೋಗಿ ಭಾರತಕ್ಕೆ ಬಂದು ನೆಲೆಸಿದ್ದಾರೆ.
ಅಂಥವರಿಗೆ ಇಲ್ಲಿನ ಪೌರತ್ವ ನೀಡಬೇಕಿದೆ ಎಂದು ನುಡಿದರು. ಮುಸಲ್ಮಾನರಿಗೆ ಹಾಗೂ ಕ್ರಿಶ್ಚಿಯನ್ನರಿಗೆ ಹಲವು ದೇಶಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ದೇಶ. ಅದು ಭಾರತ ಮಾತ್ರ. ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಇನ್ನೂ ಕೇಂದ್ರ ಸರಕಾರ ಏನನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ ಕಾಂಗ್ರೆಸ್‌ನವರು ಇಲ್ಲ-ಸಲ್ಲದ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಮುಗ್ಧ ಅಲ್ಪಸಂಖ್ಯಾತ ಯುವಕರಿಗೆ ಕಲ್ಲೆಸೆಯಲು ಹೇಳಿ ಅವರ ಜೀವನ ಹಾಳು ಮಾಡುತ್ತಿದ್ದಾರೆ ಎಂದರು.
ಮಂಗಳೂರು ಗೋಲಿಬಾರ್‌ನಲ್ಲಿ ಮೃತರಾದವರು ಗಲಭೆ ಸೃಷ್ಟಿಸುವವರಲ್ಲಿ ಸೇರಿದವರಾಗಿದ್ದರೆ ಅವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡದಿರಲು ನಿರ್ಧರಿಸಿದ ಸಿಎಂ ಯಡಿಯೂರಪ್ಪ ಅವರ ಕ್ರಮ ಸಮರ್ಥನೀಯವಾಗಿದೆ. ಬಿಜೆಪಿ ಸರಕಾರ ಮಾತ್ರ ದಿಟ್ಟ ನಿರ್ಧಾರ ಘೋಷಿಸಲು ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ದೇಶದಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಜಾರ್ಖಂಡ್‌ನಲ್ಲಿ ಕಳೆದ ಚುನಾವಣೆಯಲ್ಲಿ ಶೇ.31ರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಶೇ.33ರಷ್ಟು ಮತಗಳನ್ನು ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಅಧಿಕಾರದ ಆಸೆಗಾಗಿ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ರಚನೆಯಾಗಿರುವ ಸರಕಾರ ಶೀಘ್ರದಲ್ಲೇ ಮೂರಾಬಟ್ಟೆಯಾಗಲಿದೆ ಎಂದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 4ನೇ ಸ್ಥಾನ ಪಡೆದುಕೊಂಡಿದ್ದರೆ, ಜಾರ್ಖಂಡ್‌ನಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಮುಸಲ್ಮಾನರು ಕಾಂಗ್ರೆಸ್‌ನಿಂದ ವಿಮುಖರಾಗುತ್ತಿರುವುದರಿಂದ ಹತಾಶೆ ಗೊಂಡಿರುವ ಕಾಂಗ್ರೆಸ್ ಮುಖಂಡರು, ಗೊಂದಲ ಸೃಷ್ಟಿಸುವ, ಭೀತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನು ಮುಸಲ್ಮಾನರು ಅರ್ಥ ಮಾಡಿಕೊಳ್ಳಬೇಕು ಎಂದರು.
ನಾಗೇಶ ಕಲಬುರ್ಗಿ ಮಾತನಾಡಿದರು. ಮುಖಂಡರಾದ ಪ್ರದೀಪ ಶೆಟ್ಟರ, ಮೋಹನ ಲಿಂಬಿಕಾಯಿ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಲ್ಲಿಕಾರ್ಜುನ ಸಾವಕಾರ, ಶಿವಾನಂದ ಮುತ್ತಣ್ಣವರ, ಜಯತೀರ್ಥ ಕಟ್ಟಿ, ಚಳ್ಳಮರದಶೇಖ್, ಮಹ್ಮದಶಫಿ ಬಿಜಾಪುರಿ, ಲಕ್ಷ್ಮಣ ಬೀಳಗಿ, ಸಿದ್ದು ಇದ್ದರು.