Advertisement

ಹುಬ್ಬಳ್ಳಿ: ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೈನ್ ಒಡೆದು ಮಿಥೇನ್ ಅನಿಲ ಸೋರಿಕೆ

04:55 PM Jul 20, 2020 | keerthan |

ಹುಬ್ಬಳ್ಳಿ: ಒಳಚರಂಡಿ ಕಾಮಗಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಮಿಥೇನ್ ಅನಿಲ ಸೋರಿಕೆಯಾದ ಘಟನೆ ನವನಗರದ ಕರ್ನಾಟಕ ವೃತ್ತದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಇಂಡಿಯನ್ ಆಯಿಲ್-ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಪೈಪ್ ಲೈನ್ ಸೋರಿಕೆಯಾಗಿದೆ. ಯಾವುದೇ ದುರ್ಘಟನೆಯಾದ ವರದಿಯಾಗಿಲ್ಲ. ಮಹಾನಗರ ಪಾಲಿಕೆ ವತಿಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳಗ್ಗೆ 11.15ರ ಸಮಯಕ್ಕೆ ಜೆಸಿಬಿ ಯಂತ್ರ ಪೈಪ್ ಗೆ ಬಡಿದು ಸೋರಿಕೆ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಫೋಮ್ ಬಿಟ್ಟು ಯಾವುದೇ ಅನಾಹುತವಾಗದಂತೆ ತಡೆದಿದ್ದಾರೆ. ಈ ಮಧ್ಯೆ ಸಾರ್ವಜನಿಕರು ಮುಖ್ಯ ಪೈಪ್ ಲೈನ್ ವಾಲ್ವ್ ಬಂದ್ ಮಾಡಿದ್ದಾರೆ. ವಿದ್ಯುತ್ ಕಂಬದ ಹತ್ತಿರವೇ ಘಟನೆ ನಡೆದಿದ್ದು, ಹೆಸ್ಕಾಂ ಸಿಬ್ಬಂದಿ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ: ನವನಗರದಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಲೈನ್ ಸಂಪರ್ಕ ಪಡೆದುಕೋಂಡಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು ಗ್ಯಾಸ್ ಕಂಪನಿ ಸಿಬ್ವಂದಿಯನ್ನು ತರಾಟೆಗೆ ತೆಗೆದುಕೊಂಡರು. ಮನೆಗೆ ಅನಿಲ ಸಂಪರ್ಕ ಕಲ್ಪಿಸಿದ ನಂತರ ಒಮ್ಮೆಯೂ ನಿರ್ವಹಣೆಗೆ ಬಂದಿಲ್ಲ ಎಂದು ದೂರಿದರು.

ಗಮನಕ್ಕೆ ತಾರದೇ ಕಾಮಗಾರಿ: ಕಂಪನಿಯ ಗಮನಕ್ಕೆ ತರಲಾರದೇ ಒಳಚರಂಡಿ ಕಾಮಗಾರಿ ನಡೆಸಿದ್ದರಿಂದ ಅನಾಹುತವಾಗಿದೆ. ಅಡುಗೆ ಅನಿಲದ ಪೈಪ್ ಲೈನ್ ನೆಲ ಮಟ್ಟದಿಂದ 102 ಮೀ ಆಳದಲ್ಲಿದೆ. ೧ ಮೀ. ಕೆಳಗೆ‌ ವಾರ್ನಿಂಗ್ ಮ್ಯಾಟ್ ಇದೆ. ಅದನ್ನು ಕಡೆಗಣಿಸಿ ಕಾಮಗಾರಿ ಮಾಡಲಾಗಿದೆ. ನಮಗೆ ಲೀಕೇಜ್ ಮಾಹಿತಿ ತಿಳಿಯುತ್ತಿದ್ದಂತೆಯೇ ನಮ್ಮ ಸಿಬ್ಬಂದಿ ಬಂದು ಪೈಪ್ ಲೈನ್ ಯುನಿಟ್ ಬಂದ್ ಮಾಡಿದ್ದಾರೆ. ನಮ್ಮ ಸಿಬ್ಬಂದಿ ನಿರಂತರ ಪ್ಯಾಟ್ರೊಲಿಂಗ್ ಮಾಡುತ್ತಾರೆ. ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಎಂದು ಅನಿಲ ಪೂರೈಕೆ ಸಂಸ್ಥೆಯ ಆಪರೇಶನ್ ಒ ಆ್ಯಂಡ್ ಎಂ ವಿಭಾಗದ ಎಂಜಿನಿಯರ್ ಶ್ರೀಪಾದ ಕುಲಕರ್ಣಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next