Advertisement
ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿ ಆದ ಅನಂತರ ಸಾಸಿವೆ, ಜೀರಿಗೆ ಹಾಕಿ ಹುರಿದಾಗ ಸುಳಿ ದಿಟ್ಟ ಬೆಳ್ಳುಳ್ಳಿ, ಕರಿಬೇವು ಮತ್ತು ಇಂಗನ್ನು ಹಾಕಿ ಕಡಿಮೆ ಉರಿಯಲ್ಲಿ 10 ಸೆಕೆಂಡ್‌ಗಳ ಕಾಲ ಹುರಿದುಕೊಳ್ಳಬೇಕು. ಅನಂತರ ಇದಕ್ಕೆ ಸಣ್ಣಗೆ ಹಚ್ಚಿಟ್ಟುಕೊಂಡ ಈರುಳ್ಳಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈರುಳ್ಳಿ ಕಂದು ಬಣ್ಣ ಬರುವ ಹಾಗೆ ಹುರಿದು, ಅದಕ್ಕೆ ಸ್ವಲ್ಪ ಅರಿಸಿನ ಬೆರೆಸಿ, 2 ರಿಂದ 3 ಚಮಚ ನೆನೆ ಸಿಟ್ಟ ಹುಣಸೆ ಹಣ್ಣಿನ ರಸ ಸೇರಿಸಿ ಅಗತ್ಯವಿದ್ದರೆ ಸ್ವಲ್ಪ ಉಪ್ಪು ಹಾಕಿ. ಅನಂತರ ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಗಿರ್‌ಮಿಟ್ ಮಸಾಲ ಸಿದ್ಧ. ಇದನ್ನು ತಣಿ ಯಲು ಬಿಡಿ. ಒಂದು ಪಾತ್ರೆಗೆ ಮಂಡಕ್ಕಿ ಹಾಕಿ ಅದಕ್ಕೆ ಹಸಿ ಈರುಳ್ಳಿ, ಟೊಮೇಟೊ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, 1 ಚಮಚ ಹುರಿ ಗಡಲೆ ಪುಡಿ ಅದರ ಜತೆಗೆ ತಯಾರಿಸಿಟ್ಟು ಕೊಂಡ ಗಿರ್‌ಮಿಟ್ ಮಸಾಲ ಹಾಕಿ ಮಿಕ್ಸ್ ಮಾಡಿ ಉಪ್ಪು ಅಥವಾ ಹುಳಿ ಬೇಕಾದಲ್ಲಿ ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿಕೊಂಡರೆ ರುಚಿ ರುಚಿಯಾದ ಗಿರ್‌ಮೀಟ್ ಸವಿಯಲು ಸಿದ್ಧ.
ಮಂಡಕ್ಕಿ (ಜೋಳ್ಳ ಮಂಡಕ್ಕಿ)
ಈರುಳ್ಳಿ – 2
ನಿಂಬೆ ಹಣ್ಣಿನ ಗಾತ್ರದ ಹುಣ ಸೆ ಹಣ್ಣು
ಸಾಸಿವೆ -ಒಂದು ಚಮಚ
ಜೀರಿಗೆ -ಒಂದು ಚಮಚ
ಬೆಳ್ಳುಳ್ಳಿ – 6 -7
ಕರಿಬೇವು – ಸ್ವಲ್ಪ
ಹಸಿ ಮೆಣಸಿನ ಕಾಯಿ -2
ಇಂಗು -ಕಾಲು ಚಮಚ
ಎಣ್ಣೆ -2 -3 ಚಮಚ
ಸಕ್ಕರೆ -ಒಂದು ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಹುರಿ ಕಡಲೆ ಪುಡಿ -2 ಚಮಚ
ತುರಿದ ಕ್ಯಾರೆಟ್ – ಕಾಲು ಬೌಲ್‌ನಷ್ಟು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಣ್ಣಾಗಿರುವ ಟೊಮೇಟೊ – 1 -2
ಮಿಕ್ಸರ್ – ಕಾಲು ಕಪ್
ಲಿಂಬೆ ಹಣ್ಣು -ಅರ್ಧ