ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವಾರ್ಡ್ 50ರ ಮಂಟೂರು ರಸ್ತೆಯ ಶೀಲಾ ಕಾಲೋನಿ, ಗುಂಜಾಳ ಪ್ಲಾಟ್ ಮತ್ತು ವಾರ್ಡ್ 65ರ ಎಸ್.ಎಂ. ಕೃಷ್ಣಾ ನಗರ, ಈಶ್ವರ ನಗರ ಮತ್ತು ಕಮಾನಗರ ಲೇಔಟ್ ನಲ್ಲಿ ಒಟ್ಟು 5.5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೀಡ್ಕರ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 3.5 ಕೋಟಿ ರೂ. ಅನುದಾನದಲ್ಲಿ ವಾರ್ಡ್ 50ರ ಗುಂಜಾಳ ಪ್ಲಾಟ್ ಮತ್ತು ಶೀಲಾ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಗಟಾರ ನಿರ್ಮಾಣ, 1.5 ಕೋಟಿ ರೂ. ವೆಚ್ಚದಲ್ಲಿ 65ರ ಎಸ್.ಎಂ.ಕೃಷ್ಣ ನಗರ ಮುಖ್ಯರಸ್ತೆ ಮತ್ತು ಒಳರಸ್ತೆಗಳ ಸಿಸಿ ರಸ್ತೆ ನಿರ್ಮಾಣ, ಈಶ್ವರ ನಗರದಲ್ಲಿ ಒಳರಸ್ತೆಗಳ ಸಿಸಿ ರಸ್ತೆ ಮತ್ತು ಪಾಲಿಕೆಯ 30 ಲಕ್ಷ ರೂ. ಅನುದಾನದಲ್ಲಿ ಕಮಾನಗರ ಲೇಔಟ್ ರಸ್ತೆಗಳ ಡಾಂಬರೀಕರಣ ಹಾಗೂ 20 ಲಕ್ಷ ರೂ. ಅನುದಾನದಲ್ಲಿ ಈಶ್ವರ ನಗರದಲ್ಲಿ ಸಿಸಿ ಗಟಾರ ನಿರ್ಮಾಣ ಸೇರಿದಂತೆ ಒಟ್ಟು 5.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯಅಲ್ತಾಫ್ ಕಿತ್ತೂರು, ಮುಖಂಡರಾದ ಶರೀಫ್ ಅದವಾನಿ, ಬಾಬಾಜಾನ ಕಾರಡಗಿ, ಆರ್.ಜಿ. ಸಂಸ್ಥಾನಮಠ, ಖಾಸಿಂಸಾಬ್ ಧಾರವಾಡ, ಸಿರಾಜ್ ಪಲ್ನಾ, ಇಮ್ತಿಯಾಜ್ ಕಳಸ, ಇಜಾಜ್ ಪೀರಾ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಾದ ವಿಜಯಕುಮಾರ, ಹರೀಶ, ಪಾಲಿಕೆ ವಲಯಾಧಿಕಾರಿ ಗಣಾಚಾರಿ, ಆನಂದ ಕಾಂಬ್ಳೆ ಇನ್ನಿತರರು ಇದ್ದರು.
ಬಡ ಜನರ ಆರೋಗ್ಯದ ದೃಷ್ಟಿಯಿಂದ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಎಸ್.ಎಂ. ಕೃಷ್ಣ ನಗರದಲ್ಲಿನ ಆರೋಗ್ಯ ಕೇಂದ್ರವನ್ನು ಶೀಘ್ರವೇ ಉದ್ಘಾಟಿಸಲಾಗುವುದು.
ಪ್ರಸಾದ ಅಬ್ಬಯ್ಯ, ಶಾಸಕ