Advertisement
ಶೇ.78 ಜನರು ‘ನಗರ ಸಾರಿಗೆ’ ನೆಚ್ಚಿಕೊಂಡಿದ್ದರು. ಬೆಳಗ್ಗೆ 4 ಗಂಟೆಯಿಂದ ರಸ್ತೆಗಿಳಿಯುವ ಬಸ್‌ಗಳು ಮಧ್ಯರಾತ್ರಿ 12:45 ರವರೆಗೂ ಅವಳಿ ನಗರದ ಜನರಿಗೆ ಸಾರಿಗೆ ಸೇವೆ ನೀಡುತ್ತಿವೆ. 108 ಬಸ್ ರದ್ದು: ಬಿಆರ್‌ಟಿಎಸ್ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಕಾಲ ಸಮೀಪಿಸುತ್ತಿದೆ. ಹಿಂದೆ ನಿರ್ಧರಿಸಿದಂತೆ ನ. 1ಕ್ಕೆ ಬಸ್ ಸಂಚಾರ ಆರಂಭವಾದರೆ ಅವಳಿ ನಗರದ ನಡುವೆ ಸಾರಿಗೆ ಸೇವೆ ನೀಡುತ್ತಿರುವ 108 ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ನಿಲ್ಲಿಸಲಿವೆ. ಈ ಬಸ್‌ಗಳ ಮಾರ್ಗ ಪರವಾನಗಿ ಆಧಾರದ ಮೇಲೆ ಬಿಆರ್‌ಟಿಎಸ್ ಬಸ್‌ಗಳು ಸಂಚಾರ ಮಾಡಲಿವೆ.
Related Articles
Advertisement
ಹೆಚ್ಚಲಿದೆ ಸಾರಿಗೆ ಸೇವೆವಾಯವ್ಯ ಸಾರಿಗೆ ಸಂಸ್ಥೆಯ 108 ಬಸ್‌ಗಳ 660 ಟ್ರಿಪ್ ಗಳಿಂದ ಸರಾಸರಿ 1.5 ನಿಮಿಷಕ್ಕೊಂದು ಬಸ್ ಅವಳಿ ನಗರ ಮಧ್ಯೆ ಸಾರಿಗೆಗೆ ಲಭ್ಯವಿದೆ. ಇದೀಗ ಬಿಆರ್‌ಟಿಎಸ್‌ನ 130 ಬಸ್‌ಗಳು ಇರುವುದರಿಂದ ಬಸ್‌ನ ಲಭ್ಯತೆ ಸರಾಸರಿ ಸಮಯ ಮತ್ತಷ್ಟು ಕಡಿಮೆಯಾಗಲಿದೆ. ಪ್ರತ್ಯೇಕ ಕಾರಿಡಾರ್ ವ್ಯವಸ್ಥೆ, ಸಮರ್ಪಕ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇರುವುದರಿಂದ ತ್ವರಿತ ಸಾರಿಗೆ ಜನರಿಗೆ ದೊರೆಯಲಿದೆ. ರಸ್ತೆ ರೈಲು ಎಂದು ಕರೆಯುತ್ತಿದ್ದ ಆರ್ಟಿಕ್ಯುಲೇಟೆಡ್ ಬಸ್ ಗಳು ಕೂಡ ರಸ್ತೆಗಿಳಿಯಲಿವೆ. ಹೀಗಿದೆ ಇತಿಹಾಸ
ಅವಳಿ ನಗರ ಸಾರಿಗೆ ಸೇವೆಗಾಗಿ ಅಂದಿನ ಮೈಸೂರು ರಾಜ್ಯ ಸಾರಿಗೆ ಸಂದರ್ಭದಲ್ಲಿ 120 ಬಸ್‌ಗಳಿಗೆ ಸಾರಿಗೆ ಇಲಾಖೆಯಿಂದ ಮಾರ್ಗ ಪರವಾನಗಿ ನೀಡಲಾಗಿತ್ತು. ಹುಬ್ಬಳ್ಳಿ ಹಾಗೂ ಧಾರವಾಡ ನಗರದಿಂದ ಪ್ರತ್ಯೇಕವಾಗಿ ಬಸ್‌ಗಳ ಸಂಚಾರ ಇತ್ತು. ದಿನದ 24 ಗಂಟೆಯೂ ಸಾರಿಗೆ ದೊರೆಯುತ್ತಿತ್ತು. 1983 ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯಿಂದ ಮಧ್ಯರಾತ್ರಿಯ ನಗರ ಸಾರಿಗೆ ರದ್ದು ಪಡಿಸಲಾಯಿತು. 1977ರಲ್ಲಿ ಅವಳಿ ನಗರದ ನಡುವೆ 90 ಪೈಸೆ ಟಿಕೆಟ್ ದರವಿತ್ತು. ರಸ್ತೆ ರೈಲು (ಆರ್ಟಿಕ್ಯುಲೇಟೆಡ್ ) ಬಸ್ ಗಳಿದ್ದವು. ಇತ್ತೀಚಿನ ವರ್ಷಗಳಲ್ಲಿ ಸರಕಾರದ ತಪ್ಪು ನಿರ್ಧಾರಗಳಿಂದ ನಗರ ಸಾರಿಗೆ ಸಾಕಷ್ಟು ನಷ್ಟಕ್ಕೆ ಜಾರಿದೆ ಎಂದು ನಿವೃತ್ತ ಸಿಬ್ಬಂದಿಯೊಬ್ಬರು ಇತಿಹಾಸ ಮೆಲಕು ಹಾಕುತ್ತಾರೆ. ಹಿಂದಿನ ನಿರ್ಧಾರದಂತೆ ಅವಳಿ ನಗರದ ನಡುವೆ ಓಡಾಡುತ್ತಿರುವ ವಾಯವ್ಯ ಸಾರಿಗೆ ಬಸ್‌ಗಳನ್ನು ಬಿಆರ್‌ಟಿಎಸ್ ಸಾರಿಗೆ ಸೇವೆಗೆ ಪೂರಕವಾಗಿ ಫೀಡರ್ ಸೇವೆಗೆ ಬಳಸಿಕೊಳ್ಳಲಾಗುವುದು. ಸೇವೆಗೆ ಉತ್ತಮವಾಗಿರುವ ಬಸ್ ಗಳಿಗೆ ಈಗಾಗಲೇ ಜಿಪಿಎಸ್ ಕೂಡ ಅಳವಡಿಸಲಾಗಿದೆ.
ರಾಜೇಂದ್ರ ಚೋಳನ್,
ಎಂಡಿ, ವಾಕರಸಾಸಂ ಹೇಮರಡ್ಡಿ ಸೈದಾಪುರ