- – –
1. ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಎ ಮತ್ತು ಇ ವಿಟಮಿನ್ ಹೇರಳವಾಗಿದ್ದು, ಅದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದೆರಡು ಹನಿ ಎಣ್ಣೆಯನ್ನು ತೆಗೆದುಕೊಂಡು, ನಿಧಾನವಾಗಿ ಹುಬ್ಬಿಗೆ ಮಸಾಜ್ ಮಾಡಿದರೆ, ಹುಬ್ಬು ದಟ್ಟವಾಗಿ, ಕಪ್ಪಾಗಿ ಕಂಗೊಳಿಸುತ್ತದೆ.
Advertisement
2. ಕೊಬ್ಬರಿ ಎಣ್ಣೆಕೊಬ್ಬರಿ ಎಣ್ಣೆಯನ್ನು ತಲೆಗೂದಲಿಗೆ, ಮುಖದ ಚರ್ಮಕ್ಕೆ ಹಚ್ಚುವುದು ಗೊತ್ತೇ ಇದೆ. ಹುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಚರ್ಮ ತೇವಗೊಂಡು ಕೂದಲಿನ ಬೆಳವಣಿಗೆ ಹೆಚ್ಚುತ್ತದೆ. ಪ್ರತಿ ರಾತ್ರಿ ಹುಬ್ಬಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಎದ್ದು ಮುಖ ತೊಳೆಯಿರಿ.
ಜಿಡ್ಡು ಜಿಡ್ಡಾಗಿ ಕಮಟು ವಾಸನೆ ಬರುವ ಹರಳೆಣ್ಣೆಯಿಂದ ದೂರ ಓಡುವವರೇ ಹೆಚ್ಚು. ಆದರೆ, ಈ ಹರಳೆಣ್ಣೆ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ, ಸದೃಢವನ್ನಾಗಿಸುತ್ತದೆ. ಪ್ರೋಟಿನ್ ಅಂಶ ಅಧಿಕವಾಗಿರುವ ಹರಳೆಣ್ಣೆ ಹಚ್ಚಿದರೆ ಹುಬ್ಬಿನ ಕೂದಲು ಮಿರಮಿರ ಮಿಂಚುತ್ತದೆ. 4. ಬಾದಾಮಿ ಎಣ್ಣೆ
ಈ ಎಣ್ಣೆ ಚರ್ಮವನ್ನು ಮೃದುವಾಗಿಸುವುದರ ಜೊತೆಗೆ, ಉದುರಿದ ಕೂದಲು ಮರುಹುಟ್ಟು ಪಡೆಯಲು ಸಹಾಯ ಮಾಡುತ್ತದೆ. ಹುಬ್ಬಿಗೆ ಬಾದಾಮಿ ಎಣ್ಣೆಯ ಮಸಾಜ್ ಮಾಡಿ, 2-3 ಗಂಟೆ ಬಿಟ್ಟು ಮುಖ ತೊಳೆಯಿರಿ.