Advertisement

ಮಹಾದೇವಗೆ ಉತ್ತಮ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿ

03:19 PM Feb 03, 2021 | Team Udayavani |

ಹುಬ್ಬಳ್ಳಿ: ಹಾವೇರಿಯ ಅಂಚೆ ಇಲಾಖೆಯಲ್ಲಿ ಅಂಚೆ ವಿಮೆ ಅಭಿವೃದ್ಧಿ ಅಧಿಕಾರಿಯಾಗಿರುವ ಮಹಾದೇವ ಕಿತ್ತೂರು ಅವರಿಗೆ ಉತ್ತಮ ಅಭಿವೃದ್ಧಿ ಅಧಿಕಾರಿ ಪ್ರಶಸ್ತಿ ಲಭಿಸಿದೆ. ಸೋಮವಾರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂಚೆ ಜೀವ ವಿಮೆಯಲ್ಲಿ ಪ್ರಥಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ದೊರೆತಿದೆ. 2014ರಿಂದ ಸತತವಾಗಿ ನಾಲ್ಕು ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಧಾರವಾಡ, ಗದಗ, ಉತ್ತರಕನ್ನಡ ಜಿಲ್ಲೆಯ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀಫ್‌ ಪೋಸ್ಟ್‌ಮಾಸ್ಟರ್‌ ಜನರಲ್‌ ಶಾರದಾ ಸಂಪತ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಡಿಪಿಎಸ್‌ (ಎಚ್‌ಕ್ಯೂ) ಎಸ್‌. ರವೀಂದ್ರನ್‌, ಪಿಎಂಜಿ (ಎಸ್‌ಕೆ) ಶ್ಯೂಲಿ ಬರ್ಮನ್‌, ಎಪಿಎಸ್‌ (ಎಸ್‌ಕೆ) ಗಜಬಾಯೆ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಓದಿ : ಚಿತ್ರೋದ್ಯಮಕ್ಕೆ ಯಾಕೆ ನಿರ್ಬಂಧ? ಸರ್ಕಾರವನ್ನು ಪ್ರಶ್ನಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

Advertisement

Udayavani is now on Telegram. Click here to join our channel and stay updated with the latest news.

Next