ಹುಬ್ಬಳ್ಳಿ: ತಾಲೂಕಿನ ಕುಸುಗಲ್ಲ ಗ್ರಾಮ ಬಳಿಯ ಎವಿಕೆ ಗಾರ್ಡನ್ ಫಾರ್ಮ್ಸ್ ದಲ್ಲಿ ಜನ್ಮದಿನದ ಪಾರ್ಟಿ ವೇಳೆ ಗಾಳಿಯಲ್ಲಿ ಗುಂಡಿನ ಸದ್ದು ಮೊಳಗಿಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಆರ್ ಟಿಐ ಕಾರ್ಯಕರ್ತ, ಕೇಶ್ವಾಪುರದ ಫೆಲೋಮಿನ್ ಮಗ ಸುಂದರಪೌಲ್ ಜನ್ಮದಿನದ ಪಾರ್ಟಿಯ ವೇಳೆ ವೇದಿಕೆಯಲ್ಲಿ ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.
ಈ ಪಾರ್ಟಿಯಲ್ಲಿ ಹೊಸೂರು, ಸೆಟಲ್ ಮೆಂಟ್ ಸೇರಿದಂತೆ ನಗರದ ವಿವಿಧ ಪ್ರದೇಶಗಳ 100ಕ್ಕೂ ಹೆಚ್ಚು ರೌಡಿಗಳು ಒಂದೆಡೇ ಸೇರಿ ಭರ್ಜರಿಯಾಗಿ ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ರಮೇಶ ಗೋಕಾಕ ನೇತೃತ್ವದ ತಂಡ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ, ಪಿಸ್ತೂಲ್ ವಶಕ್ಕೆ ಪಡೆದು ತಂದೆ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸುಳ್ಯ: ಅಪರಿಚಿತ ತಂಡದಿಂದ ಗುಂಡಿನ ದಾಳಿ; ಕೂದಲೆಳೆ ಅಂತರದಿಂದ ಪಾರಾದ ಯುವಕ!
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸುಂದರಪೌಲ್ ತನ್ನ ಬಳಿ ಪಿಸ್ತೂಲ್ ಹೊಂದಿದ್ದ. ಅಲ್ಲದೇ ನೂರಾರು ಜನ ಸೇರಿಸಿ ಎಣ್ಣಿ ಪಾರ್ಟಿ ಆಯೋಜಿಸಿದ್ದ. ಈತ ಈ ಹಿಂದೇ ಕಾಲೇಜ್ ಕ್ಯಾಂಪಸ್ ನ ಕ್ಯಾಂಟೀನ್ ನಲ್ಲಿ ಪಿಸ್ತೂಲ್ ತೋರಿಸಿದ್ದ ಎಂದು ತಿಳಿದು ಬಂದಿದೆ.