ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನಲೆಯಲ್ಲಿ ನಗರದಲ್ಲಿ ಬಸ್ಸುಗಳು ರಸ್ತೆಗಿಳಿದಿಲ್ಲ. ನೌಕರರು ಘಟಕಗಳ ಬಳಿಗೆ ಆಗಮಿಸದೆ ತಟಸ್ಥರಾಗಿ ಉಳಿದಿದ್ದಾರೆ.
ಎರಡನೇ ದಿನದ ಮುಷ್ಕರ ಹತ್ತಿಕ್ಕಿ ಬಸ್ಸುಗಳ ಸಂಚಾರಕ್ಕೆ ಸರಕಾರ ಸಿದ್ದತೆ ಮಾಡಿಕೊಂಡಿದೆ. ಇದಕ್ಕಾಗಿ ಪೊಲೀಸರನ್ನು ಘಟಕಗಳ ಮುಂದೆ ನಿಯೋಜಿಸಲಾಗಿದೆ. ಹಾಗಾಗಿ ನೌಕರರು ಘಟಕಗಳಿಗೆ ಆಗಮಿಸದೆ ದೂರ ಉಳಿದಿದ್ದಾರೆ.
ಬೆಳಗ್ಗೆಯಿಂದ ಬಸ್ಸುಗಳನ್ನು ಕಾರ್ಯಚರಣೆಗೊಳಿಸಲು ಘಟಕ, ನಿಲ್ದಾಣಗಳಿಗೆ ಎಡತಾಕುತ್ತಿದ್ದು, ನೌಕರರು ಘಟಕಗಳಿಗೆ ಆಗಮಿಸದ ಹಿನ್ನಲೆಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಒಂದೂ ಬಸ್ಸು ಸಂಚಾರಗೊಂಡಿಲ್ಲ.
ಇದನ್ನೂ ಓದಿ:ವಿಜಯಪುರ ಜಿಲ್ಲೆಯಲ್ಲಿ ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಬಾಡಿಗೆ ವಾಹನಗಳಿಗೆ ಭಾರಿ ಬೇಡಿಕೆ
ಹುಬ್ಬಳ್ಳಿ ಗ್ರಾಮೀಣ ವಿಭಾಗದಿಂದ ೧೧೩ ಅನುಸೂಚಿಗಳು ಕಾರ್ಯಾಚರಣೆಗೊಳ್ಳಬೇಕಾಗಿದ್ದು, ನೌಕರರು ಘಟಕಗಳಿಗೆ ಆಗಮಿಸದ ಹಿನ್ನೆಲೆಯಲ್ಲಿ ಒಂದೂ ಬಸ್ಸು ಸಂಚಾರ ಮಾಡಿಲ್ಲ. ಇದರಿಂದಾಗಿ ನಗರದ ಮೂರು ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.