Advertisement
ರೈತರ ಮನದಲ್ಲಿ ತೃಪ್ತಿ-ಆತ್ವವಿಶ್ವಾಸ ತಂದಿದೆ. ಕರ್ನಾಟಕ ಸರ್ಕಾರ ಅವಕಾಶ ನೀಡಿದರೆ ಇಡೀಕರ್ನಾಟಕವನ್ನೇ “ಸುಜಲಾಂ ಸಫಲಾಂ’ ಮಾಡಿ ತೋರಿಸುವೆ. ರೈತರ ಪಾಲ್ಗೊಳ್ಳುವಿಕೆಯೊಂದಿಗೆ ಬರವನ್ನು ಹೊಡೆದೊಡಿಸಲುಬದ್ಧರಾಗಿದ್ದೇವೆ.
Related Articles
Advertisement
ರಾಜ್ಯಸರ್ಕಾರದ ಒಪ್ಪಿಗೆ ಮೇರೆಗೆ ಯೋಜನೆ ಶುಭಾರಂಭ ಮಾಡಲಾಗಿತ್ತು.ಜಲಮೂಲಗಳ ನಿರ್ಮಾಣ, ದುರಸ್ತಿಗೆ ಬಿಜೆಎಸ್ ಯಂತ್ರಗಳನ್ನುನೀಡಿದ್ದರೆ, ಮಹಾರಾಷ್ಟ್ರ ಸರ್ಕಾರ ಡೀಸೆಲ್ ವ್ಯವಸ್ಥೆ ಮಾಡಿತ್ತು. ರೈತರುತಮ್ಮದೇ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತೆಗೆದುಕೊಂಡು ಹೋಗುವ ಒಪ್ಪಂದಮೇರೆಗೆ ಜಲಮೂಲಗಳ ಮ್ಯಾಪಿಂಗ್, ದಾಖಲೆಗಳ ಕ್ರೋಡೀಕರಣದಮೂಲಕ ಗುತ್ತಿಗೆದಾರರು ಇಲ್ಲದೆಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಲಸಂವರ್ಧನೆ ಕಾರ್ಯಕೈಗೊಳ್ಳಲಾಗಿತ್ತು.
ಬಿಜೆಎಸ್ ಕೈಗೊಂಡ ಸುಜಲಾಂ ಸುಫಲಾಂ ಯೋಜನೆ ಕೇಂದ್ರನೀತಿ ಆಯೋಗ ಹಾಗೂ ಕೇಂದ್ರ ಜಲಶಕ್ತಿ ಸಚಿವರು, ವಿವಿಧ ರಾಜ್ಯಗಳಮುಖ್ಯಮಂತ್ರಿಗಳ ಗಮನ ಸೆಳೆದಿತ್ತು. ನೀತಿ ಆಯೋಗ ತನ್ನ ಸಭೆಗೆನನ್ನನ್ನು ಆಹ್ವಾನಿಸಿ ಯೋಜನೆಯ ಮಾಹಿತಿ ಪಡೆದಿತ್ತು. ಉತ್ತರ ಪ್ರದೇಶ, ಜಾರ್ಖಂಡ್ ಇನ್ನಿತರ ಮುಖ್ಯಮಂತ್ರಿಗಳು ಸಂವಾದ ನಡೆಸಿದ್ದರು.
ರಾಯಚೂರು–ಯಾದಗಿರಿಯಲ್ಲಿ ಪ್ರಯೋಗ: 2018ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬಿಜೆಎಸ್ ರಾಜ್ಯ ಅಧಿವೇಶನ ನಡೆದಿತ್ತು. ಆಗಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಅಂದಿನಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಸುಜಲಾಂಸುಫಲಾಂ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೆ. ಕರ್ನಾಟಕದಲ್ಲೂ ಅದನ್ನು ಕೈಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದೆ.
ಅದಕ್ಕೆ ಉತ್ತಮ ಸ್ಪಂದನೆವ್ಯಕ್ತವಾಗಿತ್ತಲ್ಲದೆ, ಡಿ.ಕೆ.ಶಿವಕುಮಾರ ಅವರು ಯೋಜನೆ ಅನುಷ್ಠಾನಕ್ಕೆಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕೈಗೊಳ್ಳುವಂತೆಸೂಚಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದ್ದರು.2019ರಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿಮಾಹಾರಾಷ್ಟ್ರ ಮಾದರಿಯಲ್ಲಿಯೇ ಜಲ ಸಂವರ್ಧನೆ ಕಾರ್ಯಕ್ಕೆಮುಂದಾದೆವು.
ಆರಂಭದಲ್ಲಿ ರೈತರು ಒಪ್ಪಿಕೊಳ್ಳುವ ಮನೋಭಾವತೋರಲಿಲ್ಲ. ಆ ಭಾಗದ ಶಾಸಕರು, ಇನ್ನಿತರ ಜನಪ್ರತಿನಿಧಿಗಳಸಹಕಾರ, ಅಧಿಕಾರಿಗಳ ಪ್ರೋತ್ಸಾಹದೊಂದಿಗೆ ಎರಡು ಜಿಲ್ಲೆಗಳಲ್ಲಿಯೋಜನೆ ಅನುಷ್ಠಾನಗೊಳಿಸಿದ್ದೇವೆ. ಇದೀಗ ಅಲ್ಲಿ ರೈತರುಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಶಿಲ್ಪಾಫಾರ್ಮಾಸಿಟಿಕಲ್ ಕಂಪನಿ ಸಹಕಾರ ಮಹತ್ವದ್ದಾಗಿತ್ತು.ಇನ್ನು ಆರು ತಿಂಗಳಲ್ಲಿ ಸುಜಲಾಂ ಸುಫಲಾಂ 2.0 ಮಾದರಿಅನುಷ್ಠಾನಕ್ಕೆ ಬರಲಿದೆ.
ಅದೇ ಮಾದರಿಯನ್ನು ಕರ್ನಾಟಕದಲ್ಲಿಅನುಷ್ಠಾನದ ಬಯಕೆ ನಮ್ಮದಾಗಿದೆ. ರಾಜ್ಯ ಸರ್ಕಾರ ಒಪ್ಪಿದರೆಇಡೀ ಕರ್ನಾಟಕದಲ್ಲಿ ಜಲ ಸಂವರ್ಧನೆ ಹಾಗೂ ಜಲ ಸ್ವಾವಲಂಬನೆಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತೇವೆ. ನನಗೆ ವಿಶ್ವಾಸವಿದೆ,ಮುಂಬರುವ ದಿನಗಳಲ್ಲಿ ಕರ್ನಾಟಕ ಪೂರ್ಣ ಪ್ರಮಾಣದಲ್ಲಿ ಬರಮುಕ್ತಗೊಳ್ಳಲಿದ್ದು, ಜಲ ಸ್ವಾವಲಂಬನೆ ಸಾಧಿಸಲಿದೆ.
ಐದು ಕಾರ್ಯಪಡೆಗಳ ರಚನೆ: ಕರ್ನಾಟಕದ 31 ಜಿಲ್ಲೆಗಳ ಸುಮಾರು30 ಸಾವಿರ ಗ್ರಾಮಗಳನ್ನು ಕೋವಿಡ್ ಮುಕ್ತವಾಗಿಸುವ ಸಂಕಲ್ಪವನ್ನುಬಿಜೆಎಸ್ ಮಾಡಿದೆ. ಕರ್ನಾಟಕ ಸರ್ಕಾರದ ಪ್ರೋತ್ಸಾಹ, ಸಹಕಾರ,ಬೆಂಬಲ ಅನನ್ಯ. ನಾವು ಆರಂಭದಲ್ಲಿ 9 ಜಿಲ್ಲೆಗಳಲ್ಲಿ ಈ ಕಾರ್ಯಕ್ಕೆಮುಂದಾಗಿದ್ದೆವು. ಆದರೆ, ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳ ಎಲ್ಲಗ್ರಾಮಗಳಲ್ಲಿಯೂ ಇದನ್ನು ಕೈಗೊಳ್ಳುವಂತೆ ತಿಳಿಸಿತ್ತಲ್ಲದೆ, ಈ ಬಗ್ಗೆಬಿಜೆಎಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಕುರಿತ ಅಧಿಸೂಚನೆಯನ್ನು ಹೊರಡಿಸಿದೆ.
ಅಕ್ಟೋಬರ್‌ನಲ್ಲಿ ಎದುರಾಗಬಹುದಾದ ಮೂರನೇ ಅಲೆಯನ್ನುಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಬಿಜೆಎಸ್ ಸರ್ಕಾರದ ಸಹಕಾರ,ಗ್ರಾಮಸ್ಥರ ಪಾಲುದಾರಿಕೆ, ವಿದ್ಯಾರ್ಥಿ-ಯುವಕರ ಸಹಕಾರದೊಂದಿಗೆಕಾರ್ಯನಿರ್ವಹಿಸಲಿದೆ. ಕೋವಿಡ್‌ಮುಕ್ತ ಗ್ರಾಮಗಳ ನಿರ್ಮಾಣಕ್ಕೆಪ್ರತಿ ಗ್ರಾಮದಲ್ಲೂ ಒಟ್ಟು ಐದು ಕಾರ್ಯಪಡೆಗಳನ್ನು ರಚಿಸಲಾಗುತ್ತದೆ.
ಗ್ರಾಪಂ ಅಧ್ಯಕ್ಷರು ಕಾರ್ಯಪಡೆಗಳ ಮುಖ್ಯಸ್ಥರಾಗಿರುತ್ತಾರೆ.ಗ್ರಾಪಂ ಸದಸ್ಯರು, ಗ್ರಾಮ ಸೇವಕರನ್ನೊಳಗೊಂಡ ಕಾರ್ಯಪಡೆಸೋಂಕಿತರನ್ನು ಗುರುತಿಸುವಿಕೆ, ಪರೀಕ್ಷಿಸಿ, ಚಿಕಿತ್ಸೆ ನೀಡಿಕೆಗೆ ಪೂರಕಕಾರ್ಯಪಡೆ, ಕ್ವಾರೆಂಟೈನ್ ಕೇಂದ್ರ, ಕೋವಿಡ್ ಕೇರ್ ಸೆಂಟರ್‌ಸ್ಥಾಪನೆಗೆ ಮಾರ್ಗಸೂಚಿ ಕಾರ್ಯಪಡೆ, ಕೋವಿಡ್ ಲಸಿಕೆ ನೀಡುವಸದಸ್ಯರಿಗೆ ಮಾರ್ಗಸೂಚಿ ಕಾರ್ಯಪಡೆ, ಕೋವಿಡ್ ಸಂಬಂಧಿತಸರ್ಕಾರಿ ಯೋಜನೆಗಳ ಜಾಗೃತಿಗೆ ಮಾಹಿತಿ ಕಾರ್ಯಪಡೆಗಳುಕಾರ್ಯನಿರ್ವಹಿಸಲಿವೆ.
ಗ್ರಾಮಗಳಲ್ಲಿ ಕಾರ್ಯಪಡೆ, ರಾಜ್ಯದಲ್ಲಿನ ವಿಶ್ವವಿದ್ಯಾಲಯ,ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿನಸುಮಾರು 3 ಲಕ್ಷದಷ್ಟು ಎನ್‌ಎಸ್‌ಎಸ್ ಸ್ವಯಂ ಸೇವಕರಸಹಕಾರೊಂದಿಗೆ ಕೋವಿಡ್ ಮುಕ್ತ ಗ್ರಾಮಗಳ ಕಾರ್ಯ ನಡೆಯಲಿದೆ.ಇದೆಲ್ಲರ ನಿರ್ವಹಣೆ ಹಾಗೂ ಉಸ್ತುವಾರಿಗೆ ಸುಮಾರು 400 ಜನರನ್ನುಬಿಜೆಎಸ್ ನೇಮಕ ಮಾಡಿಕೊಳ್ಳಲಿದ್ದು,ಅವರಿಗೆ ಅಗತ್ಯ ತರಬೇತಿನೀಡಲಾಗುವುದು. ಕೋವಿಡ್ ಮುಕ್ತ ಗ್ರಾಮಗಳ ರೂಪನೆಯೊಂದಿಗೆಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಲಿದೆ.
ಅಮರೇಗೌಡ ಗೋನವಾರ