ಧಾರವಾಡ: ಕೋವಿಡ್ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿಯಂತ್ರಣಕ್ಕೆ ಬರುತ್ತಿದ್ದು, ಆದರೆ ಗ್ರಾಮೀಣ ಪ್ರದೇಶಕ್ಕೆ ಹಬ್ಬುತ್ತಿರುವುದರಿಂದ ಮುಂದಿನ ಎರಡು ವಾರ ನಿರ್ಣಾಯಕವಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಹೇಳಿದರು. ನಗರದ ಸರ್ಕಿಟ್ ಹೌಸ್‌ದ ಹೊರಾಂಗಣದಲ್ಲಿ ಜಿಲ್ಲೆಯ ಹಿರಿಯ ಅಧಿ ಕಾರಿಗಳು ಹಾಗೂ ನೋಡಲ್ ಅ ಧಿಕಾರಿ ಗಳೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಮತ್ತು ನಿಯಂತ್ರಣ, ಚಿಕಿತ್ಸೆ ಕುರಿತು ಪ್ರಗತಿ ಪರಿಶೀಲನಾ ಸಭೆ ಕೈಗೊಂಡ ಅವರು ಮಾತನಾಡಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಗಮನ ನಗರಗಳ ಜತೆಗೆ ಹಳ್ಳಿ ಕೇಂದ್ರಿತವಾಗಿರಬೇಕು. ಹಳ್ಳಿ ಜನರಿಗೆ ಸೋಂಕು ತಗುಲಿದಾಗ ಬಹುತೇಕರಿಗೆ ಪ್ರತ್ಯೇಕ ಕೋಣೆ, ಶೌಚಾಲಯ ತೊಂದರೆ ಆಗುತ್ತದೆ. ಆದ್ದರಿಂದ ಅವರನ್ನು ತಾಲೂಕು ಅಥವಾ ಹೋಬಳಿ ಮಟ್ಟದ ಕೋವಿಡ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ನಿಟ್ಟಿನಲ್ಲಿ ಗ್ರಾಮಮಟ್ಟದ ಕೋವಿಡ್ ಕಾರ್ಯಪಡೆಗಳು ಹೆಚ್ಚು ಕ್ರಿಯಾಶೀಲವಾಗಬೇಕು ಎಂದರು.
ಕೇಂದ್ರ ಸರಕಾರವು ಗ್ರಾಮೀಣ ಪ್ರದೇಶದಲ್ಲಿ ಅನುಸರಿಸಲು ಕೋವಿಡ್ (ಎಸ್‌ಒಪಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಎಲ್ಲರೂ ತಪ್ಪದೇ ಅನುಸರಿಸಬೇಕು. ಹಳ್ಳಿಯಲ್ಲಿಯೆ ರ್ಯಾಟ್ ಟೆಸ್ಟಿಂಗ್ ಮಾಡಬೇಕು. ಪಾಜಿಟಿವ್ ಬಂದಿರುವ ಕುಟುಂಬ ಸದಸ್ಯರಿಗೆ ಹಾಗೂ ಸಂಪರ್ಕಿತರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕೆಂದು ಸೂಚಿಸಿದರು.
ಕೋವಿಡ್ ಎರಡನೇ ಅಲೆಯ ಸೋಂಕು ಜಿಲ್ಲೆಯಲ್ಲಿ ಹೆಚ್ಚು ಹರಡದಂತೆ ಕ್ರಮ ಕೈಗೊಂಡು ಆರಂಭದಿಂದಲೂ ಧಾರವಾಡ ಜಿಲ್ಲಾಡಳಿತ ಕೋವಿಡ್ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದೆ. ಧಾರವಾಡ ಜಿಲ್ಲೆ ಉತ್ತರ ಭಾಗದ ಕೇಂದ್ರಸ್ಥಾನದಲ್ಲಿದೆ. ಉತ್ತಮ ಆರೋಗ್ಯ ಕೇಂದ್ರ, ಸೌಲಭ್ಯಗಳನ್ನು ಹೊಂದಿದೆ. ಇದರೊಂದಿಗೆ ನಿರಂತರವಾಗಿ ಶ್ರಮಿಸುವ ಜಿಲ್ಲಾ ಧಿಕಾರಿ ನೇತೃತ್ವದ ಅ ಧಿಕಾರಿಗಳ ತಂಡವಿದೆ. ಇವರೆಲ್ಲರ ನಿರಂತರ ಪರಿಶ್ರಮದಿಂದ ಕೋವಿಡ್ ಸೊಂಕಿತರ ಚಿಕಿತ್ಸೆ, ಸೋಂಕು ಹರಡದಂತೆ ಪರಿಣಾಮಕಾರಿ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಕಾರ್ಯ ನಿರ್ವಹಿಸಿದೆ ಎಂದರು. ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್, ಪ್ರಯೋಗಾಲಯಗಳ ನಿರ್ವಹಣೆ, ಹೋಮ್ ಐಸೋಲೇಷನ್, ಆಕ್ಸಿಜನ್ ಪೂರೈಕೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಬೆಡ್, ಆಕ್ಸಿಜನ್ ಬೆಡ್, ವೆಂಟಿಲೇಟರ್ ನಿರ್ವಹಣೆ, ಕೋವಿಡ್ ಪಾಜಿಟಿವ್ ಆದವರ ಪತ್ತೆ ಕಾರ್ಯ, ಔಷ ಧ ವಿತರಣೆ, ಲಸಿಕಾಕರಣ ಮತ್ತು ಬ್ಲಾಕ್ ಫಂಗಸ್ ಕುರಿತು ವಿವಿಧ ಅಧಿ ಕಾರಿಗಳಿಂದ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ಪಡೆದರು.
ಡಿಸಿ ನಿತೇಶ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಕುರಿತು ವಿವರಿಸಿದರು. ಸಭೆಯಲ್ಲಿ ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ ರಾಘವೇಂದ್ರ ಸುಹಾಸ್, ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ, ಜಿಪಂ ಸಿಇಒ ಡಾ|ಬಿ.ಸುಶೀಲಾ, ಕಿಮ್ಸ್ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಡಿಮಾನ್ಸ್ ನಿರ್ದೇಶಕ ಡಾ|ಮಹೇಶ ದೇಸಾಯಿ, ಎಸಿ ಡಾ|ಗೋಪಾಲಕೃಷ್ಣ ಬಿ, ಜಿಲ್ಲಾ ಆರೋಗ್ಯ ಅ ಧಿಕಾರಿ ಡಾ|ಯಶವಂತ ಮದೀನಕರ ಸೇರಿದಂತೆ ಹಲವರು ಇದ್ದರು.