Advertisement

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

08:34 PM Dec 14, 2024 | Team Udayavani |

ಹುಬ್ಬಳ್ಳಿ:  ಬೆಳಗಾವಿಯ ಸುವರ್ಣಸೌಧದ ಮುಂದೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ‌ ಸಮುದಾಯದವರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್‌ ಸಂಬಂಧಿಸಿ ಗೃಹ ಸಚಿವ ಪರಮೇಶ್ವರ್‌ ಹೇಳಿಕೆ ಹಾಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮುಸ್ಲಿಮರೆಂದರೆ ಪ್ರೀತಿ. ಅವರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡುತ್ತಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್‌ ಆಕ್ಷೇಪಿಸಿದ್ದಾರೆ.

Advertisement

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಇವರು ಮುತ್ತು ಕೊಡುತ್ತಾರೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರಿಗೆ ಮುತ್ತು ಕೊಡುತ್ತಾರೆ, ಕುಕ್ಕರ್ ಬಾಂಬ್ ಇಟ್ಟವರಿಗೂ ಮುತ್ತು ಕೊಡುತ್ತಾರೆ. ಆದರೆ ಶಾಂತ ರೀತಿಯಿಂದ ಹೋರಾಟ ಮಾಡಿದ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಮುಸ್ಲಿಮರು ಬಿಟ್ಟು ಬೇರೆ ಯಾರು ಏನು ಕೇಳಬಾರದೇ?: 
ಲಿಂಗಾಯತರಿಗೆ, ಒಕ್ಕಲಿಗರಿಗೆ, ಮರಾಠರಿಗೆ ಮೀಸಲಾತಿ ಕೊಡಲ್ಲ ಅಂತ ಘೋಷಣೆ ಮಾಡಲಿ. ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡಲಾಗಿದೆ. ಅದರ ಬಗ್ಗೆ ಇವರು ಮಾತನಾಡಲ್ಲ. ಸಿಎಂ ಪ್ರಕಾರ ಮುಸ್ಲಿಮರು ಬಿಟ್ಟು ಬೇರೆ ಯಾರು ಏನು ಕೇಳಬಾರದು, ಏನೇ ಕೇಳಿದರೂ ಮುಸ್ಲಿಮರಷ್ಟೇ ಕೇಳಬೇಕು. ಕಾಂಗ್ರೆಸ್ ಸರ್ಕಾರ ನಮಗೆ ಮೀಸಲಾತಿ ಕೊಡುತ್ತೆ ಅಂತ ಗ್ಯಾರಂಟಿ ಇಲ್ಲ. ಲಾಠಿ ಚಾರ್ಜ್ ಸಂಪೂರ್ಣ ಜವಾಬ್ದಾರಿ ಸಿಎಂ ಸಿದ್ದರಾಮಯ್ಯನವರದ್ದು. ನಮ್ಮ ಸರ್ಕಾರ ಇದ್ದಾಗ ಇದಕ್ಕಿಂತ ಬಹಳ ಜನ ಕೂಡಿದ್ದರು. ಆವಾಗ ನಮ್ಮ ಸಿಎಂ ಮತ್ತು ಸಚಿವರು ಸೇರಿ ಒಂದು ಪರಿಹಾರ ಕಂಡು ಹಿಡಿಯಲು ಮುಂದಾಗಿದ್ವಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರ ಓಲೈಸುವುದು ಬಿಟ್ಟರೆ ಏನು ಇಲ್ಲ. ಹಿಂದೂ ಸಮಾಜ ಅವರಿಗೆ ಮತ ಹಾಕಿದೆ ಎನ್ನುವ ಕಲ್ಪನೆ ಕೂಡ ಅವರಿಗಿಲ್ಲ. ಕೇವಲ ಮುಸ್ಲಿಂ ಸಮಾಜದ ಬಗ್ಗೆ ಕಾಳಜಿ ಇದೆ. ಮುಸ್ಲಿಂ ಸಮಾಜಕ್ಕೂ ಕೊಡಲಿ, ನಾವು ಬೇಡ ಅನ್ನಲ್ಲ, ಆದರೆ ಬೇರೆಯವರೂ ಇದಾರಲ್ಲ. ಎಲ್ಲಾ ದುಡ್ಡು ಮೀಸಲಾತಿ ಮುಸ್ಲಿಂ ಸಮಾಜಕ್ಕೆ ಕೊಡುವುದಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಮುಸ್ಲಿಮರಿಗೆ ಶೇ. 23 ಮೀಸಲಾತಿ ಕೊಟ್ಟರೆ ಹೇಗೆ?
ಶೇ. 36 ಒಬಿಸಿ ಮೀಸಲಾತಿ ಇದೆ. ಅದರಲ್ಲಿ ಶೇ. 23 ಮುಸ್ಲಿಂ ಸಮಾಜಕ್ಕಿದೆ. ಧರ್ಮ ಆಧಾರಿತ ಮೀಸಲಾತಿ ಇಲ್ಲ ಅಂತ ಅಂಬೇಡ್ಕರ್ ಸಂವಿಧಾನ ಹೇಳಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಆಧಾರದ ಮೇಲೆ ಮೀಸಲಾತಿ ಇದೆ. ಸಂಪೂರ್ಣ ಮುಸ್ಲಿಂ ಅಂತ ನಾಲ್ಕು ಪರ್ಸೆಂಟ್ ಕೆಟಗೆರಿ ಮಾಡಿದ್ದಾರೆ. ಕೆಟಗೆರಿ 2ಎ ದಲ್ಲಿ ಶೇ. 18 ರಷ್ಟು ಮುಸ್ಲಿಂಗೆ ನೀಡಿದ್ದಾರೆ. ಕೆಟಗೆರಿ 1ರಲ್ಲಿ ಮುಸ್ಲಿಂ ಸಮಾಜಕ್ಕೆ ನೀಡಿದ್ದಾರೆ. ಮುಸ್ಲಿಂಮರಿಗೆ ಶೇ. 23 ರಷ್ಟು ಕೊಟ್ಟರೆ ಬೇರೆಯವರು ಏನು ಮಾಡಬೇಕು? ಶೇ. 4 ರಷ್ಟು ಮೀಸಲಾತಿ ಸಂವಿಧಾನ ವಿರೋಧವಾಗಿ ಅದನ್ನ ತೆಗೆದು ಮರಾಠ, ಒಕ್ಕಲಿಗರು, ಲಿಂಗಾಯತರು, ರೆಡ್ಡಿಗೆ ಕೊಡಬೇಕು ಎಂದು ಅರವಿಂದ್‌ ಬೆಲ್ಲದ್‌ ಆಗ್ರಹಿಸಿದರು.

Advertisement

ರಾಹುಲ್‌ ಕೈಯಲ್ಲಿ  ಹಿಡಿಯೋದು ಬೈಬಲ್‌:
ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನ ಹಿಡಿದುಕೊಂಡವರ ಹಾಗೆ ಬೈಬಲ್ ಹಿಡಿದುಕೊಂಡಿರುತ್ತಾರೆ. ಮಾತು ಎತ್ತಿದ್ರೆ ಕಾಂಗ್ರೆಸ್​ನವರು ಅಂಬೇಡ್ಕರ್ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಗಾಂಧಿ ಮೆಲ್ನೋಟಕ್ಕೆ ಸಂವಿಧಾನದ ಪ್ರತಿ ಹಿಡಿದುಕೊಂಡಂತೆ ಮಾಡುತ್ತಾರೆ. ಆದರೆ ಅವರು ಬೈಬಲ್ ಹಿಡಿದಿರುತ್ತಾರೆ. ಅಂಬೇಡ್ಕರ್ ಸಂವಿಧಾನ ಅಂತ ಹೇಳಿಕೊಂಡು ಆಟ ಆಡುತ್ತಾರೆ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next