ಮುಂಬಯಿ: ಸಬಾ ಆಜಾದ್ ರೊಂದಿಗೆ ಶೀಘ್ರದಲ್ಲೇ ಒಟ್ಟಿಗೆ ವಾಸಿಸುತ್ತಾರೆ ಎಂಬ ಸುದ್ದಿವಾಹಿನಿಯೊಂದರ ವರದಿಯನ್ನು ಉಲ್ಲೇಖಿಸಿ ‘ತಪ್ಪು ಮಾಹಿತಿಯನ್ನು ದೂರವಿಡುವುದು ಉತ್ತಮ’ ಎಂದು ನಟ ಹೃತಿಕ್ ರೋಷನ್ ಭಾನುವಾರ ಪ್ರತಿಕ್ರಿಯೆ ನೀಡಿದ್ದಾರೆ.
ಜೋಡಿ ಮುಂಬೈನ ‘ಮನ್ನತ್’ ಎಂಬ ಕಟ್ಟಡದ ಅಪಾರ್ಟ್ಮೆಂಟ್ ನಲ್ಲಿ ಒಟ್ಟಿಗೆ ವಾಸಿಸಲು ಯೋಜಿಸಿದ್ದಾರೆ ಎಂದು ವರದಿ ಮಾಡಲಾಗಿತ್ತು. ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು.
ಹೃತಿಕ್ ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ವರದಿಯನ್ನು ಹಂಚಿಕೊಂಡಿದ್ದು “ಇದರಲ್ಲಿ ಯಾವುದೇ ಸತ್ಯವಿಲ್ಲ” ಎಂದು ಹೇಳಿದ್ದಾರೆ.
“ಸಾರ್ವಜನಿಕ ವ್ಯಕ್ತಿಯಾಗಿ, ನಾನು ಕುತೂಹಲದ ಮಸೂರದಲ್ಲಿ ಇರುತ್ತೇನೆ ಎಂದು ಅರ್ಥಮಾಡಿಕೊಂಡಿದ್ದೇನೆ, ಆದರೆ ನಾವು ತಪ್ಪು ಮಾಹಿತಿಯನ್ನು ದೂರವಿಟ್ಟರೆ ಉತ್ತಮ, ವಿಶೇಷವಾಗಿ ನಿಮ್ಮ ವರದಿಗಾರಿಕೆಯಲ್ಲಿ ಇದು ಜವಾಬ್ದಾರಿಯುತ ಕೆಲಸವಾಗಿದೆ” ಎಂದು 48 ವರ್ಷದ ನಟ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹೃತಿಕ್ ಇತ್ತೀಚೆಗೆ ತಮಿಳಿನ ಹಿಟ್ “ವಿಕ್ರಮ್ ವೇದ”ದಲ್ಲಿ ಹಿಂದಿಯಲ್ಲೂ ಅದೇ ಹೆಸರಿನ ರಿಮೇಕ್ ಚಿತ್ರದಲ್ಲಿ ನಟಿಸಿದ್ದರು. ಅವರ ಮುಂದಿನ ಚಿತ್ರ ಭಾರತದ ಮೊದಲ ವೈಮಾನಿಕ ಆಕ್ಷನ್ ಮ್ಯಾಗ್ನಮ್ ಆಪಸ್ ಎಂದು ಪರಿಗಣಿಸಲಾಗಿರುವ “ಫೈಟರ್” ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಕೂಡ ನಟಿಸಿರುವ ಈ ಚಿತ್ರ 2024 ರಲ್ಲಿ ಬಿಡುಗಡೆಯಾಗಲಿದೆ.