Advertisement
“ವಿದ್ಯಾರ್ಥಿಗಳಿಗೆ ಮನೆಯಲ್ಲಿದ್ದುಕೊಂಡೇ ವಿವಿಧ ತಾಂತ್ರಿಕ ಪರಿಕರಗಳು, ಸಾಮಾಜಿಕ ಜಾಲತಾಣಗಳ ಮೂಲಕ ಶಿಕ್ಷಣ ಪಡೆಯಲು ಕ್ಯಾಲೆಂಡರ್ ನೆರವಾಗಲಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಇದರಲ್ಲಿ ಹಲವು ನಿರ್ದೇಶನಗಳನ್ನು ನೀಡಲಾಗಿದೆ’ ಎಂದು ಸಚಿವರು ಟ್ವಿಟ್ಟರಿನಲ್ಲಿ ಹೇಳಿದ್ದಾರೆ. ದಿವ್ಯಾಂಗ ವಿದ್ಯಾರ್ಥಿಗಳಿಗೆ ಆಡಿಯೊ ಬುಕ್, ರೇಡಿಯೊ ಕಾರ್ಯಕ್ರಮ, ವಿಡಿಯೊ ಪ್ರೋಗ್ರಾಂ ಇತ್ಯಾದಿಗಳ ಲಿಂಕ್ ಅನ್ನು ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ. “ಕೊರೊನಾದ ಈ ಸಂದಿಗ್ಧತೆಯಲ್ಲಿ ಆನ್‌ಲೈನ್ ಶಿಕ್ಷಣ ಮೂಲಕವೇ ಧನಾತ್ಮಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಹೊಸ ರೂಪದ ಈ ಶಿಕ್ಷಣ ಕ್ರಮಕ್ಕೆ ಕ್ಯಾಲೆಂಡರ್ ಎಲ್ಲ ರೀತಿಯಲ್ಲೂ ಮಾರ್ಗದರ್ಶನ ನೀಡಲಿದೆ’ ಎಂದು ಸಚಿವಾಲಯ ಹೇಳಿದೆ.
Advertisement
11 ಮತ್ತು 12ನೇ ತರಗತಿ: ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್
09:15 AM Jun 04, 2020 | mahesh |
Advertisement
Udayavani is now on Telegram. Click here to join our channel and stay updated with the latest news.