Advertisement
ಅಧಿಕಾರಿಗಳು ಪೊಲೀಸ್ ಭದ್ರತೆ ಯಲ್ಲಿ ಬಂದ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಸಿಬಂದಿಯನ್ನು ಕೆಲಸದಿಂದ ತೆಗೆಯದಂತೆ ಸೂಚಿಸಿ ದರು. ಬಳಿಕ ಶಾಸಕರ ಸೂಚನೆ ಮೇರೆಗೆ ಸಿಬಂದಿಯನ್ನು ಕರ್ತವ್ಯದಲ್ಲಿ ಮುಂದುವರಿಸಲಾಗಿದೆ. ಈ ಸಂದರ್ಭ ದಲ್ಲಿ ಸ್ಥಳೀಯರು ಸಹಿತ ನೂರಕ್ಕೂ ಹೆಚ್ಚು ಮುಂದಿ ಸೇರಿದ್ದರು.
ತಾಲೂಕಿನ 4 ಸ್ಟೇಷನ್‌ಗಳಲ್ಲಿ ಸ್ಥಳೀಯ 22 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಗ್ಯಾಸ್ ಪೈಪ್ ಲೈನ್ ಹಾದು ಹೋಗಲು ಬೆಳ್ತಂಗಡಿ ತಾಲೂಕಿನ ಅದೆಷ್ಟೋ ಜನರ ಕೃಷಿ ಭೂಮಿಯನ್ನು ವಶಪಡಿಸಿಕೊಂಡ ಕಂಪೆನಿ ಆಗ ಜಾಗದ ಮಾಲಕರಿಗೆ ಉದ್ಯೋಗದ ಭರವಸೆ ನೀಡಿತ್ತು. ನೀಡಿದ ಭರವಸೆಯಂತೆ ಜಾಗದ ಮಾಲಕರಿಗೆ ಸೆಕ್ಯೂರಿಟಿ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ನೀಡಿ ಕೈ ತೊಳೆದುಕೊಂಡಿತ್ತು. ಇತ್ತ ಕೃಷಿ ಭೂಮಿಯನ್ನೂ ಕಳೆದುಕೊಂಡು ಕಂಪೆನಿಯನ್ನು ನಂಬಿ ಕೆಲಸಕ್ಕೆ ಸೇರಿದ್ದೆವು. ಇದೀಗ ಕೆಲಸವೂ ಇಲ್ಲ, ನಮ್ಮ ಭೂಮಿಯೂ ಇಲ್ಲ. ಇಷ್ಟು ವರ್ಷ ಕೆಲಸ ನಿರ್ವಹಿಸಿದ ಅನುಭವ ಇದ್ದ ನಮ್ಮನ್ನು ಏಕಾಏಕಿ ತೆಗೆದು ಹಾಕುತ್ತಿರುವುದು ಸರಿಯಲ್ಲ. ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಸಿಬಂದಿ ಪ್ರತಿಕ್ರಿಯಿಸಿದ್ದಾರೆ.
Related Articles
ಸಿಬಂದಿಯನ್ನು ಕೆಲಸದಿಂದ ವಜಾಗೊಳಿಸದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇರೆ ಉದ್ಯೋಗ ಅಥವಾ ಇದೇ ಕೆಲಸದಲ್ಲಿ ಮುಂದುವರಿಸುವ ಕುರಿತಾಗಿ ಮೇ 6ರಂದು ಸಂಸದ, ಶಾಸಕರು ಹಾಗೂ ಎಚ್.ಪಿ.ಸಿ.ಎಲ್. ಅಧಿಕಾರಿಗಳೊಂದಿಗೆ ಮಂಗಳೂರಿನಲ್ಲಿ ಸಭೆ ಕರೆಯಲಾಗಿದೆ.
- ಹರೀಶ್ ಪೂಂಜ,ಶಾಸಕರು
Advertisement