Advertisement
ಕಂಪೆನಿಯ ಗುಡ್ಡೆಯಂಗಡಿ, ಮಳಲಿ, ಕೈಕಂಬ, ಕಂದಾವರ ಘಟಕದ ಸ್ಥಳೀಯ 11 ಮಂದಿ ನೌಕರರನ್ನು ಸಂಸ್ಥೆ ಕೆಲಸದಿಂದ ತೆಗೆದು ಹಾಕಿತ್ತು. ಕಳೆದ 6 ವರ್ಷಗಳಿಂದ ಅವರು ಪಾಳಿಯಲ್ಲಿ ಕಾವಲುಗಾರ ಸೇವೆ ನಿರ್ವಹಿಸುತ್ತಿದ್ದರು. ಕೆಲಸ ಕಳೆದುಕೊಂಡ ಸಿಬಂದಿ ಮೇ 3ರಂದು ಬೆಳಗ್ಗೆ ಗುಡ್ಡೆಯಂಗಡಿ ಕಂಪೆನಿ ಗೇಟಿನ ಮುಂದೆ ಪ್ರತಿಭಟನೆ ನಡೆಸಿದರು.
ಮಾಹಿತಿ ತಿಳಿದ ಶಾಸಕರು ಸ್ಥಳಕ್ಕೆ ಬಂದಾಗ ಕೆಲಸ ಕಳೆದು ಕೊಂಡ ಭದ್ರತಾ ಸಿಬಂದಿ ತಮ್ಮ ಅಳಲನ್ನು ತೋಡಿ ಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಂಸ್ಥೆಯ ಆಡಳಿತ ವರ್ಗವನ್ನು ಪ್ರತಿ ಭಟನ ಸ್ಥಳಕ್ಕೆ ಕರೆಯಿಸಿ ಕಷ್ಟದ ಕಾಲ ದಲ್ಲಿ ಸ್ಥಳೀಯ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಿದ್ದಾರೆ. ಆದರೆ ಕಂಪೆನಿ ಸಮರ್ಥವಾಗಿ ಕಾರ್ಯ ನಡೆಸಿ ಕೊಂಡು ಹೋಗುವ ಈ ಸಂದರ್ಭ ಕಾರ್ಮಿಕರ ಮೇಲೆ ಯಾವುದೇ ದೂರುಗಳಿಲ್ಲದೆ, ಪೂರ್ವ ಮಾಹಿತಿ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸುವುದು ಸರಿಯಲ್ಲ. ಆರಂಭದಿಂದ ಕಂಪೆನಿಯ ಏಳಿಗೆಗೆ ದುಡಿದ ಸ್ಥಳೀಯ ಸಿಬಂದಿಗೆ ಅನ್ಯಾಯ ಮಾಡಬೇಡಿ ಎಂದರು. ಈ ಕಂಪೆನಿ ನಿರ್ಮಿಸಲು ತಾವು ನೀಡಿದ ಜಮೀನಿಗೆ ಯಾವುದೇ ದರವನ್ನು ಪಡೆಯದೆ ಅವರು ಕಂಪೆನಿಯಲ್ಲಿ ಕೆಲಸ ಪಡೆದು ದುಡಿಯುತ್ತಿದ್ದು, ಮಾನವೀಯತೆ ನೆಲೆ ಯಲ್ಲಿ ಅವರನ್ನು ಕರ್ತವ್ಯದಲ್ಲಿ ಉಳಿಸಿ ಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
Related Articles
Advertisement
ಮೇಲಧಿಕಾರಿ ಸೂಚನೆವರೆಗೆ ಕೆಲಸದಲ್ಲಿ ಮುಂದುವರಿಕೆಸ್ಥಳಕ್ಕೆ ಅಗಮಿಸಿದ ಕಂಪೆನಿಯ ಜನರಲ್ ಮ್ಯಾನೇಜರ್ ರಾಜಶೇಖರನ್ ಮಾತನಾಡಿ, ಪ್ರಸ್ತುತ ಎಲ್ಲ ಕಂಪೆನಿಗಳಲ್ಲೂ ಮಾಜಿ ಸೈನಿಕರನ್ನು ಪಹರೆ ಕೆಲಸಕ್ಕೆ ನೇಮಿಸುವಂತೆ ಸರಕಾರದ ಆದೇಶವಿದೆ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಕಂಪೆನಿಯ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ ಮುಂದಿನ ಕ್ರಮಗಳ ಬಗ್ಗೆ ತಿಳಿಸುತ್ತೇವೆ. ಅಲ್ಲಿಯವರೆಗೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವುದಾಗಿ ತಿಳಿಸಿದರು.