ಧರ್ಮಶಾಲಾ: ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನ ಮೇಲೆ 9ನೇ ತರಗತಿಯ ಬಾಲಕಿಗೆ ಆಶ್ಲೀಲ ವಿಡಿಯೋ ತೋರಿಸಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ.
ಹಿಮಾಚಲ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಈ ಆರೋಪ ಕೇಳಿ ಬಂದಿದೆ. ಆರೋಪಿ ಶಿಕ್ಷಕ ಜುಂಗಾದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಡ್ರಾಯಿಂಗ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು,ಮೇ 3, 2024 ರಂದು ಧಲ್ಲಿ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ ಎಂದು ʼಪಿಟಿಐʼ ವರದಿ ಮಾಡಿದೆ.
ದೂರಿನಲ್ಲೇನಿದೆ:
ಗುರುವಾರ (ಮೇ.2 ರಂದು) ಸ್ಪೆಷೆಲ್ ಕ್ಲಾಸ್ ಬಳಿಕ ತನ್ನ ಮಗಳನ್ನು ಶಿಕ್ಷಕ ಶಾಲೆಯಲ್ಲಿರುವಂತೆ ಹೇಳಿದ್ದಾನೆ. ಆರೋಪಿಯು ತನ್ನ ಫೋನ್‌ನಲ್ಲಿ ಬೆತ್ತಲೆ ಹುಡುಗಿಯ ಅಶ್ಲೀಲ ವಿಡಿಯೋವನ್ನು ಬಾಲಕಿಗೆ ಬಲವಂತವಾಗಿ ತೋರಿಸಿದ್ದಾನೆ. ಇದಲ್ಲದೆ ಆತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ತಾಯಿ ಹೇಳಿದ್ದಾರೆ.
ಈ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಆರೋಪಿ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪೋಕ್ಸೊ ಕಾಯ್ದೆಯ ಸೆಕ್ಷನ್ 10 ಮತ್ತು 12 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 354 ಎ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ ನಂತರ, ಶಿಕ್ಷಕನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.