ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಸುಮಾರು 50 ಸಾವಿರ ಜನ ಸೇರುವ ನಿರಿಕ್ಷೆ ಇರುವ ಈ ಬೃಹತ್ ಸಮಾವೇಶದಲ್ಲಿ ಮಿನಿ ಭಾರತ ಸಮುದಾಯದ ಸಾಂಸ್ಕೃತಿಕ ಲೋಕವೇ ಇಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.
‘ಹೌ ಡು ಯು ಡು?’ ಎಂದು ಔಪಚಾರಿಕವಾಗಿ ಕ್ಷೇಮ ವಿಚಾರಿಸುವ ಪರಿಪಾಠವಿದೆ ಅದೇ ನೈಋತ್ಯ ಅಮೆರಿಕಾದ ಕೆಲ ಭಾಗಗಳಲ್ಲಿ ಇದನ್ನೇ ಸಂಕ್ಷಿಪ್ತವಾಗಿ ‘ಹೌಡಿ’ ಎಂದು ಕರೆಯುತ್ತಾರೆ. ಈ ಹೆಸರನ್ನೇ ನರೇಂದ್ರ ಮೋದಿ ಅವರ ಈ ಕಾರ್ಯಕ್ರಮಕ್ಕೆ ಆಯೋಜಕರು ಇರಿಸಿದ್ದು ವಿಶೇಷವಾಗಿದೆ. ಟೆಕ್ಸಾಸ್ ಇಂಡಿಯಾ ಫೊರಂ ಈ ಕಾರ್ಯಕ್ರವನ್ನು ಆಯೋಜಿಸಿದ್ದು ಇದರೊಂದಿಗೆ ಅಕ್ಷಯ ಪಾತ್ರೆ ಪೌಂಡೇಶನ್, ಪತಂಜಲಿ ಯೋಗಪೀಠ, ಪಾಟೀದಾರ್ ಫೌಂಡೇಶನ್ ಸೇರಿದಂತೆ 650ಕ್ಕೂ ಹೆಚ್ಚಿನ ಸಂಸ್ಥೆಗಳು ಸಹಯೋಗ ನೀಡುತ್ತಿವೆ.
ಈ ಬೃಹತ್ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಭಾಗವಹಿಸಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಭಾಷಣವನ್ನು ಮಾಡಲಿದ್ದು ಇದರತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ.
‘ಹೌಡಿ ಮೋದಿ’ ಕಾರ್ಯಕ್ರಮದ ಪ್ರಮುಖ ಅಂಶಗಳ LIVE Updates ಇಲ್ಲಿದೆ…
Related Articles
ಹೀಗಿದೆ ಹೌಡಿ ಮೋದಿ ಕಾರ್ಯಕ್ರಮದ ಸಂಕ್ಷಿಪ್ತ ನೋಟ:
ಭಾರತೀಯ ಕಾಲಮಾನ 9.20 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಯಾಗಿ ವೇದಿಕೆಗೆ ಆಗಮಿಸಲಿದ್ದಾರೆ.
9.20 ರಿಂದ 9.30ರವರೆಗೆ ಹ್ಯೂಸ್ಟನ್ ಮೇಯರ್ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರನ್ನು ಸ್ವಾಗತಿಸಲಿದ್ದಾರೆ.
9.39 ರಿಂದ 10.09ರವರೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತನಾಡಲಿದ್ದಾರೆ.
10.15ರಿಂದ ಪ್ರಧಾನಿ ಮೋದಿ ಅವರು ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ವೇದಿಕೆಯಲ್ಲಿ ಮೆಳೈಸಿದ ಭಾರತೀಯ ಸಂಸ್ಕೃತಿ. ಜನಮನ ಸೂರೆಗೊಂಡ ಯೋಗ ಪ್ರದರ್ಶನ.
ಪ್ರಧಾನಿ ಮೋದಿ ಆಗಮನಕ್ಕೆ ಕಾತರದಿಂದ ಕಾಯುತ್ತಿರುವ ಅನಿವಾಸಿ ಭಾರತೀಯರು.
ಹ್ಯೂಸ್ಟನ್ ನ ಎನ್.ಆರ್.ಜಿ. ಸ್ಟೇಡಿಯಂ ತುಂಬೆಲ್ಲಾ ‘ಭಾರತ್ ಮಾತಾ ಕೀ ಜೈ’ ಎಂಬ ಉದ್ಘೋಷ ಕೇಳಿಬರುತ್ತಿದೆ. ‘ನಾವು ಈ ವೇದಿಕೆಯ ಮೇಲೆ ಮೋದಿ ಅವರನ್ನು ನೋಡಲು ಉತ್ಸುಕರಾಗಿದ್ದೇವೆ. ಅವರ ಮಾತುಗಳನ್ನು ಕೇಳಲು ನಾವೆಲ್ಲಾ ಕಾತರದಿಂದ್ದೇವೆ. ಮೋದಿ ಅವರು ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಒಂದು ಸ್ಪೂರ್ತಿಯ ಸೆಲೆಯಾಗಿದ್ದಾರೆ’ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ಅನಿವಾಸಿ ಭಾರತೀಯರೊಬ್ಬರ ಅಭಿಪ್ರಾಯವಾಗಿದೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹ್ಯೂಸ್ಟನ್ ಗೆ ಹೊರಟಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆಯಿಂದಾಗಿ ಭಾರತಕ್ಕೆ ಇನ್ನಷ್ಟು ವಿದೇಶಿ ಬಂಡವಾಳ ಹರಿದು ಬರುವುದು ಖಚಿತ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ‘ಹೌಡಿ ಮೋದಿ’ ಕಾರ್ಯಕ್ರಮದ ಕುರಿತಾಗಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಮುಖಕ್ಕೆ ತ್ರಿವರ್ಣ ಬಳಿದುಕೊಂಡು ರಾಷ್ಟ್ರಧ್ವಜವನ್ನು ಹಿಡಿದುಕೊಂಡ ಯುವ ಸಮೂಹ ಹೌಡಿ ಮೋದಿ ಕಾರ್ಯಕ್ರಮಕ್ಕಾಗಿ ಇದೀಗ ಎನ್.ಆರ್.ಜಿ. ಸ್ಟೇಡಿಯಂನತ್ತ ಬರುತ್ತಿದ್ದಾರೆ.