Advertisement

ಜಗತ್ತಿನ ಮಾಧ್ಯಮಗಳ ಗಮನಸೆಳೆದ ಮೋದಿ ಸರಕಾರದ  “ಆರ್ಟಿಕಲ್ 370 ರದ್ದು” !

05:37 PM Aug 06, 2019 | Nagendra Trasi |

ನವದೆಹಲಿ: ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಕಳೆದ ಒಂದು ವಾರಗಳ ಬೆಳವಣಿಗೆ, ಸೇನೆ ಜಮಾವಣೆ ಎಲ್ಲವೂ ದೇಶ, ವಿದೇಶಗಳ ಮಾಧ್ಯಮಗಳಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ನಡುವೆಯೇ ಸೋಮವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಅಧಿಕಾರವನ್ನು ರದ್ದುಗೊಳಿಸಿರುವುದನ್ನು ಘೋಷಿಸಿರುವ ಸುದ್ದಿ ಜಾಗತಿಕವಾಗಿ ಪ್ರಮುಖ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

Advertisement

ದ ಗಾರ್ಡಿಯನ್:

ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಬಗ್ಗೆ ಯಾವುದೇ ಸರಕಾರ ತೆಗೆದುಕೊಳ್ಳದಂತಹ ತೀವ್ರ ಸ್ವರೂಪದ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಮಾಡಿದೆ ಎಂದು ಲಂಡನ್ ಮೂಲದ ದ ಗಾರ್ಡಿಯನ್ ವರದಿ ಮಾಡಿದೆ. ಒಂದು ರಾಜ್ಯವನ್ನು ಎರಡನ್ನಾಗಿ ವಿಭಜಿಸುವುದು ನಾಟಕೀಯ ಬೆಳವಣಿಗೆಯಾಗಿದೆ. ಜಮ್ಮು-ಕಾಶ್ಮೀರದಲ್ಲಿನ ತೀವ್ರ ಪ್ರತಿರೋಧವನ್ನು ಸರಕಾರ ಎದುರಿಸಬಹುದಾಗಿದೆ ಎಂದು ವರದಿ ಎಚ್ಚರಿಸಿದೆ.

ಪರಿಣಾಮಕಾರಿ ಹೆಜ್ಜೆ: ಬಿಬಿಸಿ

ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತ ಸರಕಾರ ಪರಿಣಾಮಕಾರಿ ಹೆಜ್ಜೆಯನ್ನು ಇಟ್ಟಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಬೆಳವಣಿಗೆಯಿಂದ ಬಹುತೇಕ ದೊಡ್ಡ ಮಟ್ಟದ ಅಶಾಂತಿಗೆ ಕಾರಣವಾಗಬಹುದು ಎಂದು ವರದಿ ವಿವರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಬಿಗುವಿನ ವಾತಾವರಣವಿದೆ ಎಂದು ಹೇಳಿದೆ.

Advertisement

ಸಿಎನ್ ಎನ್:ಕ್ಷೋಭೆಗೊಳಗಾಗುವ ಬದಲಾವಣೆ

ಜಮ್ಮು-ಕಾಶ್ಮೀರದ ವಿಚಾರದ ಆಡಳಿತದಲ್ಲಿ ಮೋದಿ ಸರಕಾರ ಕ್ಷೋಭೆಗೊಳಗಾಗುವ ಬದಲಾವಣೆಯನ್ನು ಘೋಷಿಸಿದೆ ಎಂದು ಅಮೆರಿಕ ಮೂಲದ ಸಿಎನ್ ಎನ್ ವರದಿ ಮಾಡಿದೆ. ಕಾಶ್ಮೀರ್ ಇನ್ ಲಾಕ್ ಡೌನ್ ಹೆಡ್ ಲೈನ್ ನಲ್ಲಿ ವರದಿ ಮಾಡಿರುವ ಸಿಎನ್ ಎನ್, ರಾಜ್ಯದ ಸ್ಥಾನಮಾನ ರದ್ದುಪಡಿಸುವ ನಿರ್ಧಾರವನ್ನು ಭಾರತ ಬಹಿರಂಗಗೊಳಿಸಿದೆ. ಇದೊಂದು ಕಾಶ್ಮೀರಿಗಳಿಗೆ ಮಾನಸಿಕ ಆಘಾತ ಎಂದು ಚಿಂತಕರ ಚಾವಡಿ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

ದ ವಾಷಿಂಗ್ಟನ್ ಪೋಸ್ಟ್: ಸಂಬಂಧ ಮತ್ತಷ್ಟು ಹದಗೆಡಲಿದೆ

ದ ಸ್ಟೇಜ್ ಫಾರ್ ನ್ಯೂ ಕ್ಲ್ಯಾಶಸ್ ಎಂಬ ಹೆಡ್ ಲೈನ್ ನಲ್ಲಿ ವರದಿ ಮಾಡಿರುವ ದ ವಾಷಿಂಗ್ಟನ್ ಪೋಸ್ಟ್, ಆರ್ಟಿಕಲ್ 370 ರದ್ದು ಪಡಿಸುವ ಮೂಲಕ ನವದೆಹಲಿ ಮತ್ತು ಜಮ್ಮು ಕಾಶ್ಮೀರದ ನಡುವಿನ ಸಂಬಂಧ ಮತ್ತಷ್ಟು ಹದಗೆಡಲಿದೆ ಎಂದು ಎಚ್ಚರಿಸಿದೆ.

ದ ಡಾನ್:ಗುರಿ ತಲುಪಲು ಸಾಧ್ಯವಿಲ್ಲದ ಸಾಧನೆ

ಪಾಕಿಸ್ತಾನ ಮೂಲದ ದ ಡಾನ್ ನ್ಯೂಸ್ ನಿರೀಕ್ಷೆಯಂತೆ ಭಾರತದ ನಿರ್ಧಾರವನ್ನು ಕಟುವಾಗಿ ಟೀಕಿಸಿದೆ. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನೇ ಕಲಂ ಅನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರ ಗುರಿ ತಲುಪಲು ಸಾಧ್ಯವಿಲ್ಲದ ಸಾಧನೆಯಾಗಿದೆ ಎಂದು ತಿಳಿಸಿದೆ. ಈ ನಿರ್ಧಾರದಿಂದ ಕಾಶ್ಮೀರಿಗಳ ಭಯ ಭೌಗೋಳಿಕವಾಗಿ ಸ್ಥಾನಪಲ್ಲಟವಾಗಲಿದ್ದು, ಬಹುಸಂಖ್ಯಾತ ಮುಸ್ಲಿಮರು, ಬಹುಸಂಖ್ಯಾತ ಹಿಂದೂಗಳ ಪ್ರದೇಶ ಎಂಬಂತಾಗಲಿದೆ ಎಂದು ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next