Advertisement

Imran khan;ಪಕ್ಷದ ವೋಟ್ ಬ್ಯಾಂಕ್ ಹೆಚ್ಚುತ್ತಿರುವಾಗ ಹೇಗೆ ತುಳಿಯುತ್ತೀರಿ?: ಇಮ್ರಾನ್

03:47 PM Aug 07, 2023 | Vishnudas Patil |

ಇಸ್ಲಾಮಾಬಾದ್ : ”ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ನಾನು ಮತ್ತು ಬೆಂಬಲಿಗರ ವಿರುದ್ಧ ಸೇಡಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ನನ್ನ ಪಕ್ಷವು ದೇಶವನ್ನು ಮುನ್ನಡೆಸಲಿದೆ” ಎಂದು ಬಂಧನಕ್ಕೆ ಒಂದು ದಿನ ಮೊದಲು, ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೊಂಡಿದ್ದರು.

Advertisement

“ಪಿಟಿಐ (ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್) ಚುನಾವಣೆಯಲ್ಲಿ ಮುನ್ನಡೆಯುತ್ತದೆ ಎಂಬ ಭಯ ಮಿಲಿಟರಿ ಮತ್ತು ಸರ್ಕಾರಕ್ಕೆ ಇದೆ. ಈಗಾಗಲೇ ನನ್ನ ಪಕ್ಷವನ್ನು ಹತ್ತಿಕ್ಕಲು ಯೋಜಿಸಿದ್ದರು,”ಪಕ್ಷದ ಮತಬ್ಯಾಂಕ್ ಹೆಚ್ಚುತ್ತಿರುವಾಗ ನೀವು ಅದನ್ನು ಹೇಗೆ ನಾಶಮಾಡುತ್ತೀರಿ? ”ಎಂದು 70 ವರ್ಷದ ಕ್ರಿಕೆಟಿಗ-ರಾಜಕಾರಣಿ ಖಾನ್ ಶುಕ್ರವಾರ ರಾತ್ರಿ ಯೂಟ್ಯೂಬ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದರು.

ಪಾಕಿಸ್ತಾನದ ಪ್ರಸ್ತುತ ರಾಷ್ಟ್ರೀಯ ಅಸೆಂಬ್ಲಿಯು ಆಗಸ್ಟ್ 12 ರಂದು ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ. ಪಾಕಿಸ್ತಾನದ ಸಂವಿಧಾನದಲ್ಲಿ ನಿಗದಿಪಡಿಸಿದಂತೆ 60 ದಿನಗಳ ಒಳಗೆ ಹೊಸ ಸಾರ್ವತ್ರಿಕ ಚುನಾವಣೆ ನಡೆಸಬೇಕು. ಪ್ರಸ್ತುತ ಸರ್ಕಾರವು ಆಗಸ್ಟ್ 12 ರ ಮೊದಲು ಕೆಳಮನೆಯನ್ನು ವಿಸರ್ಜಿಸಿದರೆ, ಚುನಾವಣೆಯನ್ನು ಮತ್ತಷ್ಟು ಮುಂದೂಡಬಹುದು ಮತ್ತು 90 ದಿನಗಳಲ್ಲಿ ಚುನಾವಣೆ ನಡೆಸಬಹುದು.

ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ದುಬಾರಿ ರಾಜ್ಯ ಉಡುಗೊರೆಗಳನ್ನು ಮಾರಾಟ ಮಾಡಿದ ತೋಶಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ 70 ವರ್ಷದ ಮಾಜಿ ಪ್ರಧಾನಿಯನ್ನು ಲಾಹೋರ್‌ನ ಜಮಾನ್ ಪಾರ್ಕ್ ನಿವಾಸದಿಂದ ಶನಿವಾರ ಬಂಧಿಸಲಾಗಿದೆ. ಅವರನ್ನು ರಾವಲ್ಪಿಂಡಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಕ್ರಮ ಇಮ್ರಾನ್ ಖಾನ್ ಅವರನ್ನು ರಾಜಕೀಯದಿಂದ ಅನರ್ಹಗೊಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next