Advertisement

ಕೋವಿಡ್ ಹೊತ್ತಲ್ಲಿ ಭವಿಷ್ಯ ನಿಧಿ ಹಣ ಬೇಕಾ? –ಇಲ್ಲಿದೆ ಸಂಪೂರ್ಣ ಮಾಹಿತಿ 

08:33 AM May 12, 2020 | Hari Prasad |

ಲಾಕ್‌ಡೌನ್‌ ಪರಿಣಾಮ ಹಣ ಓಡಾಡುತ್ತಿಲ್ಲ, ಖರ್ಚು ಹೆಚ್ಚಾಗಿದೆ ಮತ್ತು ನಿಮಗೀಗ ತುರ್ತು ಹಣದ ಅವಶ್ಯಕತೆ ಇದೆ.

Advertisement

ಅಂತಹವರು ಈಗ ತಮ್ಮ ಭವಿಷ್ಯನಿಧಿ ಖಾತೆಯಿಂದ ಮುಂಗಡವಾಗಿ ಹಣ ಪಡೆಯಲು ಅವಕಾಶವಿದೆ. ಅದೂ ಕೋವಿಡ್‌-19 ಹೆಸರಲ್ಲಿ. ಹೇಗೆ ಗೊತ್ತಾ?

ನಾಲ್ಕು ಹಂತಗಳನ್ನು ಗಮನದಲ್ಲಿಡಿ
1. ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿರುವ ಶೇ.75ರಷ್ಟು ಹಣ ಅಥವಾ ನಿಮ್ಮ ಮೂಲವೇತನದ ಮೂರು ತಿಂಗಳ ಮೊತ್ತ+ಡಿಎ…ಇವೆರಡರಲ್ಲಿ ಯಾವುದು ಕಡಿಮೆಯೋ, ಆ ಮೊತ್ತವನ್ನು ನೀವು ಪಡೆಯಬಹುದು.

2. ಅರ್ಜಿಯನ್ನು ಇಪಿಎಫ್ಒ ವೆಬ್‌ಸೈಟ್‌ ಮೂಲಕ ಅಂತರ್ಜಾಲದಲ್ಲೇ ಸಲ್ಲಿಸಬೇಕು.

3. ಒಂದು ವೇಳೆ ಈಗಾಗಲೇ ಬೇರೆ ಯಾವುದೋ ಕಾರಣಕ್ಕೆ ಹಣ ಪಡೆಯಲು ನೀವು ಅರ್ಜಿ ಸಲ್ಲಿಸಿರಬಹುದು. ಅದರ ಜೊತೆಗೆ ಕೋವಿಡ್‌-19 ಅರ್ಜಿ ಮೂಲಕವೂ ಹಣ ಪಡೆಯಲು ತಕರಾರಿಲ್ಲ.

Advertisement

4. ಕೋವಿಡ್‌-19 ಅರ್ಜಿ ಮೂಲಕ ಒಮ್ಮೆ ಮಾತ್ರ ಹಣ ಪಡೆಯಬಹುದು.

ಹಣ ಪಡೆಯುವ ಲೆಕ್ಕಾಚಾರ ಹೇಗೆ?

1.ಮಾಸಿಕ ಮೂಲವೇತನ +ಡಿಎ 30,000 ರೂ. ಇದ್ದರೆ…
ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ 2 ಲಕ್ಷ ರೂ. ಇದೆ ಎಂದಿಟ್ಟುಕೊಳ್ಳೋಣ. ನಿಮ್ಮ ಮೂರು ತಿಂಗಳ ಮಾಸಿಕ ವೇತನ + ಡಿಎ ಸೇರಿ 90,000 ರೂ. ಆಗುತ್ತದೆ. ಇನ್ನೊಂದು ಕಡೆ ಶೇ.75ರ ಲೆಕ್ಕಾಚಾರ ಹಿಡಿದರೆ, 1.5 ಲಕ್ಷ ರೂ. ಆಗುತ್ತದೆ. ಇವೆರಡರಲ್ಲಿ ಕಡಿಮೆ 90,000 ರೂ. ಆಗುವುದರಿಂದ ಈ ಮೊತ್ತ ಕೈಗೆ ಸಿಗುತ್ತದೆ.

2. ಮಾಸಿಕ ಮೂಲವೇತನ +ಡಿಎ 55,000 ರೂ. ಇದ್ದರೆ…
ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ 2 ಲಕ್ಷ ರೂ. ಇದೆ ಎಂದುಕೊಳ್ಳೋಣ. ನಿಮ್ಮ ಮೂರು ತಿಂಗಳ ವೇತನ ಮೊತ್ತ+ಡಿಎ 1,65,000 ರೂ. ಆಗುತ್ತದೆ. ಇನ್ನೊಂದು ಕಡೆ ಶೇ.75ರಷ್ಟು ಎಂದು ಲೆಕ್ಕಾಚಾರ ಮಾಡಿದರೆ, 1.5 ಲಕ್ಷ ರೂ. ಮೊತ್ತವಾಗುತ್ತದೆ. ಇವೆರಡರಲ್ಲಿ ಕಡಿಮೆ 1.5 ಲಕ್ಷ ರೂ. ಆಗುವುದರಿಂದ ನಿಮಗೆ ಇಷ್ಟೇ ಮೊತ್ತ ಸಿಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
1. https://unifiedportalmem.epfindia.gov.in/memberinterface ಈ ವೆಬ್‌ಸೈಟ್‌ನಲ್ಲಿ ಮೊದಲು ಲಾಗ್‌ಇನ್‌ ಆಗಿ.

2 ಅಲ್ಲಿ ಆನ್‌ಲೈನ್‌ ಸರ್ವಿಸಸ್‌-ಕ್ಲೈಮ್‌ (ಫಾರ್ಮ್ 31, 19, 10ಸಿ, 10ಡಿ) ಬಟನ್ ಒತ್ತಬೇಕು.

3 ನಿಮ್ಮ ಬ್ಯಾಂಕ್‌ ಖಾತೆ ಸಂಖ್ಯೆ ಒತ್ತಿ ಪರಿಶೀಲಿಸಬೇಕು.

4 ಪ್ರೊಸೀಡ್‌ ಫಾರ್‌ ಆನ್‌ಲೈನ್‌ ಕ್ಲೈಮ್‌ ಮೇಲೆ ಒತ್ತಿ.

5 ಭವಿಷ್ಯ ನಿಧಿ ಮುಂಗಡ ಅಥವಾ ಪಿಎಫ್ ಅಡ್ವಾನ್ಸ್‌ ಅನ್ನು ಒತ್ತಿ.

6 ಅಲ್ಲಿ ಉದ್ದೇಶವಾಗಿ ಔಟ್‌ಬ್ರೇಕ್‌ ಆಫ್ ಪ್ಯಾಂಡೆಮಿಕ್‌ (ಕೋವಿಡ್‌-19) ಒತ್ತಿ.

7 ನಿಮಗೆ ಬೇಕಿರುವ ಹಣ, ಹಾಗೆಯೇ ಚೆಕ್‌ನ ಸ್ಕ್ಯಾನ್‌ ಮಾಡಲ್ಪಟ್ಟ ಚಿತ್ರ, ವಿಳಾಸವನ್ನು ನಮೂದಿಸಿ.

8 ಗೆಟ್‌ ಆಧಾರ್‌ ಒಟಿಪಿ ಮೇಲೆ ಒತ್ತಿ.

9 ನಂತರ ಒಟಿಪಿಯನ್ನು (ಒನ್‌ಟೈಮ್‌ ಪಾಸ್‌ವರ್ಡ್‌) ನಮೂದಿಸಿ.

Advertisement

Udayavani is now on Telegram. Click here to join our channel and stay updated with the latest news.

Next