ನ್ಯೂಯಾರ್ಕ್: ನೆಟ್ ಫ್ಲಿಕ್ಸ್ ಎಂಬುದು ಜಗತ್ತಿನ ಅತೀ ದೊಡ್ಡ ಸಬ್ ಸ್ಕ್ರಿಫ್ಷನ್ ಸ್ಟ್ರೀಮಿಂಗ್ ಸರ್ವಿಸ್ ಆಗಿದ್ದು ಇತರ ಓಟಿಟಿ ಗಳಿಗೆ ಹೋಲಿಸಿದರೆ ಇದರ ಚಂದಾದಾರಿಕೆ ಕೂಡ ದುಬಾರಿ. ಡಿಸ್ನಿ ಹಾಟ್ ಸ್ಟಾರ್, ಅಮೇಜಾನ್ ಪ್ರೈಮ್ ವಿಡಿಯೋ ಮುಂತಾದ ಒಟಿಟಿ (Over the Top) ಫ್ಲ್ಯಾಟ್ ಫಾರ್ಮ್ ಗಳು ಕೈಗಟುಕವ ದರದಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ.
ಅದಾಗ್ಯೂ ನೆಟ್ ಫ್ಲಿಕ್ಸ್ ಇದೀಗ ನೂತನ ಸೇವೆಯನ್ನು ಪರಿಚಯಿಸಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಸಿನಿಮಾ, ಟಿವಿ ಕಾರ್ಯಕ್ರಮ, ಡಾಂಕ್ಯುಮೆಂಟರಿಗಳನ್ನು ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಆದರೇ ಇಲ್ಲೊಂದು ಟ್ವಿಸ್ಟ್ ಇದ್ದು, ಬಳಕೆದಾರರನ್ನು ಸೆಳೆಯಲು ಈ ತಂತ್ರ ಅನುಸರಿಸಲಾಗಿದೆ ಎನ್ನಲಾಗುತ್ತಿದೆ.
ಉಚಿತ ಸ್ಟ್ರೀಮಿಂಗ್ ನಲ್ಲಿ ಕೆಲವೇ ಕೆಲವು ಸಿನಿಮಾ, ಟಿ.ವಿ ಕಾರ್ಯಕ್ರಮಗಳಿದ್ದು ಹೆಚ್ಚಿನ ವಿಡಿಯೋ ನೋಡಬೇಕಾದರೇ ಚಂದಾದಾರಿಕೆ ಮಾಡುವುದು ಅವಶ್ಯವಾಗಿದೆ. ಆ ಮೂಲಕ ಸಬ್ ಸ್ಕ್ರೈಬ್ ಮಾಡುವುದರಿಂದ ಏನೆಲ್ಲಾ ಮನೋರಂಜನೆ/ಪ್ರಯೋಜನ ಪಡೆಯಬಹುದು ಎಂಬ ನೋಟವನ್ನು ಮಾತ್ರ ಇಲ್ಲಿ ನೀಡಲಾಗಿದೆ. ಉಚಿತವಾಗಿ ಬಳಕೆದಾರರು 5 ಸಿನಿಮಾ ಅಥವಾ ಜನಪ್ರಿಯ ಟಿ.ವಿ ಕಾರ್ಯಕ್ರಮಗಳ ಮೊದಲ ಎಪಿಸೋಡ್ ಅನ್ನು ವೀಕ್ಷಿಸಬಹುದು.
ಆದರೇ ಈ ಆಯ್ಕೆ ಕೇವಲ ಆ್ಯಂಡ್ರಾಯ್ಡ್ ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ಗಳಲ್ಲಿ ಲಭ್ಯವಾಗಲಿದ್ದು, ಐಓಎಸ್ (ಐಪ್ಯಾಡ್, ಐಫೋನ್) ಗಳಲ್ಲಿ ನಿರ್ಬಂಧಿಸಲಾಗಿದೆ. ಬಳಕೆದಾರರನ್ನು ನೆಟ್ ಫ್ಲಿಕ್ಸ್ ಆ್ಯಪ್ ಗೆ ಆಕರ್ಷಿಸುವುದು ಇದರ ಮೂಲ ಉದ್ದೇಶವಾಗಿದೆ.
ನೀವು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಉಚಿತ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು- https://www.netflix.com/in/watch-free.