Advertisement
ಈ ಜೋಡಿಯನ್ನು ಬೇರ್ಪಡಿಸುವುದು ಹೇಗೆ ಎಂದು ಎದುರಾಳಿ ತಂಡದ ನಾಯಕ ತನ್ನ ಬುದ್ಧಿಯನ್ನೆಲ್ಲ ಖರ್ಚು ಮಾಡುತ್ತಲೇ ಉಳಿಯುತ್ತಾನೆ. ಇನ್ನೊಂದೆಡೆ ರನ್ ಪ್ರವಾಹ ಹರಿದು ಬರುತ್ತಲೇ ಇರುತ್ತದೆ.
“ಅದು ಭಾರತ-ಆಸ್ಟ್ರೇಲಿಯ ನಡುವಿನ ಪಂದ್ಯ. ರೋಹಿತ್-ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರು. ನಾನು ಸ್ಕ್ವೇರ್‌ಲೆಗ್‌ನಲ್ಲಿ ನಿಂತಿದ್ದೆ. ಪಕ್ಕದಲ್ಲೇ ಆಸೀಸ್ ನಾಯಕ ಆರನ್ ಫಿಂಚ್ ಫೀಲ್ಡಿಂಗ್ ನಡೆಸುತ್ತಿದ್ದರು. ನನ್ನ ಬಳಿ ಬಂದ ಅವರು, ಇವರಿಬ್ಬರು ಊಹೆಗೂ ನಿಲುಕದ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ… ಎಂದು ನನ್ನನ್ನು ಮಾತಿಗೆಳೆದರು. ಬಳಿಕ ಈ ಜೋಡಿಯನ್ನು ಬೇರ್ಪಡಿಸುವುದು ಹೇಗೆ ಎಂದು ನನ್ನಲ್ಲೇ ಕೇಳಿದರು…’ ಎಂದು ಡ್ಯಾರನ್ ಗಾಫ್ ಅಂದಿನ ಘಟನೆಯನ್ನು ವಿವರಿಸುತ್ತ ಹೋದರು.ಬಳಿಕ ಗಾಫ್ ಆಸೀಸ್ ಕಪ್ತಾನನ ಬಳಿ ಹೇಳಿದರಂತೆ, “ನನಗೇ ಇಲ್ಲಿ ಸಾಕಷ್ಟು ಕೆಲಸ ಇದೆ. ಅವರನ್ನು ಹೇಗೆ ಔಟ್ ಮಾಡಬೇಕೆಂಬುದು ನಿಮ್ಮ ಜವಾಬ್ದಾರಿ. ಇದನ್ನು ನೀವೇ ನಿಭಾಯಿಸಬೇಕು…’
ಎಂದು.
Related Articles
ಆದರೆ ಇದು ಯಾವ ಪಂದ್ಯ ಎಂಬುದನ್ನು ಡ್ಯಾರನ್ ಗಾಫ್ ಹೇಳಿಲ್ಲ. ಆದರೆ ಇದೇ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯ ಎಂದು ಅಂದಾಜಿಸಬಹುದು. ಇದರಲ್ಲಿ ಡ್ಯಾರನ್ ಗಾಫ್ ಫೀಲ್ಡ್ ಅಂಪಾಯರ್ ಆಗಿದ್ದರು. ಈ ಮುಖಾಮುಖೀಯಲ್ಲಿ ರೋಹಿತ್ 119, ಕೊಹ್ಲಿ 89 ರನ್ ಬಾರಿಸಿದ್ದರು. ಇವರಿಬ್ಬರ 137 ರನ್ ಜತೆಯಾಟದ ನೆರವಿನಿಂದ ಭಾರತ 286 ರನ್ ಗುರಿಯನ್ನು ಮೂರೇ ವಿಕೆಟ್ ನಷ್ಟದಲ್ಲಿ ಯಶಸ್ವಿಯಾಗಿ ತಲುಪಿತ್ತು. ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿತ್ತು.
Advertisement