Advertisement

ರಿಮ್‌ ವೀಲ್‌ ಬೆಂಡ್‌ರಿಪೇರಿ ಹೇಗೆ?

04:33 PM Apr 05, 2019 | pallavi |
ಯರ್‌ ಅನ್ನು ದೃಢವಾಗಿ ಹಿಡಿದಿರುವುದು ರಿಮ್‌. ಕಾರುಗಳಲ್ಲಿ ಬೈಕ್‌ಗಳಲ್ಲಿ ಈ ರಿಮ್‌ ಇರುತ್ತದೆ. ಆಧುನಿಕ ವಾಹನಗಳಲ್ಲಿ ರಿಮ್‌ ಬದಲಿಗೆ ಅಲಾಯ್‌ ರಿಮ್‌ಗಳು ಬರುತ್ತವೆ. ಇವುಗಳು ಬೆಂಡ್‌ ಬಂದರೆ ರಿಪೇರಿ ತುಸು ಕಷ್ಟ. ಆದರೆ ಸ್ಟೀಲ್‌ ರಿಮ್‌ ಇದ್ದ ಸಂದರ್ಭದಲ್ಲಿ ಅವುಗಳನ್ನು ರಿಪೇರಿ ಮಾಡಲು ಸಾಧ್ಯವಿದೆ. ರಿಮ್‌ ಬೆಂಡ್‌ ಬಂದು ಓರೆಕೋರೆಯಾಗಿದ್ದರೆ, ಅಂತಹ ವಾಹನಗಳನ್ನು ಓಡಿಸುವುದು ಅಪಾಯಕಾರಿ. ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಟಯರ್‌ ಸವೆಯಬಹುದು. ಇಡೀ ರಿಮ್‌ಗೆ ಹಾನಿಯಾಗಬಹುದು. ಆದ್ದರಿಂದ ಬೈಕ್‌ ಮತ್ತು ಕಾರುಗಳಲ್ಲಿ ಸ್ಟೀಲ್‌ ರಿಮ್‌ ರಿಪೇರಿ ಹೇಗೆ ನೋಡೋಣ..
ಬೈಕ್‌ಗಳಲ್ಲಿ 
ಬೈಕ್‌ ಟಯರ್‌ ಪಂಕ್ಚರ್‌ ಆದಾಗ ಭಾರಕ್ಕೆ ಅಥವಾ ಟಯರ್‌ನಲ್ಲಿ ಗಾಳಿ ಕಡಿಮೆ ಇದ್ದು, ರಸ್ತೆ ಗುಂಡಿಗೆ ಬಿದ್ದಾಗ ರಿಮ್‌ಗಳು ಬೆಂಡ್‌ ಬರುತ್ತವೆ. ಅಲ್ಲದೇ ಹತ್ತಾರು ಸಾವಿರ ಕಿ.ಮೀ. ಕ್ರಮಿಸಿದ ಬಳಿಕವೂ ಬೆಂಡ್‌ ಬರುತ್ತವೆ. ಇಂತಹ ಸಂದರ್ಭಗಳಲ್ಲಿ ರಿಮ್‌ ಅನ್ನು ತೆಗೆದು ಅಲೈನ್‌ಮೆಂಟ್‌ ಮಾಡಿಸಬೇಕು. ಅಲೈನ್‌ಮೆಂಟ್‌ಗೆ ಎಲೆಕ್ಟ್ರಾನಿಕ್‌ ಮ್ಯಾನುವಲ್‌ ಎಂದಿದ್ದು, ಸಾಮಾನ್ಯವಾಗಿ ಮ್ಯಾನುವಲ್‌ ಆಗಿಯೇ ಬೆಂಡ್‌ ರಿಪೇರಿ ಮಾಡಲಾಗುತ್ತದೆ. ಸಾಮಾನ್ಯವಾದ ಬೆಂಡ್‌ ಆಗಿದ್ದರೆ, ವೀಲ್‌ ಅಲೈನ್‌ಮೆಂಟ್‌ ಸಾಧನದಲ್ಲಿಟ್ಟು ಹಿಂದಕ್ಕೂ ಮುಂದಕ್ಕೂ ತಿರುಗಿಸಿ ಬೆಂಡ್‌ ಎಲ್ಲಿದೆ ಎಂಬುದನ್ನು ನೋಡಿದರೆ ತೀವ್ರ ರೀತಿಯ ಬೆಂಡ್‌ ಆಗಿದ್ದರೆ ಫೈಬರ್‌ ಸುತ್ತಿಗೆಯಲ್ಲಿ ಹೊಡೆದು ಸರಿಪಡಿಸಲಾಗುತ್ತದೆ. ಬಳಿಕ ರಿಮ್‌ ಬೆಂಡ್‌ ಇರುವಲ್ಲಿ ನ್ಪೋಕ್‌ ಥೆÅಡ್‌ ಅನ್ನು ಬೇಕಾದರೆ ಬಿಗಿ ಪಡಿಸಿ, ಬೇರೆ ಕಡೆಗಳಲ್ಲಿ ಸಮತೋಲನಗೊಳಿಸಲಾಗುತ್ತದೆ.
ಕಾರುಗಳಲ್ಲಿ
ಕಾರುಗಳಲ್ಲಿಯೂ ಟಯರ್‌ನಿಂದ ರಿಮ್‌ ಅನ್ನು ಬೇರ್ಪಡಿಸಿ ಬೆಂಡ್‌ ತೆಗೆಯಲಾಗುತ್ತದೆ. ಕಾರ್‌ಗಳ ಬೆಂಡ್‌ ತೆಗೆಯಲು ಕೆಲವೊಮ್ಮೆ ಬಿಸಿ ಮಾಡುವ ವಿಧಾನ ಅನುಸರಿಸಲಾಗುತ್ತದೆ. ಈ ಕೆಲಸ ನಾಜೂಕಿನದು. ಒಂದು ವೇಳೆ ರಿಮ್‌ ಒಡೆದು ಹೋಗಿದ್ದಲ್ಲಿ, ಅದನ್ನು ಮತ್ತೆ ವೆಲ್ಡ್‌ ಮಾಡಿ ಅಥವಾ ಬೆಂಡ್‌ ತೆಗೆದು ಪ್ರಯೋಗಿಸುವುದು ಉತ್ತಮ ಆಯ್ಕೆಯಲ್ಲ. ಇದರಿಂದ ಪ್ರಯೋಜನವೂ ಇಲ್ಲ. ಆದ್ದರಿಂದ ಸಾಮಾನ್ಯ ಸೈಡ್‌ವಾಲ್‌ ಬೆಂಡ್‌ಗಳನ್ನು ಬಿಸಿ ಮಾಡಿ ತೆಗೆಯಲಾಗುತ್ತದೆ. ಇದಕ್ಕೆ ಮಷೀನ್‌ ಬಳಸುವ ಕ್ರಮವೂ ಇದೆ. ಇದನ್ನು ಪರಿಣತರೇ ಮಾಡಬೇಕಾಗುತ್ತದೆ. ರಿಮ್‌ ಬೆಂಡ್‌ ತೆಗೆದು ಬಳಿಕ ಸರಿಯಾಗಿದೆಯೇ ಎಂದು ಪರೀಕ್ಷಿಸಿ, ವೈಟ್‌ ಹಾಕಬೇಕು. ಟಯರ್‌ ಅಳವಡಿಸಿದ ಬಳಿಕ ಮತ್ತೂಮ್ಮೆ ಕೂಲಂಕಷ ಪರೀಕ್ಷೆ ನಡೆಸಬೇಕು.
   ಈಶ
Advertisement

Udayavani is now on Telegram. Click here to join our channel and stay updated with the latest news.

Next