Advertisement

ಚಿನ್ನ ಕೊಂಡರೆ ಸಾಲದು; ಚಿನ್ನದ ಒಡವೆಗಳ ಜೋಪಾನ ಹೇಗೆ!

03:37 PM Sep 15, 2018 | Sharanya Alva |

ಆಭರಣ ಧರಿಸುವುದರಿಂದ ನೈಸರ್ಗಿಕ ಸೌಂದರ್ಯ ಇನ್ನೂ ಶೋಭಿಸುತ್ತದೆ. ಭಾರತ ದೇಶದಲ್ಲಿರುವವರಿಗೆ ಚಿನ್ನದ ಮೇಲೆ ವಿಶೇಷವಾದ ವ್ಯಾಮೋಹವಿದೆ. ನಿಮಗೆಲ್ಲಾ ಚಿನ್ನದ ಆಭರಣವೆಂದರೆ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗೆ ಎಷ್ಟು ಚಿನ್ನದ ಒಡವೆ ಇದ್ದರೂ ಸಹ ಸಾಲದು. ಎಷ್ಟೇ ಬಡವರಿದ್ದರೂ ಇದ್ದದ್ದರಲ್ಲೇ ಹಣವನ್ನು ಕೂಡಿಟ್ಟುಕೊಂಡು ಚಿನ್ನದ ಒಡವೆ ಮಾಡಿಸಿಕೊಂಡೇ ಇರುತ್ತಾರೆ. ಚಿನ್ನದ ಒಡವೆಗಳನ್ನು ಕೊಂಡು ಬಿಟ್ಟರೆ ಮುಗಿದು ಹೋಗಲ್ಲ ಅವನ್ನು ದೀರ್ಘ‌ಕಾಲದವರೆಗೆ ಜಾಗೃತೆ ಇದ್ದು  ನೋಡಿಕೊಳ್ಳುವುದು ಅಷ್ಟೇ ಮುಖ್ಯ.

Advertisement

ಚಿನ್ನದ ಒಡವೆಗಳ ಜೋಪಾನ ಮಾಡುವಲ್ಲಿ ಕೆಲವು ವಿಧಾನಗಳನ್ನು ಅನುಸರಿಸಿದರೆ ಬಹಳ ಕಾಲದವರೆಗೆ ಅದರ ಅಂದವನ್ನು ಹಾಗೆಯೇ ಇಡಬಹುದು.

1. ಸ್ನಾನ ಮಾಡುವಾಗ ಚಿನ್ನದ ಒಡವೆಗಳನ್ನು ಧರಿಸಬೇಡಿ. ಸೋಪು ಚಿನ್ನಕ್ಕೆ ಹಾನಿಯುಂಟು ಮಾಡುವುದಿಲ್ಲ. ಅದರೆ ಅದು ಕೆಲವು ಕಣಗಳನ್ನು ಬಿಡುತ್ತದೆ. ಅದು ಚಿನ್ನದ ಹೊಳಪನ್ನು ಕ್ರಮೇಣ ಕಡಿಮೆ ಮಾಡುತ್ತದೆ.

2.ಇತರೇ ಕೃತಕ ಆಭರಣಗಳ ಜೊತೆ ಚಿನ್ನದ ಒಡವೆಗಳನ್ನು ಇಡಬೇಡಿ.

3.ಕ್ಲೋರಿನ್‌ಯುಕ್ತ ನೀರಿನಿಂದ ಚಿನ್ನದ ಒಡವೆಗಳನ್ನು ದೂರವಿರಿಸಿ. ಸಾರ್ವಜನಿಕ ಈಜುಕೊಳದಲ್ಲಿ ಈಜುವಾಗ ಚಿನ್ನದ ಒಡವೆಗಳನ್ನು ಧರಿಸಲೇ ಬೇಡಿ. ಯಾಕೆಂದರೆ ಈ ಈಜುಕೊಳಕ್ಕೆ ನೀರಿಗೆ ಕ್ಲೋರಿನ್‌ಯುಕ್ತ ಮಿಶ್ರಣ ಹಾಕುತ್ತಾರೆ. ಇದರಿಂದ ನಿಮ್ಮ ಚಿನ್ನದ ಒಡವೆಗಳು ಕ್ರಮೇಣ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ.

Advertisement

4.ಎಲ್ಲಾ ಒಡವೆಗಳನ್ನು ಒಂದೇ ಡಬ್ಬದಲ್ಲಿ ಹಾಕಿಡಬೇಡಿ. ಇದರಿಂದ ಒಡವೆಗಳು  ಹಾಳಾಗಬಹುದು. ಅದಷ್ಟು ಬೇರೆ-ಬೇರೆ ಡಬ್ಬಿಗಳಲ್ಲಿ ಹಾಕಿಟ್ಟರೆ ಉತ್ತಮ.

5.ಒಡವೆಗಳನ್ನು ಸಂಗ್ರಹಿಸಿಡುವಾಗ ಟಿಶ್ಯೂ ಪೇಪರ್‌ನಲ್ಲಿ ಸುತ್ತಿಟ್ಟರೆ ಅಷ್ಟು ಬೇಗ ಅವು ತಮ್ಮ ಹೊಳಪನ್ನು ಕಳೆದುಕೊಳ್ಳುವುದಿಲ್ಲ.

ಒಡವೆಗಳ ಸ್ವಚ್ಛಗೊಳಿಸಲು ಇಲ್ಲಿವೆ ಕೆಲವೊಂದು ಕ್ರಮಗಳು:

1. ಒಡವೆಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿರಿ. ಸೋಪಿನಿಂದ ಸ್ವಚ್ಛಗೊಳಿಸಬಹುದು .ಟೂತ್‌ ಬ್ರಶ್‌ನಿಂದ ತೊಳೆದರೆ ಒಳ್ಳೆಯದು ಒಡವೆಗಳ ಮೂಲೆ ಮೂಲೆಯಲ್ಲಿರುವ ಕೊಳೆಗಳು ಹೋಗಿ ಬಿಡುತ್ತವೆ.

2.ಗ್ರೀಸ್‌ನಿಂದ ಕೂಡ ಒಡವೆಗಳನ್ನು ಸ್ವಚ್ಛಗೊಳಿಸಬಹುದು.

3.ಅರಸಿನ ನೀರಿನಲ್ಲಿ ಒಡವೆಗಳನ್ನು ಒಂದು ತಾಸಿನವರೆಗೆ ನೆನೆಸಿಟ್ಟು ನಂತರ ಸೋಪಿನಿಂದ ತೊಳೆದರೆ ಚಿನ್ನ ಮೊದಲಿನಂತೆಯೇ ಹೊಳಪಾಗುತ್ತದೆ.

4.ತೀರಾ ಕಂದುಬಣ್ಣಕ್ಕೆ ತಿರುಗಿದ್ದರೆ ಚಿನ್ನವನ್ನು ತೊಳೆಯಲು ವೃತ್ತಿಪರರೇ ಇರುತ್ತಾರೆ ಅವರ ಹತ್ತಿರವೇ ಸ್ವತ್ಛಗೊಳಿಸಬಹುದು.

ಎಚ್ಚರಿಕೆ!

ದಿನನಿತ್ಯ ಹಾಕಿಕೊಳ್ಳುವ ಒಡವೆಗಳನ್ನು ಆಗಾಗ ನಾವು ಸ್ವಚ್ಛಗೊಳಿಸದಿದ್ದರೆ ಚರ್ಮರೋಗ ಬರುವ ಸಾಧ್ಯತೆ ಇರುತ್ತದೆ.

ಉದಾಹರಣೆ: ಕಿವಿಯೋಲೆಗಳನ್ನು ಬಹಳ ದಿನಗಳ ಕಾಲ ಸ್ವಚ್ಛಗೊಳಿಸದಿದ್ದರೆ ಕಿವಿಯ ಚರ್ಮಗಳೆಲ್ಲ ಸುಟ್ಟಂತೆ ಕಾಣುತ್ತದೆ.. ಅದೇ ಮುಂದೆ ಚರ್ಮದ ಕಾಯಿಲೆಗೂ ನಾಂದಿ ಹಾಕಬಹುದು. ಆದ್ದರಿಂದ ಒಡವೆಗಳನ್ನು ಸ್ವಚ್ಛಗೊಳಿಸುವುದು ಉತ್ತಮ ಮಾರ್ಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next