ಕ್ಯಾಲಿಫೋರ್ನಿಯಾ: ವಾಟ್ಸ್‌ಆ್ಯಪ್ ಕಂಪನಿ, ತನ್ನ ಬಳಕೆದಾರರಿಗೆ ತಮ್ಮ ವಾಟ್ಸ್‌ಆ್ಯಪ್ ಚಾಟ್ ಗಳನ್ನು ಶಾಶ್ವತವಾಗಿ ಗೌಪ್ಯವಾಗಿ ಸಂಗ್ರಹಿಸಿಡಲು “ಆರ್ಕೈವ್’ ಎಂಬ ಹೊಸ ಸೌಲಭ್ಯವನ್ನು ನೀಡಿದೆ. ಒಮ್ಮೆ ಆರ್ಕೈವ್ ಮಾಡಿದ ಚಾಟಿಂಗ್‌ನಲ್ಲಿ ಹೊಸ ಸಂದೇಶಗಳೂ ಗುಪ್ತವಾಗಿ ಸೇರಿಕೊಳ್ಳುತ್ತವೆ.
ಈ ಸೌಲಭ್ಯ ಬಳಸಲು, ನಿಮ್ಮ ವಾಟ್ಸ್‌ಆ್ಯಪ್ ನಲ್ಲಿ ನೀವು ಆರ್ಕೈವ್ ಮಾಡಲು ಉದ್ದೇಶಿಸಿರುವ ಒಂದು ಗ್ರೂಪ್ ಅಥವಾ ವ್ಯಕ್ತಿಯ ಚಾಟ್ ಮೇಲೆ ಬೆರಳನ್ನು ಒತ್ತಿ ಹಿಡಿಯುವ ಮೂಲಕ ಅದನ್ನು ಆಯ್ಕೆ ಮಾಡಿ. ಆಯ್ಕೆಯಾದ ನಂತರ, ಪರದೆಯ ಮೇಲ್ಫಾಗದಲ್ಲಿ ಮೂರು ಆಪ್ಷನ್ ಕಾಣಿಸುತ್ತವೆ.
ಅದರಲ್ಲಿ ಎಡದಿಂದ ಮೂರನೇ ಆಪ್ಷನ್ (ಕೆಳಗೆ ಚಾಚಿರುವ ಬಾಣದ ಗುರುತು) ಒತ್ತುವ ಮೂಲಕ ನೀವು ಆಯ್ಕೆ ಮಾಡಿದ ಚಾಟ್ ಅನ್ನು ಆರ್ಕೈವ್ ಮಾಡಬಹುದು. ನಿಮಗೆ ಬೇಕಾದಾಗ ಅದನ್ನು “ಅನ್-ಆರ್ಕೈವ್’ ಮಾಡಲೂಬಹುದು.
ಆಕ್ಷೇಪಾರ್ಹ ಕಂಟೆಂಟ್ ಡಿಲೀಟ್
ಈ ವರ್ಷದ ಆಗಸ್ಟ್‌ನಲ್ಲಿ ಗೂಗಲ್ ಬಳಕೆದಾರರಿಂದ ಬಂದ 35,191 ದೂರುಗಳ ಮೇರೆಗೆ 93,550 ಕಂಟೆಂಟ್‌ಗಳನ್ನು ಗೂಗಲ್ ಸೇವೆಗಳಿಂದ ತೆಗೆದುಹಾಕಲಾಗಿದೆ ಎಂದು ಗೂಗಲ್ ಕಂಪನಿಯೇ ತಿಳಿಸಿದೆ.
ಅದಲ್ಲದೆ, ತನ್ನ ಬಳಕೆದಾರರಿಂದ ಬಂದಿದ್ದ ಆಕ್ಷೇಪಗಳಿಗೆ ಅನುಸಾರವಾಗಿ 651,933 ಕಂಟೆಂಟ್ ಗಳನ್ನು “ಆಟೋಮೇಟೆಡ್ ಡಿಟೆಕ್ಷನ್’ ತಂತ್ರಜ್ಞಾನದ ಸಹಾಯದಿಂದ ಡಿಲೀಟ್ ಮಾಡಲಾಗಿದೆ. ಜುಲೈ ತಿಂಗಳಲ್ಲಿ 36,934 ದೂರುಗಳಿಗೆ ಅನುಗುಣವಾಗಿ 95,680 ಕಂಟೆಂಟ್‌ಗಳನ್ನು ಹಾಗೂ ವಿವಿಧ ಆಕ್ಷೇಪಗಳಿಗೆ ಅನುಗುಣವಾಗಿ 5,76,892 ಕಂಟೆಂಟ್‌ಗಳನ್ನು ತೆಗೆದುಹಾಕಲಾಗಿತ್ತು ಎಂದು ಕಂಪನಿ ತಿಳಿಸಿದೆ.