Advertisement
ಬೇಕಾಗುವ ಸಾಮಾಗ್ರಿಗಳು:ಚಿಕನ್ 1ಕೆ.ಜಿ, ಒಣಮೆಣಸು 13 ರಿಂದ 15 , ಗರಂ ಮಸಾಲ 1 ಚಮಚ, ಈರುಳ್ಳಿ4 ,ತೆಂಗಿನಎಣ್ಣೆ 1/2ಕಪ್, ಬೆಳ್ಳುಳ್ಳಿ 5 ಎಸಳು, ಚಕ್ಕೆ, ಲವಂಗ, ಏಲಕ್ಕಿ, ಸಾಸಿವೆ, ಕಾಳುಮೆಣಸು, ಅರಿಶಿನಪುಡಿ 1 ಚಮಚ, ಜೀರಿಗೆ 1ಚಮಚ, ಕೊತ್ತಂಬರಿ 2 ಚಮಚ, ಕರಿಬೇವು, ಉಪ್ಪು ರುಚಿಗೆ ತಕ್ಕಷ್ಟು.
ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಕೊತ್ತಂಬರಿ, ಜೀರಿಗೆ, ಗರಂಮಸಾಲೆ, ಕರಿಬೇವು, ಒಣಮೆಣಸು. ಅರಿಶಿನ ಪುಡಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಎರಡು ಮೂರು ನಿಮಿಷಗಳ ತನಕ ಹುರಿದಿಟ್ಟುಕೊಳ್ಳಿ.ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ ಈರುಳ್ಳಿಯನ್ನು ಹುರಿಯಿರಿ ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ತುಂಡು ಮಾಡಿಟ್ಟ ಚಿಕನ್ ಹಾಕಿ ಅದಕ್ಕೆ ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ, ನಂತರ ಸ್ವಲ್ಪ ನೀರನ್ನು ಹಾಕಿ ಬೇಯಿಸಿರಿ. ಮೊದಲು ಹುರಿದಿಟ್ಟ ಮಸಾಲೆ(ಕುಂದಾಪುರ ಚಿಕನ್ ಮಸಾಲ ಪೌಡರ್ ಸಿಗುತ್ತದೆ)ಯ ಜೊತೆಗೆ ತೆಂಗಿನಕಾಯಿ ತುರಿ ಜೊತೆಗೆ ಹುಳಿ ಹಾಕಿ ರುಬ್ಬಿರಿ. ನಂತರ ಬೇಯಿಸಿಟ್ಟ ಚಿಕನ್ಗೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿರಿ. ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಸಾಸಿವೆ, ಬೆಳ್ಳುಳ್ಳಿ,ಕರಿಬೇವು ಹಾಕಿ ಒಗ್ಗರಣೆ ಹಾಕಿದರೆ ಕುಂದಾಪುರ ಚಿಕನ್ ಸುಕ್ಕ ರೆಡಿ. ನೀರ್ ದೋಸೆ ಜೊತೆ ಸವಿಯಲು ಕುಂದಾಪುರ ಚಿಕನ್ ಸುಕ್ಕ ತುಂಬಾ ಸ್ವಾದಿಷ್ಟವಾಗಿ ಇರುತ್ತದೆ. ಒಂದು ಸಲ ಈ ರೆಸಿಪಿ ಮಾಡಿ ನೋಡಿ.