Advertisement

ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ ಮಾಡಿಕೊಳ್ಳೋದು ಹೇಗೆ?

10:16 AM May 20, 2018 | Team Udayavani |

ಬೇಸಿಗೆಯ ಬಿಸಿಯಿಂದ ಬಸವಳಿದಿದ್ದ ಇಳೆಯನ್ನು ತಂಪುಗೊಳಿಸಲು ಮಳೆಗಾಲ ಮೇ ಕೊನೆಯ ವಾರದಲ್ಲಿ ಆರಂಭಗೊಳ್ಳಲಿದೆ. ಆಗಾಗ ಬರುವ ಮಳೆ, ಮೋಡ ಮುಸುಕಿದ ವಾತಾವರಣ, ತಣ್ಣನೆಯ ಗಾಳಿ ಇರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿಡಬೇಕು. ಈ ಕಾಲದಲ್ಲಿ ಶೀತ, ನೆಗಡಿ, ಜ್ವರ ಸರ್ವೆಸಾಮಾನ್ಯ. ಮಳೆಗಾಲದಲ್ಲಿ ನೀರು ಕಲುಷಿತವಾಗುತ್ತದೆ ಸೋಂಕು ಬಹುಬೇಗ ಬರುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕಲುಷಿತ ನೀರಿನಿಂದ ಸೊಳ್ಳೆ ನೊಣಗಳ ಸಂಖ್ಯೆ ಹೆಚ್ಚಾಗುವುದು ಜೊತೆಗೆ ರೋಗಗಳು ಹರಡುತ್ತದೆ. ಕೆಲವು ಸರಳ ಉಪಾಯಗಳನ್ನು ನಮ್ಮದಾಗಿಸಿಕೊಂಡಲ್ಲಿ ಅನಾರೋಗ್ಯದಿಂದ ದೂರವಿರಬಹುದು.

Advertisement

1. ಸುತ್ತಮುತ್ತಲಿನ ಪರಿಸರ: ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ನಮ್ಮ ವಾಸ ಸ್ಥಳದ ಸುತ್ತಮುತ್ತ ನೀರು ನಿಂತಿದ್ದರೆ ಸೊಳ್ಳೆ ಮತ್ತು ನೊಣಗಳ ಉತ್ಪತ್ತಿಗೆ ಕಾರಣವಾಗಬಹುದು. ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಕಾಳಜಿ ವಹಿಸಿ. ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡದಂತೆ ನೋಡಿಕೊಳ್ಳಬೇಕು.

2. ಹೊರಗಡೆ ತಿನ್ನದಿರುವುದು: ಮಳೆಗಾಲದಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಕೆನ್ನುವುದು ಸಹಜ ಆದರೆ, ರಸ್ತೆ ಬದಿಯ ತಿಂಡಿಗಳನ್ನು ಈ ಸಮಯದಲ್ಲಿ ಆದಷ್ಟು ತಿನ್ನದಿರುವುದು ಉತ್ತಮ. ರಸ್ತೆ ಬದಿಯ ತಿಂಡಿಗಳಲ್ಲಿ ಬ್ಯಾಕ್ಟೀರಿಯಾ ಸೇರುವುದು ಹೆಚ್ಚು. 

3. ನೀರನ್ನು ಹೆಚ್ಚು ಕುಡಿಯಬೇಕು: ಮಳೆಗಾಲದಲ್ಲಿ ಬಾಯಾರಿಕೆಯಾಗದಿರುವುದರಿಂದ ತುಂಬ ಕಡಿಮೆ ನೀರು ಕುಡಿಯುತ್ತಾರೆ. ಆದರೆ, ಯಾವುದೇ ಕಾಲವಾಗಿರಲಿ ಆರೋಗ್ಯಕರವಾಗಿರಲು ಪ್ರತಿದಿನ 3ರಿಂದ 4 ಲೀ. ನೀರು ಕುಡಿಯಬೇಕು. ನೀರನ್ನು ಬಿಸಿ ಮಾಡಿ ಕುಡಿಯೊದು ಒಳ್ಳೆಯದು. ಕಷಾಯ, ಹರ್ಬಲ್ ಟೀ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. 

4:ಒದ್ದೆಯಾದರೆ ತಕ್ಷಣ ಸ್ನಾನ ಮಾಡಿ: ವಿಪರೀತ ಮಳೆಯ ಸಂದರ್ಭದಲ್ಲಿ ಒದ್ದೆಯಾಗುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಒದ್ದೆಯಾಗಿದೆ ಎಂದು  ಮೈ ಒರಿಸಿ ಸುಮ್ಮನೆ ಕೂರದೆ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.. ಇದರಿಂದ ಶೀತದಂತಹ ಸಾಮಾನ್ಯ ಕಾಯಿಲೆಯಿಂದ ದೂರವಿರಬಹುದು.

Advertisement

5. ಸೊಪ್ಪು ತರಕಾರಿ ಹೆಚ್ಚು ಸೇವನೆ: ಮಳೆಗಾಲದಲ್ಲಿ ಹಸಿರು ತರಕಾರಿ ಮತ್ತು ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಆರೋಗ್ಯದ ರಕ್ಷಣೆ ಸಾಧ್ಯವಿದೆ. ಮಾಂಸಹಾರ ಸೇವನೆ ಮಾಡುವುದಾದರೆ ತಾಜಾ ಮೀನು ಮಾತ್ರ ಕೊಳ್ಳುವುದು ಉತ್ತಮ. ತೇವಾಂಶದಲ್ಲಿ ಇಟ್ಟ ಮೀನು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

Advertisement

Udayavani is now on Telegram. Click here to join our channel and stay updated with the latest news.

Next