Advertisement

ಕಾರು ಎಸಿ ನಿರ್ವಹಣೆ ಹೇಗೆ?

03:26 PM May 04, 2018 | |

ತೀರದ ಸೆಕೆ. ಕಾರಿನ ಒಳಗಂತೂ ಎಸಿ ಇಲ್ಲದೆ ಕೂರೋದೇ ಕಷ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಎಸಿ ಹಾಕಿದರೂ ಕಾರಿನ ಒಳಗೆ ಸಾಕಷ್ಟು ಕೂಲ್‌ ಆಗುತ್ತಿಲ್ಲ ಎಂದು ನಿಮಗನಿಸಿದ್ದಲ್ಲಿ ಕಾರಿನ ಎಸಿ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕಾದ್ದು ಅತ್ಯಗತ್ಯ. ಮೊದಲನೆಯದಾಗಿ ನಿಮ್ಮ ಕಾರಿನಲ್ಲಿರುವ ಎಸಿಯನ್ನು ಬಳಸದೇ ಇರುವುದು ಒಳ್ಳೆಯದಲ್ಲ. ವಾರಕ್ಕೆ ಕನಿಷ್ಠ 10 ನಿಮಿಷವಾದರೂ ಎಸಿಯನ್ನು ಬಳಸುವುದರಿಂದ ಗ್ಯಾಸ್‌ ಪ್ರಶರ್‌ ಮತ್ತು ಕಂಪ್ರಸರ್‌ ಚೆನ್ನಾಗಿರಲು ಸಹಾಯವಾಗುತ್ತದೆ.

Advertisement

ನಿಮ್ಮ ಕಾರಿನ ಒಳಗೆ ಕಂಪ್ರಸರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಸಾಮಾನ್ಯ ಗಾಳಿಯೂ ಒಳಗೆ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ರಿಪೇರಿಗೆ ಹೋಗೋದೇ ಬೆಸ್ಟ್‌. ಇನ್ನು ತಂಪಾದ ಗಾಳಿ ಬರುತ್ತಿಲ್ಲ ಎಂದಾದರೆ ಅದಕ್ಕೆ ಕಾರಣ ಗ್ಯಾಸ್‌ ಕಡಿಮೆ ಇರುವುದು, ಎಸಿ ಫಿಲ್ಟರ್‌ ಬ್ಲಾಕ್‌ ಆಗಿರುವುದು ಕಾರಣವಾಗಿರಬಹುದು.

ಎಸಿ ಫಿಲ್ಟರ್‌ ಕ್ಲೀನಿಂಗ್‌ 
ನೀವು ಯಾವಾಗಲೂ ಎಸಿಯನ್ನು ಬಳಸುತ್ತೀರಿ ಎಂದರೆ ಸುಮಾರು 6ರಿಂದ 8 ತಿಂಗಳಿಗೊಮ್ಮೆ ಎಸಿ ಫಿಲ್ಟರನ್ನು ಅಥವಾ ಪ್ರತಿ ಸರ್ವೀಸ್‌ನಲ್ಲಿ ಫಿಲ್ಟರನ್ನು ಕ್ಲೀನ್‌ ಮಾಡಬೇಕು. ಕಾರಿನ ಡ್ಯಾಶ್‌ಬೋರ್ಡ್‌ ಕೆಳಗೆ ಅಥವಾ ಎಂಜಿನ್‌ ಭಾಗದಲ್ಲಿ ಈ ಎಸಿ ಫಿಲ್ಟರ್‌ ಇರುತ್ತದೆ. ಕಾರಿನ ಬಳಕೆಯ ಕೈಪಿಡಿಯನ್ನು ನೋಡಿದರೆ ಸಾಮಾನ್ಯವಾಗಿ ನಾವೇ ಈ ಫಿಲ್ಟರ್‌ ಅನ್ನು ಕ್ಲೀನ್‌ ಮಾಡಬಹುದು. ಫಿಲ್ಟರ್‌ನಲ್ಲಿ ವ್ಯಾಪಕವಾಗಿ ಧೂಳು ಕೂತಿದ್ದರೆ, ಕಾರಿನ ಒಳಗೆ ತಂಪಾದ ಗಾಳಿ ಬರುವುದಿಲ್ಲ ನೆನಪಿಡಿ.

ಎಸಿ ವೆಂಟ್‌ ಕ್ಲೀನ್‌
ಗಾಳಿ ಉತ್ತಮವಾಗಿ ಕಾರಿನೊಳಗೆ ಬರಲು ಕಾರಿನ ಎಸಿ ವೆಂಟ್‌ (ಗಾಳಿ ಬರುವ ಜಾಗ) ಶುಚಿಯಾಗಿರದೇ ಧೂಳು ಕೂತಿರುವುದೂ ಒಂದು ಕಾರಣ. ಈ ಕಾರಣ ಎಸಿಯನ್ನು ನಿಯಮಿತವಾಗಿಯಾದರೂ ಎಸಿ ಬಳಸುತ್ತಿರಬೇಕು. ಜತೆಗೆ ಎಸಿ ವೆಂಟ್‌ ಶುಚಿಗೊಳಿಸಲು ಎಸಿ ವೆಂಟ್‌ ಕ್ಲೀನರ್‌ ಫೋಮ್‌, ಪುಟ್ಟ ಬ್ರಷ್‌ ಸಿಗುತ್ತದೆ. ಇದರ ಮೂಲಕ ಶುಚಿಗೊಳಿಸಬಹುದು. ನಿಮಗೇ ಇದನ್ನು ಮಾಡಲು ಸಾಧ್ಯವಿಲ್ಲ ಎಂದಾದರೆ ಸರ್ವಿಸ್‌ನವರ ಬಳಿ ಹೇಳಿ ಮಾಡಿಸಬಹುದು.

ಎಸಿ ಗ್ಯಾಸ್‌ ಚೆಕಪ್‌
ಎಸಿ ಚೆನ್ನಾಗಿ ಕಾರ್ಯನಿರ್ವಹಿಸಲು ಗ್ಯಾಸ್‌ ಇರುವುದು ಅಗತ್ಯ. ಒಂದು ವೇಳೆ ಗ್ಯಾಸ್‌ ಸೋರಿಕೆಯಾಗುತ್ತಿದ್ದರೆ ಅಥವಾ ಗ್ಯಾಸ್‌ ಕಡಿಮೆ ಇದ್ದರೆ ಎಸಿ ಚೆನ್ನಾಗಿ ಕೆಲಸ ಮಾಡುವುದಿಲ್ಲ. ಎಸಿ ಗ್ಯಾಸ್‌ ಸುಮಾರು 2- 3 ವರ್ಷಗಳಷ್ಟು ಕಾಲಾವಧಿ ಬಾಳಿಕೆ ಬರುತ್ತದೆ. ಒಂದು ವೇಳೆ ಎಸಿ ಚೆನ್ನಾಗಿ ಕೆಲಸ ಮಾಡದೇ ಇದ್ದರೂ ಪರೀಕ್ಷಿಸುವುದು ಒಳ್ಳೆಯದು. ಎಸಿ ಗ್ಯಾಸ್‌ ಅನ್ನು ಸರ್ವೀಸ್‌ನವರ ಬಳಿ/ ಎಸಿ ರಿಪೇರಿಯವರ ತುಂಬಿಸುವುದು ಒಳ್ಳೆಯದು. ಒಂದು ಬಾರಿ ಗ್ಯಾಸ್‌ ತುಂಬಿಸಲು ಸುಮಾರು ಒಂದೂವರೆ ಸಾವಿರದಿಂದ ಎರಡೂವರೆ ಸಾವಿರ ರೂ. ವರೆಗೆ ದರ ವಿಧಿಸುತ್ತಾರೆ. 

Advertisement

 ಈಶ 

Advertisement

Udayavani is now on Telegram. Click here to join our channel and stay updated with the latest news.

Next