Advertisement
ನಾಳಿದ್ದು, ಡಿ. 31 ಕಡೆಯ ದಿನ ನೀವು ಆಧಾರ್ ಲಿಂಕ್ ಮಾಡಿಸದೇ ಇದ್ದರೆ ನಿಮ್ಮ ಪಾನ್ ಕಾರ್ಡ್ ಮುಂಬರುವ ತಿಂಗಳಿನಿಂದ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಾನ್ ನಿಷ್ಕ್ರಿಯಗೊಂಡರೆ ಬ್ಯಾಂಕ್ ವಹಿವಾಟು ಸೇರಿದಂತೆ ವಾಣಿಜ್ಯ ವ್ಯವಹಾರಗಳಿಗೆ ಸಮಸ್ಯೆಯಾಗಲಿದೆ.
ಹಂತ 1: https://www.incometaxindiaefiling.gov.in/home
Related Articles
Advertisement
ಹಂತ 3: ಅಲ್ಲಿ ಸೂಚಿಸಿದಂತೆ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 4: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಮುದ್ರಣವಾಗಿರುವ ಹೆಸರನ್ನು ಅಲ್ಲಿ ನಮೂದಿಸಬೇಕು
ಹಂತ 5: ಕೆಲವು ಆಧಾರ್ ಕಾರ್ಡ್‌ಗಳಲ್ಲಿ ಹುಟ್ಟಿದ ವರ್ಷ ಮಾತ್ರ ದಾಖಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಅಲ್ಲಿ ನೀಡಲಾಗಿರುವ ‘https://www.incometaxindiaefiling.gov.in’ ಬಾಕ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 6: ನೀವು ಮೆಲೆ ನೀಡಲಾದ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಮತ್ತೂಮ್ಮೆ ಪರೀಕ್ಷಿಸಿ, ಎಲ್ಲವೂ ಸರಿಯಾಗಿದ್ದರೆ “I agree to validate my Aadhar details with UIDAI’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 7: ಬಳಿಕ ಕೆಳಗೆ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಕೋಡ್ (ಸರಿಯಾಗಿ ಗಮನಿಸಿ ಇದು ಹಲವು ಕ್ಯಾಪ್ಸ್ ಮತ್ತು ಸ್ಮಾಲ್ ಲೆಟರ್‌ಗಳನ್ನು ಅಂಕಿಯೊಂದಿಗೆ ಒಳಗೊಂಡಿರುತ್ತದೆ) ಅನ್ನು ನಮೂದು ಮಾಡಿ.
ಹಂತ 8: ಬಳಿಕ ಕೆಳಗೆ ಕಾಣಿಸಿಕೊಳ್ಳುವ ಲಿಂಕ್ ಆಧಾರ್ ಮತ್ತು ಕ್ಯಾನ್ಸಲ್ ಎಂಬ ಬಟನ್‌ಗಳನ್ನು ಗಮನಿಸಿಸಿ, ಅಲ್ಲಿ ನೀವು ಲಿಂಕ್ ಆಧಾರ್ ಬಟನ್ ಮೆಲೆ ಕ್ಲಿಕ್ ಮಾಡಬೇಕು.
ಹಂತ: 9 ಕಡೆಯದಾಗಿ ನಿಮ್ಮಿಂದ ಮಾಹಿತಿಯನ್ನು ಪಡೆದು ಕೊಂಡ ವೆಬ್‌ಸೈಟ್ ಎಲ್ಲವೂ ಸರಿಯಾಗಿದೆ ಎಂದಾದ ಬಳಿಕ ‘Your Pan is already linked’ ಎಂಬ ಸಂದೇಶವನ್ನು ತೋರಿಸುತ್ತದೆ.
ಮೊಬೈಲ್‌ನಲ್ಲೇ ಲಿಂಕ್ ಮಾಡುವುದು ಹೇಗೆ?ನಿಮ್ಮ ಮೊಬೈಲ್‌ನಿಂದ ಎಸ್‌ಎಂಎಸ್ ಮೂಲಕ ಪಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಉದಾ: ನಿಮ್ಮ ಆಧಾರ್ ಸಂಖ್ಯೆ 111122224444 ಎಂದೂ, ಪಾನ್ ಕಾರ್ಡ್ ನಂಬರ್ AAAPA9999Q ಎಂದು ಇದೆ ಎಂದುಕೊಳ್ಳೋಣ. ನಿಮ್ಮ ಪೋನ್‌ನಿಂದ UIDPAN 111122224444 AAAPA9999Q ಎಂದು 567678 ಅಥವ 56161 ಸಂಖ್ಯೆಗೆ ಮೆಸೇಜ್ ಮಾಡಬಹುದಾಗಿದೆ. ಇದಕ್ಕೆ ನಿಮ್ಮ ನೆಟ್ ವರ್ಕ್ ಪೂರೈಕೆದಾರರ ಮೆಸೇಜ್ ದರ ಅನ್ವಯವಾಗಲಿದೆ.