Advertisement
ಕೆಲವು ವಾರಗಳ ಹಿಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡುವ ಕಡ್ಡಾಯ ಕಾನೂನಿನ ಬಗ್ಗೆ ವಿಸ್ತೃತವಾಗಿ ಕಾಕುವಿನಲ್ಲಿ ಬರೆಯಲಾಗಿತ್ತು. ಅದಲ್ಲದೆ ಲಿಂಕ್ ಮಾಡುವ ವಿಧಾನ ಹಾಗೂ ಆ ರೀತಿ ಮಾಡುವಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆಯೂ ವಿವರಣೆ ನೀಡಲಾಗಿತ್ತು.
Related Articles
Advertisement
ಅಲ್ಲಿ ಲಿಂಕ್ ಆಧಾರ ಗುಂಡಿ ಕ್ಲಿಕ್ ಮಾಡಿದಾಗ ಒಂದು ಕಿಟಕಿ ತೆರೆದುಕೊಳ್ಳುತ್ತದೆ. ಈ ಭಾಗದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಹಾಗೂ ಲಿಂಗದ ವಿವರ ತುಂಬಬೇಕು. ಅವುಗಳ ಕೆಳಗೆ ಬಿಟ್ಟ ಸ್ಥಳಗಳಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಅಲ್ಲೇ ಕಾಣಿಸುವ ಕಾಪ್ಷಾ ಕೋಡ್‌ಗಳನ್ನು ತುಂಬಬೇಕು. ಅವುಗಳನ್ನು ತುಂಬಿ ‘ಲಿಂಕ್ ಆಧಾರ್’ ಎನ್ನುವ ಗುಂಡಿ ಕ್ಲಿಕ್ ಮಾಡಿದರೆ ನಿಮ್ಮ ಆಧಾರನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಒಂದು ದೃಢೀಕರಣದ ಸಂಖ್ಯೆ ಬರುತ್ತದೆ. ಆ ಸಂಖ್ಯೆಯನ್ನು ಜಾಲತಾಣದಲ್ಲಿ ತುಂಬಬೇಕು. ಕೋಡ್ ತಾಳೆಯಾದರೆ ನಿಮ್ಮ ಮದುವೆ ಸಮಾರಂಭ ಮುಗಿದಂತೆಯೇ. ಆದರೆ ಲಿಂಗ, ಜನ್ಮ ದಿನಾಂಕ ಅಥವಾ ಹೆಸರಿನಲ್ಲಿ ಬಹಳಷ್ಟು ವ್ಯತ್ಯಾಸ ಇರುವ ಸಂದರ್ಭ ಈ ಸುಲಭ ವಿಧಾನ ಕೆಲಸ ಮಾಡದು. ಅಂತಹವರು ಈ ಮೊದಲೇ ಘೋಷಿಸಲಾದ ದೀರ್ಘ ಪದ್ಧತಿಯಾದ ಆಧಾರ್ ಅಥವಾ ಪ್ಯಾನ್ ಬದಲಾವಣೆಯ ಅಂತಿಮ ಪರಿಹಾರಕ್ಕೇ ಮೊರೆಹೋಗಬೇಕು. ಬೇರೆ ದಾರಿ ಇಲ್ಲ.
ಅಂತಿಮ ಪರಿಹಾರ: ಹೆಸರಿನ ಅಲ್ಪ ಸ್ವಲ್ಪ ಸಮಸ್ಯೆಯಲ್ಲದೆ ಲಿಂಗ, ಜನ್ಮ ದಿನಾಂಕ ಅಥವಾ ಸಂಪೂರ್ಣವಾದ ಬೇರೆಯೇ ಹೆಸರಿನ ಸಮಸ್ಯೆ ಇರುವವರಿಗೆ ಅಂತಿಮ ಪರಿಹಾರಾರ್ಥ ಅಧಾರನಲ್ಲಿ ಆ ವಿವರಗಳನ್ನು ಪ್ಯಾನ್ ದಾಖಲೆಯಂತೆಯೇ ತಿದ್ದುವುದು. (ಅಥವಾ ಪ್ಯಾನ್ ಕಾರ್ಡ್ ತಿದ್ದುವುದು) ಆಧಾರ್ ಕಾರ್ಡ್‌ನಲ್ಲಿ ಹೆಸರು/ಲಿಂಗ/ಜನ್ಮ ದಿನಾಂಕವನ್ನು ಬದಲಾಯಿಸಿಕೊಳ್ಳಲು ಆಧಾರ್ ಕಾರ್ಡ್‌ನ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ಅಥವಾ ಅದರ ಜಾಲತಾಣವಾದ www.uidai.gov.inಗೆ ಹೋಗಬೇಕು. ಆಧಾರ್ ಜಾಲತಾಣದ ಮುಖಪುಟದಲ್ಲಿಯೇ ‘update aadhaar details’ ಎಂಬ ಗುಂಡಿ ಇದೆ. ಅದನ್ನು ಒತ್ತಿದರೆ ಬಾಕಿ ಹೆಜ್ಜೆಗಳು ಸ್ವಯಂ ತೆರೆದುಕೊಳ್ಳುತ್ತವೆ. ನಿಮ್ಮ ಆಧಾರ ಸಂಖ್ಯೆ ನಮೂದಿಸಿ send OTP ಗುಂಡಿ ಒತ್ತಿದರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಫೋನ್‌ಗೆ ಒಂದು One Time Password ಬರುತ್ತದೆ. ಅದನ್ನು ನಮೂದಿಸಿ ಮುಂದುವರಿಯಬೇಕು. ಮುಂದಕ್ಕೆ ನಿಮಗೆ ಬೇಕಾದ ಬದಲಾವಣೆ ನಮೂದಿಸಬೇಕು, ಹೊಸ ಬದಲಾವಣೆಗೆ ಪೂರಕ ಪ್ಯಾನ್ ಕಾರ್ಡ್ ಅಥವಾ ಅನ್ವಯಿಸುವ ಇತರ ದಾಖಲೆಯ ಪ್ರತಿಯೊಂದಕ್ಕೆ ಸಹಿ ಹಾಕಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಬಳಿಕ ಈ ಸೇವೆಯನ್ನು ಯಾವ ಏಜೆನ್ಸಿ ಮಾಡಬೇಕೆನ್ನುವ ಆಯ್ಕೆ ನಮೂದಿಸಬೇಕು. ನಿಮ್ಮ ಕೋರಿಕೆ ಸ್ವೀಕೃತವಾಗಿ ನಿಮಗೆ ಒಂದು URN number ಕಾಣಿಸುತ್ತದೆ. ಅದು ಎಸ್ಸೆಮ್ಮೆಸ್ ಮೂಲಕವೂ ಬರುತ್ತದೆ. ಸುಮಾರು 15 ದಿನಗಳಲ್ಲಿ ನಿಮ್ಮ ಹೆಸರು ಬದಲಾವಣೆ ನಡೆಯುತ್ತದೆ. ಈ ಬಗ್ಗೆ ನಿಮಗೆ ಎಸ್ಸೆಮ್ಮೆಸ್ ಅಥವಾ ಇ-ಮೈಲ್ ಸೂಚನೆ ಬರಬಹುದು. ಯಾವುದಕ್ಕೂ ಬದಲಾವಣೆಯ ಬಗ್ಗೆ ಅಗಾಗ್ಗೆ ಜಾಲತಾಣದಲ್ಲಿ URN Number ಬಳಸಿ ಸ್ಟೇಟಸ್ ಚೆಕ್ ಮಾಡಿಕೊಂಡು ಇರುವುದು ಒಳ್ಳೆಯದು.
ಈ ವಿವಾಹ ಯಾಕೆ?: ತೆರಿಗೆ ಪಾವತಿಯಲ್ಲಿ ಯಾವುದೇ ಕಳ್ಳತನವಿಲ್ಲದೆ ಕಟ್ಟಬೇಕಾದ ತೆರಿಗೆಯನ್ನು ಜನಸಾಮಾನ್ಯರಿಂದ ಕಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಕೆಲಸ ಮಾಡುತ್ತಿದೆ. ಮುಂದೆ ಹೋದಂತೆ ಅದು ಇನ್ನಷ್ಟು ಕಠಿಣವಾಗುತ್ತಾ ಹೋಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಜಮಾನವೇ ಆಗಿದೆ. ಕರಕಟ್ಟುವವರು, ರಿಟರ್ನ್ ಫೈಲಿಂಗ್ ಮಾಡುವವರು ಹಾಗೂ ನಿರ್ದಿಷ್ಟ ಮೊತ್ತಕ್ಕಿಂತ ಜಾಸ್ತಿ ವ್ಯವಹಾರ ನಡೆಸುವವರು ತಮ್ಮ ಪ್ಯಾನ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವುದು ಈಗ ಹಳೆಯ ಮಾತು. ಪ್ಯಾನ್ ನಂಬರ್ ಮೂಲಕ ವ್ಯಕ್ತಿಯ ಕರ ಪಾವತಿ ಸಂಪೂರ್ಣವಾಗಿ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಕರ ಇಲಾಖೆಗೆ ಅನುಕೂಲವಾಗುತ್ತದೆ. ಆದರೆ ಒಂದೇ ವ್ಯಕ್ತಿ ಒಂದಕ್ಕಿಂತ ಜಾಸ್ತಿ ಪ್ಯಾನ್ ಕಾರ್ಡ್‌ನ್ನು ಪಡೆದಿದ್ದು, ಬೇರೆ ಬೇರೆ ನಂಬರುಗಳನ್ನು ಸಂದರ್ಭಾನುಸಾರ ಬೇರೆ ಬೇರೆ ವ್ಯವಹಾರಗಳಿಗೆ ನಮೂದಿಸಿ ಕರಕಳ್ಳತನ ಮಾಡುವುದನ್ನು ತಡೆಗಟ್ಟುವುದು ಹೇಗೆ? UIDAI ವತಿಯಿಂದ ನೀಡಲಾಗುವ ಆಧಾರ್ ಕಾರ್ಡ್ ಮಾತ್ರ ಒಬ್ಬ ವ್ಯಕ್ತಿಗೆ ಒಂದೇ ಒಂದು ಸಿಗಬಲ್ಲದು. ಇದಕ್ಕೆ ಕಾರಣವೆಂದರೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಾಗ ಅರ್ಜಿದಾರನ ಹತ್ತೂ ಬೆರಳುಗಳ ಅಚ್ಚು ಹಾಗೂ ಕಣ್ಣುಗಳ ಅಕ್ಷಿಪಟಲಗಳ ಭಾವ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ವಿಜ್ಞಾನದ ಪ್ರಕಾರ ಯಾವುದೇ ವ್ಯಕ್ತಿಯ ಬೆರಳಚ್ಚು ಹಾಗೂ ಅಕ್ಷಿಪಟಲಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಲುವುದು ಅಸಾಧ್ಯ. ಹಾಗಾಗಿ ಒಬ್ಬ ವ್ಯಕ್ತಿ ಒಂದೇ ಆಧಾರ್ ಹೊಂದುವುದು ಸಾಧ್ಯ. ಆದಕ್ಕಾಗಿಯೇ ಆಧಾರ್ ಕಾರ್ಡನ್ನು ಯೂನಿಕ್ ಅಥವಾ ವಿಶಿಷ್ಟ ಗುರುತಿನ ಚೀಟಿ ಎಂದು ಕರೆಯುತ್ತಾರೆ. ಇದೀಗ ಪ್ಯಾನ್ ಕಾರ್ಡನ್ನು ಆಧಾರ್ ಜೊತೆ ಜೋಡಣೆ ಮಾಡುವುದರಿಂದ ಒಬ್ಬ ವ್ಯಕ್ತಿ ಒಂದೇ ಪ್ಯಾನ್ ನಂಬರ್ ಹೊಂದಿರುವಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತಿದೆ.
ಇದೇ ಜೂನ್ 30ರ ಒಳಗಾಗಿ ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ತನ್ನ ಆಧಾರ್ ನಂಬರಿಗೆ ಜೋಡಿಸಿಕೊಳ್ಳುವುದು ಕಡ್ಡಾಯ. ಆ ದಿನಾಂಕದೊಳಗೆ ಈ ಜೋಡಣೆ ಕಾರ್ಯ ನಡಸದೇ ಇದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್‌ಗೆ ಬೆಲೆ ಇರುವುದಿಲ್ಲ. ಅದು ಇದ್ದರೂ ಇಲ್ಲದಿದ್ದಂತೆ. ಒಂದು ರೀತಿಯ ‘Invalid’ ಅಥವಾ ಅಸಿಂಧು ಸ್ಥಿತಿಯಲ್ಲಿ ಇರುತ್ತದೆ. ಪ್ಯಾನ್ ಕಾರ್ಡ್ ಇಲ್ಲದವರಿಗೆ ಅನ್ವಯವಾಗುವ ಎಲ್ಲ ಕಾನೂನುಗಳೂ ನಿಮಗೆ ಅನ್ವಯವಾಗತೊಡಗುತ್ತದೆ. ಹಾಗಾಗಿ ಇಲ್ಲಿ ನೀಡಿದ ಹೊಸ ಪದ್ಧತಿ ಮೂಲಕ ಒಂದು ಸುಲಭ ಸರಳ ವಿವಾಹಕ್ಕೆ ಈ ಕೂಡಲೇ ಕಂಕಣ ಕಟ್ಟಿರಿ.
– ಜಯದೇವ ಪ್ರಸಾದ ಮೊಳೆಯಾರ ; jayadev.prasad@gmail.com