Advertisement
ಇದಕ್ಕೆ ಬೇಕಾಗುವ ಜಾಗವೂ ಅತ್ಯಲ್ಪ. ಹೀಗಾಗಿ ಲಂಬವಾಗಿ ಬೆಳೆಯುವ ಬಳ್ಳಿ ತರಕಾರಿಗಳನ್ನು ಬೆಳೆಸಬಹುದು. ಬಾಲ್ಕನಿ ಗ್ರಿಲ್ಸ್‌ಗೆ ಈ ಬಳ್ಳಿಯನ್ನು ಹಬ್ಬಿಸಬಹುದು. ಬಾಲ್ಕನಿಯಲ್ಲಿ ಹಬ್ಬಿಸಬಹುದಾದ ಬಳ್ಳಿ ತರಕಾರಿಗಳಲ್ಲಿ ಸೀಮೆ ಬದನೆ ತರಕಾರಿಯೂ ಒಂದು. ಸ್ವಲ್ಪ ದೊಡ್ಡದಾದ ಕುಂಡದಲ್ಲಿ ಮೊಳಕೆ ಬಂದ ಸೀಮೆ ಬದನೆಕಾಯಿಯನ್ನು ಮಣ್ಣು ಮತ್ತು ಗೊಬ್ಬರ ಹಾಕಿ ಊರಬೇಕು. ಆಗಾಗ ಸ್ವಲ್ಪ ಸ್ವಲ್ಪ ನೀರುಣಿಸಿ. ಇದು ಹಂದರಕ್ಕೆ ಹಬ್ಬಿಸಬಹುದಾದ ಬಳ್ಳಿ. ಒಂದೇ ಒಂದು ಬಳ್ಳಿಯಲ್ಲಿ 60-70 ಕಾಯಿಯನ್ನು ಕೊಯ್ಯಬಹುದು. ರುಚಿಕರ ಸಾಂರ್ಬಾ, ಪಲ್ಯಕ್ಕೆ ಹೇಳಿ ಮಾಡಿಸಿದ ಈ ತರಕಾರಿ ನೀರಿನ ಅಂಶವನ್ನು ಜಾಸ್ತಿಹೊಂದಿರುತ್ತದೆ.
ಮಣ್ಣಿಗೆ ನೀವು ನಿಮ್ಮದೇ ಆದ ಸಾವಯವ ಗೊಬ್ಬರ ಮಾಡಿ ಸೇರಿಸಬಹುದು. ತರಕಾರಿ ಸಿಪ್ಪೆ, ಒಣಗಿದ ಎಲೆ, ಅದೃಷ್ಟವಿದ್ದರೆ ಬೀದಿಯಲ್ಲಿ ಹಸು ಹಾಕಿದ ಸೆಗಣಿ ಸಿಕ್ಕಿದರೆ ಸೇರಿಸಬಹುದು. ಹಾಗೆಯೇ ಒಳ್ಳೆಯ ಕುಂಡದಲ್ಲಿ ಹಾಕಿದರೆ ಮಣ್ಣು ತೇವಾಂಶ ಹಿಡಿದುಕೊಂಡು ಗಾಳಿ ಸಂಚಾರಕ್ಕೂ ಎಡೆ ಮಾಡಿಕೊಡಬಹುದು. ಬಳ್ಳಿಗೆ 2x2x1 ಅಡಿಯ ಕುಂಡವಿರಲಿ. ಮಳೆ ನೀರು ಕೊಯ್ಲು ಮಾಡಿಕೊಂಡರೆ ನೀರಿಗೇನೂ ಬರವಿರದು. ನೀರುಣಿಸುವಾಗ ಎಚ್ಚರಿಕೆ ವಹಿಸಿ. ಮಗ್ ಮೂಲಕ ಸ್ವಲ್ಪ ಸ್ವಲ್ಪ ಹಾಕಿ. ಜಾಸ್ತಿ ಹಾಕಿದರೆ ಅದು ಕುಂಡಕ್ಕಿರುವ ತೂತಿನ ಮೂಲಕ ಹೊರ ಹೋಗುವಂತಿರಬೇಕು. ಪಾತ್ರೆ, ಬಟ್ಟೆ ತೊಳೆದ ನೀರನ್ನೂ ಬಳಸಬಹುದು. ಬಾಲ್ಕನಿಯಲ್ಲಿ ಸಾಕಷ್ಟು ಸೂರ್ಯನ ಬೆಳಕು ಬರುವಂತಿರಬೇಕು. ಹಾಗೆಯೇ ನೆರಳು ಬೇಕಾದರೆ ಬಲೆ ಬಳಸಬಹುದು. ಬಾಲ್ಕನಿಯನ್ನು ಸ್ವತ್ಛವಾಗಿಟ್ಟುಕೊಳ್ಳಿ. ಹಾಗೆಯೇ ವಾಟರ್ ಪೂ›ಫ್ ಮಾಡಿಸಿ. ಈಗಂತೂ ಸಾವಯವ ಕೀಟನಾಶಕ ಲಭ್ಯ. ಹೀಗಾಗಿ ಅದನ್ನೇ ಬಳಸಬಹುದು.