Advertisement
ಫ್ಯುಯೆಲ್ ಪಂಪ್ ಶಬ್ದಕಾರಿನ ಇಗ್ನಿಶನ್ ಆನ್ ಆದ ಕೂಡಲೇ ಒಂದು ಸಣ್ಣ ಮೋಟರ್ ಚಾಲೂ ಆದ ರೀತಿಯ ಶಬ್ದ 2 ಸೆಕೆಂಡ್‌ಗಳ ಕಾಲ ಕೇಳಬಹುದು. ಈ ಶಬ್ದ ನಿಮಗೆ ಸರಿಯಾಗಿ ಕೇಳಿಸದಿದ್ದರೆ, ಕಾರಿನ ಎಲ್ಲ ಗಾಜುಗಳನ್ನು ಬಂದ್ ಮಾಡಿ ಕಾರಿನೊಳಗೆ ಕೂತು ಮತ್ತೆ ಇಗ್ನಿಶನ್ ಆನ್ ಮಾಡಿ. ಒಂದು ವೇಳೆ ಆಗಲೂ ಕೇಳಿಸದಿದ್ದರೆ ಫ್ಯುಯೆಲ್ ಪಂಪ್‌ನಲ್ಲಿ ದೋಷವಿದೆ ಎಂದರ್ಥ. ಫ್ಯುಯೆಲ್ ಪಂಪ್‌ನಲ್ಲಿ ರಿಲೀಫ್ ವಾಲ್ ಎಂದಿದ್ದು, ಇದು ಹಾಳಾದರೆ, ಎಂಜಿನ್‌ಗೆ ಹೆಚ್ಚು ಇಂಧನವನ್ನು ಪೂರೈಸುತ್ತದೆ. ಇದರಿಂದ ಮೈಲೇಜ್ ಕೊರತೆಯಾಗಬಹುದು. ಒಂದು ನಿರ್ದಿಷ್ಟ ವೇಗದಲ್ಲಿ ನೀವು ಹೋಗುತ್ತಿದ್ದರೆ, ಅಕ್ಸಲರೇಟರ್ ಹೆಚ್ಚು ಅದುಮದೆ ಇದ್ದರೂ ಏಕಾಏಕಿ ಕಾರು ಪಿಕಪ್ ಪಡೆದರೆ ಫ್ಯುಯೆಲ್ ಪಂಪ್ ಹಾಳಾಗಿ ಹೆಚ್ಚಿನ ಇಂಧನ ಪೂರೈಸುತ್ತಿದೆ ಎಂದರ್ಥ.
ಇಂಧನ ಪೈಪ್‌ನಲ್ಲಿ ಸಮಸ್ಯೆ, ಕಸ ಸಿಕ್ಕಿಹಾಕಿಕೊಂಡಿದ್ದರೆ, ಅವು ಗಳನ್ನು ಶುಚಿಗೊಳಿಸಬಹುದು. ಆದರೆ ಕಾರ್ಯವೆಸಗದೇ ಇದ್ದ ಸಂದರ್ಭಗಳಲ್ಲಿ ಅವುಗಳನ್ನು ಬದಲಾಯಿಸ ಬೇಕಾಗುತ್ತದೆ. ಫ್ಯುಯೆಲ್ ಪಂಪ್‌ಗ್ಳು ನಾಲ್ಕೈದು ವರ್ಷಕ್ಕೂ ಹೆಚ್ಚು ಬಾಳಿಕೆ ಬರುತ್ತವೆ. ಕಲಬೆರಕೆ, ಕೆಟ್ಟ ಇಂಧನದಿಂದ ಸಮಸ್ಯೆಯಾಗಬಹುದು. ಮೆಕ್ಯಾನಿಕ್‌ಗಳು ಇದನ್ನು ಬದಲಿಸಿಕೊಡಬಲ್ಲರು. ಫ್ಯುಯೆಲ್ ಪಂಪ್ ಹಾಳಾದರೆ ಏನಾಗುತ್ತದೆ?
ಫ್ಯುಯೆಲ್ ಪಂಪ್ ಹಾಳಾದರೆ ಪ್ರಮುಖವಾಗಿ ನಾಲ್ಕು ಸಮಸ್ಯೆಗಳು ಷ್ಟಿಯಾಗಬಹುದು.
Related Articles
ಸ್ವಲ್ಪ ಕಿಲೋಮೀಟರ್ ಓಡಿದ ಬಳಿಕ ಎಂಜಿನ್ ಸ್ಥಗಿತ (ಇಂಧನ ಸರಿಯಾಗಿ ಪೂರೈಕೆಯಾಗದೆ)
ಎಂಜಿನ್ ಸ್ಟಾರ್ಟ್ ಆಗಲು ಸಮಸ್ಯೆ
ಹೈವೇ ಚಾಲನೆ ವೇಳೆ ಎಂಜಿನ್ ಪವರ್‌ನಲ್ಲಿ ಸಮಸ್ಯೆ
Advertisement
ಏನು ಮಾಡಬೇಕು?ಫ್ಯುಯೆಲ್ ಪಂಪ್ ಹಾಳಾಗಿರುವುದನ್ನು ಕಂಡುಹುಡುಕಲು ಕೆಲವೊಂದು ವಿಧಾನಗಳಿವೆ.
ಇಂಧನ ಟ್ಯಾಂಕ್ ಪರಿಶೀಲಿಸಿ: ಒಂದು ವೇಳೆ ಕಾರು ಸ್ಟಾರ್ಟ್ ಆಗುತ್ತಿಲ್ಲ ಎಂದಾದರೆ ಮೊದಲು ಸಾಕಷ್ಟು ಇಂಧನ ಇದೆಯೇ ಎಂದು ಪರಿಶೀಲಿಸಿ. - ಈಶ