Advertisement

ಗೂಗಲ್ ನಲ್ಲಿ ಯಾವೆಲ್ಲಾ ಫೋಟೋ ಉಚಿತ, ಯಾವುದೆಲ್ಲಾ Copyright ಎಂದು ತಿಳಿಯುವುದು ಹೇಗೆ ?

08:30 PM Sep 13, 2020 | Mithun PG |

ನ್ಯೂಯಾರ್ಕ್: ಗೂಗಲ್ ನಲ್ಲಿ ಪ್ರತಿಯೊಬ್ಬರೂ ಕೂಡ ಫೋಟೋಗಳನ್ನು ಸರ್ಚ್ ಮಾಡುತ್ತಾರೆ. ಆದರೇ ಹಲವು ಬಾರಿ ಕಾಫಿರೈಟ್  ಹೊಂದಿರುವ ಚಿತ್ರಗಳೇ ಕಣ್ಣೆದುರಿಗೆ ರಾರಾಜಿಸುತ್ತಿರುತ್ತದೆ.  ಇದನ್ನು ತಡೆಗಟ್ಟಲೂ ಗೂಗಲ್ ಹೊಸ ಫೀಚರ್ ಒಂದನ್ನು ಜಾರಿಗೆ ತಂದಿದೆ.

Advertisement

ಗೂಗಲ್ ನಲ್ಲಿರುವ ಎಲ್ಲಾ ಫೋಟೋಗಳು ಕೂಡ ಉಚಿತವಲ್ಲ. ಕೆಲವೊಂದು ಚಿತ್ರಗಳ ಹಕ್ಕುಗಳನ್ನು ಪಡೆಯಬೇಕಾದರೆ ನೀವು ಹಣ ಪಾವತಿಸಬೇಕಾಗುತ್ತದೆ. ಉಚಿತವೆಂದು ಭಾವಿಸಿ ನೀವು ಯಾವುದಾದರೊಂದು ಲೈಸನ್ಸ್  ಹೊಂದಿರುವ ಚಿತ್ರ ಬಳಸಿಕೊಂಡರೇ ಅದು ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಮತ್ತು ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ.

ಗೂಗಲ್ ಹೊಸ ಫೀಚರ್, ಇನ್ನು ಮುಂದೆ ಯಾವೆಲ್ಲಾ ಚಿತ್ರಗಳು ಕಾಫಿರೈಟ್ ಹೊಂದಿದೆ. ಯಾವುದು ಉಚಿತವಾಗಿದೆ ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಈ ಮೂಲಕ ಗೂಗಲ್ ಫೋಟೋಗಳ ಬಳಕೆಯನ್ನು ಇನ್ನಷ್ಟು ಸುಗಮವಾಗಿಸಿದೆ.

ಉಚಿತ ಫೋಟೋಗಳನ್ನು ಹೇಗೆ ಪಡೆಯುವುದು?

  • ಗೂಗಲ್ ನಲ್ಲಿ ನೀವು ಪ್ರತಿಬಾರಿ ಸರ್ಚ್ ಮಾಡಿದಂತೆ ಈಗಲೂ ಕೂಡ ಯಾವುದಾರೊಂದು ವಿಷಯವನ್ನು ಹುಡುಕಾಡಿ.
  • ಸರ್ಚ್ ಬಾರ್ ನಲ್ಲಿ ಕಾಣುವ ಇಮೇಜ್ ಆಯ್ಕೆಯನ್ನು ಒತ್ತಿ.
  • ಪಕ್ಕದಲ್ಲಿ ಫೀಲ್ಟರ್ ಮೆನುವಿನಲ್ಲಿರುವ Tools ಆಯ್ಕೆಯನ್ನು ಕ್ಲಿಕ್ ಮಾಡಿ.
  • ಇದೀಗ Usage Rights ಎಂಬ ಆಯ್ಕೆ ಗೋಚರಿಸುತ್ತದೆ. ಇಲ್ಲಿ ಮತ್ತು 2 ಆಯ್ಕೆಗಳಿವೆ, ಕ್ರಿಯೆಟಿವ್ ಕಾಮನ್ ಲೈಸನ್ಸ್ ಹಾಗೂ ಕಮರ್ಷಿಯಲ್ ಮತ್ತು ಇತರೆ ಲೈಸನ್ಸ್.
  • ಕ್ರಿಯೆಟಿವ್ ಕಾಮನ್ ಲೈಸನ್ಸ್ ಕ್ಲಿಕ್ ಮಾಡಿದರೇ ಉಚಿತ ಪೋಟೋಗಳು ಕಾಣಸಿಗುತ್ತದೆ.
Advertisement

ಈ ಫೀಚರ್ ಬಳಸದಿದ್ದರೇ ಗೂಗಲ್ ಉಚಿತ ಮತ್ತು ಲೈಸನ್ಸ್ ಎರಡು ಫೋಟೋಗಳನ್ನು ಒಮ್ಮೆಲೆ ತೋರಿಸುತ್ತದೆ. ಮಾತ್ರವಲ್ಲದೆ ಇದರೊಂದಿಗೆ ‘images may be subject to copyright’ ಎಂಬ ಅಂಶವನ್ನು ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next