Advertisement

PDF ಫೈಲ್‌ ಎಡಿಟ್‌ ಮಾಡುವ ಬಗೆ

08:20 PM Dec 08, 2019 | Lakshmi GovindaRaj |

ಪಿಡಿಎಫ್(Portable document format) ಫೈಲ್‌ ಕುರಿತು ನೀವು ಕೇಳಿರಬಹುದು. ಯಾವುದೇ ಬರಹ, ಚಿತ್ರಗಳ ಪ್ರತಿ, ಲೈಸೆನ್ಸ್‌, ಆಧಾರ್‌ ಮುಂತಾದ ದಾಖಲೆಗಳನ್ನೂ ಪಿ.ಡಿ.ಎಫ್ ಮಾದರಿಯಲ್ಲಿ ಸಂರಕ್ಷಿಸಿ ಇಟ್ಟುಕೊಳ್ಳಬಹುದು. ಅಡೋಬ್‌ ರೀಡರ್‌ ಸಾಫ್ಟ್ವೇರನ್ನು ಅಳವಡಿಸಿಕೊಂಡರೆ ಪಿಡಿಎಫ್ ದಾಖಲೆಗಳನ್ನು ಕಂಪ್ಯೂಟರ್‌ನಲ್ಲೂ ಓದಬಹುದು, ಮೊಬೈಲ್‌ನಲ್ಲೂ ಓದಬಹುದು ಎನ್ನುವುದು ಅದರ ಹೆಗ್ಗಳಿಕೆ. ಎಲ್ಲಕಿಂತ ದೊಡ್ಡ ಉಪಯೋಗ ಏನೆಂದರೆ, ಪಿಡಿಎಫ್ ದಾಖಲೆಯನ್ನು ಸುಲಭವಾಗಿ ತಿದ್ದಲು ಆಗದೇ ಇರುವುದು.

Advertisement

ಹೀಗಾಗಿ ಒಮ್ಮೆ ಸೇವ್‌ ಮಾಡಿದ ಡಾಟಾ ಬದಲಾವಣೆ ಆಗಿರಬಹುದು ಎನ್ನುವ ಆತಂಕವಿಲ್ಲ. ಇತರೆ ಫಾರ್ಮ್ಯಾಟ್‌(ಮೈಕ್ರೋಸಾಫ್ಟ್ ವರ್ಡ್‌) ದಾಖಲೆಗಳಾದರೆ ಕೈ ಬದಲಾಗುವಾಗ ಕೀಪ್ರಸ್‌ ಆಗಿ ಉದ್ದೇಶಪೂರ್ವಕವಲ್ಲದೆ ಬದಲಾವಣೆ ಆಗಿರುವ ಸಾಧ್ಯತೆ ಇರುವುದಿಲ್ಲ. ಹಾಗಿದ್ದೂ ಅನೇಕ ವೇಳೆ ಪಿ.ಡಿ.ಎಫ್ ಫೈಲನ್ನು ಎಡಿಟ್‌ ಮಾಡಬೇಕಾದ ಸಂದರ್ಭಗಳು ಒದಗಿಬರುವುದುಂಟು. ಅಂಥ ತುರ್ತಿನ ಸಂದರ್ಭದಲ್ಲಿ ಎಡಿಟ್‌ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

– ಪಿ.ಡಿ.ಎಫ್ ಫೈಲನ್ನು ಅಡೋಬ್‌ ಆಕ್ರೋಬ್ಯಾಟ್‌ ರೀಡರ್‌ ಸಾಫ್ಟ್ವೇರ್‌ನಲ್ಲಿ ತೆರೆಯಿರಿ.
– ಬಲಗಡೆ “ಎಡಿಟ್‌ ಪಿ.ಡಿ.ಎಫ್’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿ.
– ನೀವು ಬದಲಾಯಿಸಬೇಕೆಂದಿರುವ ಟೆಕ್ಸ್ಟ್(ಪಠ್ಯ)ವನ್ನು ಸೆಲೆಕ್ಟ್ ಮಾಡಿ.
– ಸೆಲೆಕ್ಟ್ ಮಾಡಿದ ಪಠ್ಯವನ್ನು ನಿಗದಿತ ಜಾಗದಲ್ಲಿ ಟೈಪ್‌ ಮಾಡಿ ಇಲ್ಲವೇ ಕಾಪಿ ಪೇಸ್ಟ್‌ ಮಾಡಿ. ಆ ಪದಗಳ ಗಾತ್ರಕ್ಕೆ ತಕ್ಕಂತೆ ಮುಂದಿನ ಪಠ್ಯದ ಭಾಗ(ಅಲೈನ್‌ಮೆಂಟ್‌) ಹೊಂದಿಕೊಂಡು ಕೂರುವುದು.

ಬದಲಾವಣೆಯ ಪಠ್ಯ ದೀರ್ಘ‌ವಾಗಿದ್ದಂಥ ಸಂದರ್ಭಗಳಲ್ಲಿ, ಈ ಮಾದರಿಯ ಎಡಿಟ್‌ ಸೂಕ್ತವೆನಿಸದು. ಪಠ್ಯಗಳ ಸಾಲು ಒಂದರ ಮೇಲೊಂದು ಕೂರುವುದೋ ಇಲ್ಲವೇ, ಯಾವ ಯಾವುದೋ ಜಾಗಗಳಲ್ಲಿ ಸೇರಿಕೊಳ್ಳುವುದೋ ಆಗುವ ಸಾಧ್ಯತೆ ಇರುತ್ತದೆ. ಆದರೆ ಸಣ್ಣಪುಟ್ಟ ಬದಲಾವಣೆಗಳನ್ನು ಯಾವುದೇ ತೊಂದರೆಯಿಲ್ಲದೆ ಮಾಡಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next