Advertisement
ಪೌರತ್ವ ತಿದ್ದುಪಡಿ ಕಾಯಿದೆ ವಿವಿಧ ಆಯಾಮಗಳಲ್ಲಿ ಕಾವೇರುತ್ತಿದೆ. ಕೆಲವರು ಇದು ಧರ್ಮಾಧಾರಿತ ವಿಭಜನೆಗೆ ಕಾರಣವಾಗಿದೆ ಎಂದರೆ ಇನ್ನೂ ಕೆಲವರು ಚಾರಿತ್ರಿಕ ಮತ್ತು ಎಂದೋ ಆಗಬೇಕಾಗಿದ್ದ ಮಸೂದೆಯೆಂದರು. ಅಭಿಪ್ರಾಯ ಭೇದ ಸಹಜ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯ ಕೂಡಾ. ಆದರೆ ಈ ನಿಟ್ಟಿನಲ್ಲಿ ಇತ್ತೀಚಿನ ಕೆಲವು ಅಭಿಪ್ರಾಯಗಳನ್ನು ಗಮನಿಸಿದರೆ ಸಾಗುತ್ತಿರುವ ದಾರಿಯ ಬಗ್ಗೆ ಭಯ ಮತ್ತು ಗೊಂದಲಗಳು ಮೂಡುತ್ತಿವೆ.
Related Articles
Advertisement
ಜಾರಿ ಅನಿವಾರ್ಯವಾದಾಗ ಪ್ರತಿಭಟನೆ ತಣ್ಣಗಾಯಿತು. ಆದರೆ ಕೇಬಲ್ ಸಂಪರ್ಕ ಒದಗಿಸುವವರ ಏಕಸ್ವಾಮ್ಯ ಮುಂದುವರಿಯಿತು. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಕೇಬಲ್ ಬಳಕೆದಾರರ ಹಿತದೃಷ್ಟಿಯಿಂದ ಬಳಕೆದಾರರಿಗೆ ಒದಗಿಸಬೇಕಾದ ಉಚಿತ ಸಂಪರ್ಕಗಳ ಸಂಖ್ಯೆ, ವಿಧಿಸಬಹುದಾದ ಗರಿಷ್ಠ ಶುಲ್ಕ ಇತ್ಯಾದಿಗಳ ಬಗ್ಗೆ ನಿಯಮಗಳನ್ನು ರೂಪಿಸಿತು. ಇಲ್ಲಿಯೂ ಸರ್ಕಾರ ಬಳಕೆದಾರರಿಗೆ ಹೆಚ್ಚಿನ ಭಾರವನ್ನು, ಹಿಂದಿ ಭಾಷೆಯನ್ನು ಹೇರುವ ತಂತ್ರ ಎಂದೆÇÉಾ ಕಲ್ಪಿತ ಪ್ರಚಾರ ಮಾಡಿದ್ದನ್ನು ಕಾಯಿದೆಯ ಬಗ್ಗೆ ಸರಿಯಾಗಿ ಅಥೆìçಸಿಕೊಳ್ಳುವ ಪ್ರಯತ್ನ ಮಾಡದೆ, ಪೂರೈಕೆದಾರರು ಹೇಳಿದಷ್ಟನ್ನೇ ನಂಬಿ, ಸರ್ಕಾರದ ವಿರುದ್ಧವೆ ಟೀಕೆ ಮಾಡುವ ಹಾಗೂ ತಮಗೆ ಬೇಕಾದ ಚಾನೆಲ್ ಪಡೆಯಲು ಪಾವತಿಸಬೇಕಾದ ಮೊತ್ತವನ್ನು ಪರಿಶೀಲಿಸುವ ಗೋಜಿಗೆ ಹೋಗದೆ, ಸಂಪರ್ಕ ಒದಗಿಸುವವರು ಹೇಳಿದಷ್ಟು ಪಾವತಿಸುವ ಬುದ್ದಿವಂತರ ಸಂಖ್ಯೆ ದೊಡ್ಡದೇ ಇದೆ.
ಆಧಾರ್ ಜಾರಿಗೊಳಿಸಿದಾಗ ಆಕ್ಷೇಪಿಸಿದರು. ಸಬ್ಸಿಡಿ ಮುಂತಾದ ಸರ್ಕಾರಿ ಯೋಜನೆಗಳಿಗೆ ಇದನ್ನು ಕಡ್ಡಾಯ ಮಾಡಿದಾಗ ಇನ್ನಿಲ್ಲದಂತೆ ಗದ್ದಲವೆಬ್ಬಿಸಿದರು. ಇದರಿಂದ ಸರ್ಕಾ ರಕ್ಕಾದ ಉಳಿತಾಯದ ಬಗ್ಗೆ ಯಾರೂ ಉಸಿರೆತ್ತಲಿಲ್ಲ. ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್ ಇಟ್ಟುಕೊಂಡು ಎಷ್ಟೆಷ್ಟೋ ಬ್ಯಾಂಕ್ ಖಾತೆ ತೆರೆದರು. ತೋರಿಕೆಗೊಂದಿಷ್ಟು ಲೆಕ್ಕ, ಅದಕ್ಕೆ ತೆರಿಗೆ, ಹೆಚ್ಚಿನ ಪಾಲು ತೆರಿಗೆಯಿಲ್ಲದ ವ್ಯವಹಾರ. ಇದು ತಪ್ಪೆಂದ ಸರ್ಕಾ ರವನ್ನು ದೂಷಿಸಿದರು, ಸರಿಯಾಗಿ ತೆರಿಗೆ ಕಟ್ಟುವವರು ಸರಕಾರದ ಕ್ರಮವನ್ನು ಮೆಚ್ಚಿಕೊಂಡರು. ಇದೀಗ ಭೂಮಿ ಖರೀದಿ, ಮಾರಾಟದ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಮಾಡುವ ಮೂಲಕ ಬೇನಾಮಿ ವ್ಯವಹಾರಕ್ಕೆ ಅಂಕುಶ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಳ್ಳ ವ್ಯವಹಾರ ಮಾಡುವವರು ಚಡಪಡಿಸಿದರು. ಪ್ರಾಮಾಣಿಕರು ಮೆಚ್ಚಿಕೊಂಡರು.
ಜನೌಷಧಿ ಯೋಜನೆ ತರುವ ಮೂಲಕ ಬಡವರಿಗೆ ಸುಲಭ ದರದಲ್ಲಿ ಔಷಧಿ ದೊರೆಯುವಂತೆ ಮಾಡಿದರೆ, ಇದರಿಂದ ಬಾಧಿತರಾಗುವ ಮಧ್ಯವರ್ತಿಗಳು ಗುಣಮಟ್ಟದ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿಸಿದರು. ಇದರ ಹಿಂದಿನ ಹುನ್ನಾರ ಅರ್ಥ ಮಾಡಿಕೊಳ್ಳದವರು ಪ್ರಚಾರವಷ್ಟೇ ನಂಬಿ ದೂರವುಳಿದರೆ, ಸ್ವಲ್ಪ ತಲೆ ಓಡಿಸಿದವರು ಯೋಜನೆಯ ಪ್ರಯೋಜನ ಪಡೆದರು.
ರಸ್ತೆ ಸುಂಕ ವಸೂಲು ಗುತ್ತಿಗೆ ಪಡೆದ ಸಂಸ್ಥೆಗಳು ಇದನ್ನೂ ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆಂದರೆ, ಎÇÉಾ ವ್ಯವಹಾರಗಳನ್ನು ನಗದಾಗಿಯೇ ಮಾಡುವ ಮೂಲಕ ವಸೂಲಾದ ಮೊತ್ತಕ್ಕೆ ಸರಿಯಾದ ಲೆಕ್ಕಪತ್ರವಿಡದೆ, ನಷ್ಟವಾಗಿದೆಯೆಂದು ಹೇಳಿ ಒಂದೆಡೆ ಸಾಲ ನೀಡಿದ ಬ್ಯಾಂಕಿಗೆ ವಂಚಿಸುವುದು ಮಾತ್ರವಲ್ಲದೆ, ಒಟ್ಟು ವಿನಿಯೋಗಿಸಿದ ಮೊತ್ತದ ಹಲವು ಪಟ್ಟು ವಸೂಲಾದರೂ ಸುಂಕ ವಸೂಲಿ ಮುಂದುವರಿಸುವುದು ನಡೆಯುತ್ತದೆ. ಹೀಗೆ ಸಾರ್ವಜನಿಕರಿಗೂ ಮೋಸವಾಗುವುದನ್ನು ಸರಿಪಡಿಸಲು ಫಾಸ್ಟಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ನಿಖರವಾದ ಲೆಕ್ಕ ಸಿಗುವುದರಿಂದ ಯಾವುದೇ ರೀತಿಯ ವಂಚನೆ ಸಾಧ್ಯವಿಲ್ಲ. ಆದರೆ ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದ ಗ್ರಾಹಕರು, ಇಂತಹ ವ್ಯವಸ್ಥೆಯ ದೋಷಗಳನ್ನೇ ಎತ್ತಿ ಸರಕಾರದ ಮೇಲೆ ದೋಷಾರೋಪ ಮಾಡುತ್ತಾರೆ.
– ಮೋಹನದಾಸ ಕಿಣಿ, ಕಾಪು