Advertisement

ಮಿಸ್ಡ್ ಕಾಲ್‌ಕೊಟ್ಟು ಬ್ಯಾಲೆನ್ಸ್‌ ನೋಡಿ

12:42 PM Mar 15, 2018 | |

ಭವಿಷ್ಯ ನಿಧಿ ಖಾತೆ (ಇಪಿಎಫ್ಒ)ಯಲ್ಲಿ ಖಾತೆಯಲ್ಲಿನ ಮೊತ್ತ ಮತ್ತು ಇತರ ವಿವರಗಳನ್ನು ನೋಡುವುದು ಈಗಾಗಲೇ ಸುಲಭವಾಗಿದೆ. ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ ಈ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿದೆ.

Advertisement

ಏನು ಮಾಡಬೇಕು?
011 22901406 ಈ ಸಂಖ್ಯೆಗೆ ಮಿಸ್ಡ್ ಕಾಲ್‌ ಕೊಡಿ. – ಎರಡು ಬಾರಿ ರಿಂಗ್‌ ಆದ ತಕ್ಷಣ ಅದು ಡಿಸ್ಕನೆಕ್ಟ್ ಆಗುತ್ತದೆ.

7738299899; ಈ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಿ

ಯಾವ ರೀತಿ?
* EPFOHO UAN ಎಂದು ಎಸ್‌ಎಂಎಸ್‌ ಟೈಪ್‌ ಮಾಡಿ, ಸಂದೇಶ ಕಳುಹಿಸಿ
*10 ಭಾಷೆಗಳು- ಕನ್ನಡ, ಇಂಗ್ಲಿಷ್‌ ಸೇರಿದಂತೆ ಹತ್ತು ಭಾಷೆಗಳಲ್ಲಿ ಮಾಹಿತಿ
* ಕನ್ನಡ ಬೇಕಿದ್ದರೆ  EPFOHO UAN KAN ಎಂದು ಎಸ್‌ಎಂಎಸ್‌ ಕಳುಹಿಸಿ
* ಯುಎಎನ್‌ನಲ್ಲಿ ಅಪ್‌ಡೇಟ್‌ ಆಗಿರುವ ಮೊಬೈಲ್‌ ನಂಬರ್‌ನಿಂದ ಖಾತೆಯಲ್ಲಿರುವ ಮಾಹಿತಿ ಬರುತ್ತದೆ.
* ಸ್ಮಾರ್ಟ್‌ಫೋನ್‌ ಅಲ್ಲದೇ ಇರುವ ಫೋನ್‌ಗಳಿಂದಲೂ ಈ ಸೌಲಭ್ಯ ಪಡೆಯಬಹುದು

ಏನಿದು ಯುಎಎನ್‌(UAN)
*ಯುನಿವರ್ಸಲ್‌ ಅಕೌಂಟ್‌ ನಂಬರ್‌ ಎನ್ನುವುದು ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ)ಯಿಂದ ನೀಡಲಾಗಿರುವ ನಿಗದಿತ ಸಂಖ್ಯೆ. ಇದರಿಂದಾಗಿ ಉದ್ಯೋಗಿಯೊಬ್ಬ ಮತ್ತೂಂದು ಸಂಸ್ಥೆಗೆ ಸೇರಿಕೊಂಡರೂ ಆತನ ಭವಿಷ್ಯ ನಿಧಿ ಖಾತೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

Advertisement

*ಈಗಾಗಲೇ ನಿಗದಿತ ಉದ್ಯೋಗಿಯ ಖಾತೆ ಆಧಾರ್‌, ಪ್ಯಾನ್‌, ಬ್ಯಾಂಕ್‌ ಖಾತೆಗೆ ನೋಂದಣಿಯಾಗಿದ್ದಲ್ಲಿ ಅವರಿಗೆ ಮೊಬೈಲಲ್ಲಿ ಮಾಹಿತಿ ಲಭ್ಯವಾಗುತ್ತದೆ. 

*ಅದಕ್ಕೆ ಯುಎಎನ್‌ನಲ್ಲಿ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಆಗಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next